ಕೊಳ್ಳೇಗಾಲ: ಪಟ್ಟಣದ ಮಾಜಿ ಶಾಸಕ ಬಾಲರಾಜು ನಿವಾಸದಲ್ಲಿ ಗುರುವಾರ ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ದೀನ ದಯಾಳ್ ಉಪಾಧ್ಯಾಯ ಅವರ 108ನೇ ಜನ್ಮ ದಿನವನ್ನು ಆಚರಿಸಲಾಯಿತು.
ದೀನ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ ಪುಷ್ಪಾರ್ಚನೆ ಸಲ್ಲಿಸಿ ಮಾತಣಾಡಿ, ಉಪಾಧ್ಯಾಯ ಅವರ ವಿಚಾರಗಳು ಸಾರ್ವಕಾಲಿಕ ಸತ್ಯ. ಅವುಗಳನ್ನು ಮೈಗೂಡಿಸಿಕೊಂಡರೆ ದೇಶದ ಅಭಿವೃದ್ಧಿ ಸಾಧ್ಯ. ಅವರು ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರಲ್ಲಿ ದೇಶಪ್ರೇಮ ಮೂಡಿಸಲು ಶ್ರಮಿಸಿದರು ಎಂದರು.
ಸೌತ್ ಸೆಂಟ್ರಲ್ ರೈಲ್ವೆ ಸದಸ್ಯ ಹಾಗೂ ನಿಕಟಪೂರ್ಣ ಒಬಿಸಿ ಜಿಲ್ಲಾಧ್ಯಕ್ಷ ನಟರಾಜೇಗೌಡ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಜಿಲ್ಲಾ ಉಪಾಧ್ಯಕ್ಷ ರೇವಣ್ಣ, ಜಿಲ್ಲಾ ಕಾರ್ಯದರ್ಶಿ ಸೋಮಣ್ಣ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಒಬಿಸಿ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್, ಭಗತ್ ಸತ್ಯ, ಮೋಳೆ ವರದರಾಜು, ಮುಳ್ಳೂರು ಪ್ರಭು, ಮುಖಂಡ ವಕೀಲ ರಾಜೇಂದ್ರ, ಕೆಂಪನಪಾಳ್ಯ ಸಿದ್ದರಾಜು ಮತ್ತಿತರಿದ್ದರು.