ಜಿಲ್ಲೆ

ಬಿಜೆಪಿ ಮಂಡಲ ನೂತನ ಪದಾಧಿಕಾರಿಗಳ ಆಯ್ಕೆ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ಪಟ್ಟಣದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಬುಧವಾರ ನಗರ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಬಿಜೆಪಿ ನಗರ ಮಂಡಲದ ಅಧ್ಯಕ್ಷ ಎನ್.ವಿ.ಪರಮೇಶ್ವರಯ್ಯ ಅವರ ನೇತೃತ್ವದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಗರ ಮಂಡಲದ ನೂತನ ಉಪಾಧ್ಯಕ್ಷರಾಗಿ ಭೀಮನಗರ ಬಡಾವಣೆಯ ವಕೀಲ ಎನ್.ಬಸವರಾಜು, ಆನಂದ ಜ್ಯೋತಿ ಕಾಲನಿ ನಿವಾಸಿ ಗೋಪಾಲ್, ಉಪ್ಪಾರ ಮೋಳೆ ಬಡಾವಣೆಯ ಚಂದ್ರು, ದಕ್ಷಿಣ ಬಡಾವಣೆಯ ಮಣಿಕಂಠಪ್ರಸಾದ್, ಬಸ್ತೀಪುರ ಬಡಾವಣೆಯ ಚನ್ನಮಲ್ಲು, ಮಠದ ಬೀದಿಯ ಮಹಾದೇವ ಪ್ರಸಾದ್ ಆಯ್ಕೆಯಾದರು.

ಕಾರ್ಯದರ್ಶಿಗಳಾಗಿ ಉಪ್ಪಾರಮೋಳೆ ಬಡಾವಣೆಯ ಮಂಜು, ಮುಡಿಗುಂಡ ಬಡಾವಣೆಯ ಹನುಮಂತ, ಬಸ್ತೀಪುರ ಬಡಾವಣೆಯ ಶಿವಪ್ರಸಾದ್ (ಪರಶಿವ), ಲಿಂಗಣಾಪುರ ಬಡಾವಣೆಯ ಕಿರಣ್, ಪೀಸ್‌ಪಾರ್ಕ್ ರಸ್ತೆಯ ನಿವಾಸಿ ಜೆ.ಸಂಪತ್, ಸಿ.ಕೆ.ಎಂ. ರಸ್ತೆಯ ನಿವಾಸಿ ಉತ್ತಮ್ ಆಯ್ಕೆಯಾದರು. ಖಜಾಂಚಿಯಾಗಿ ಬಸವೇಶ್ವರ ನಗರದ ನಿವಾಸಿ ದಿನೇಶ್ ಗುಪ್ತ ನೇಮಕಗೊಂಡರು. ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕವಿತಾ ಹಾಗೂ ಎಸ್. ಸುಂದ್ರಪ್ಪ ಆಯ್ಕೆಯಾದರು.

ರೈತ ಮೋರ್ಚಾ ಅಧ್ಯಕ್ಷರಾಗಿ ಮುಡಿಗುಂಡ ಬಡಾವಣೆಯ ಪಿ.ಸುರೇಶ್, ಎಸ್.ಟಿ. ಮೋರ್ಚಾ ಅಧ್ಯಕ್ಷರಾಗಿ ಮುಡಿಗುಂಡ ನಂಜುಂಡನಾಯ್ಕ, ಎಸ್.ಸಿ. ಮೋರ್ಚಾದ ಅಧ್ಯಕ್ಷರಾಗಿ ಭೀಮನಗರ ಬಡಾವಣೆಯ ಸಿದ್ದಪ್ಪ ಹಾಗೂ ಯುವ ಮೋರ್ಚಾ ಅಧ್ಯಕ್ಷರಾಗಿ ಕಾವೇರಿ ರಸ್ತೆಯ ಪಿ.ಆನಂದ್ ಅವರನ್ನು ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು.