ಜಿಲ್ಲೆ

ಕಾವೇರಿ ನದಿಯಲ್ಲಿ ಯುವಕನ ಶವ ಪತ್ತೆ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ತಾಲೂಕಿನ ಬೂದಗಟ್ಟೆ ದೊಡ್ಡಿಯ ಗ್ರಾಮದ ಕಾವೇರಿ ನದಿಯಲ್ಲಿ ಗುರುವಾರ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಮೈಸೂರಿನ ವಸಂತನಗರ ಬಡಾವಣೆಯ ಸಾಗರ್(23) ಮೃತರು. ಜು.17 ರಂದು ಕೆಲಸ ಹುಡುಕಿಕೊಂಡು ಬರುವುದಾಗಿ ಮನೆಯಿಂದ ಹೋದ ಸಾಗರ್, ಎರಡು ದಿನವಾದರೂ ಮನೆಗೆ ಬಾರದ ಕಾರಣ, ಪಾಲಕರು ಯುವಕನ ಪತ್ತೆಗಾಗಿ ಆಲನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಶವ ಪತ್ತೆಯಾದ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೂದಗಟ್ಟೆ ದೊಡ್ಡಿ ಗ್ರಾಮದ ರಸ್ತೆ ಬದಿಯಲ್ಲಿ ನಿಂತಿದ್ದ ಅಪರಿಚಿತ ಬೈಕ್ ಪರಿಶೀಲಿಸಿದಾಗ ಮೃತ ಸಾಗರ್ ಮಾಹಿತಿ ದೊರೆತಿದೆ. ನಂತರ ಪೊಲೀಸರು ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.