ಜಿಲ್ಲೆ

ಕರ್ನಾಟಕ ಸ್ನೇಹ ಸಮಾಜ ವೇದಿಕೆ ಉದ್ಘಾಟನೆ

ಕೊಳ್ಳೇಗಾಲ: ಪಟ್ಟಣದ ಕೃಷಿ ಮಾರುಕಟ್ಟೆ ಬಳಿ ಭಾನುವಾರ ಕರ್ನಾಟಕ ಸ್ನೇಹ ಸಮಾಜ ವೇದಿಕೆ ಜಿಲ್ಲಾ ಘಟಕವನ್ನು ಉದ್ಘಾಟಿಸಲಾಯಿತು.

ಯುವ ಮುಖಂಡ ಪುನೀತ್ ಮಾತನಾಡಿ, ಸಂಘಟನೆ ಮೂಲಕ ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು. ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ಹೇಳಿದರು. ಸಂಘದ ಜಿಲ್ಲಾ ಅಧ್ಯಕ್ಷ ಎಂ.ಮಲ್ಲಿಕಾರ್ಜುನ್ ಮಾತನಾಡಿ, ಸರ್ಕಾರದ ಸೌಲಭ್ಯಗಳಿಂದ ವಂಚಿತರಾದವರಿಗೆ ಸೂಕ್ತ ನ್ಯಾಯ ಒದಗಿಸಿ, ತಳಮಟ್ಟದಲ್ಲಿ, ಕಡು ಬಡತನದಲ್ಲಿ ಇರುವವರನ್ನು ಮೇಲೆ ಎತ್ತುವುದು ನಮ್ಮ ಸಂಘದ ಗುರಿಯಾಗಿದೆ. ಈ ದಿಸೆಯಲ್ಲಿ ರಾಜ್ಯದ ಎಲ್ಲ ಕಡೆಯೂ ಸಂಘದ ಏಳಿಗೆಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.

ವೇದಿಕೆ ಜಿಲ್ಲಾ ಘಟಕದ ಉಪಾಧ್ಯಕ್ಷ ಸಮೀವುಲ್ಲಾ ಷರೀಫ್, ಎನ್.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಾಂತಮೂರ್ತಿ, ಪದಾದಿ ಕಾರಿಗಳಾದ ಸುನಂದಾ, ಆರ್.ನಾಗರಾಜು, ಖಜಾಂಚಿ ಎಸ್.ಲಿಂಗರಾಜು, ಸಹ ಖಜಾಂಚಿ ಎ.ಪ್ರಭಾಕರ್, ವೆಂಕಟರಾಜು, ಲೆಕ್ಕ ಪರಿಶೋಧಕ ಎಸ್.ಎಂ. ಶ್ರೇಯಸ್, ಸಹ ಲೆಕ್ಕ ಪರಿಶೋಧಕ ಬಿ.ಸಿದ್ದರಾಜು, ಪದಾಧಿಕಾರಿಗಳು, ಸದಸ್ಯರು ಇದ್ದರು.