ಕೊಳ್ಳೇಗಾಲ: ಬಾಂಗ್ಲಾ ದೇಶದಲ್ಲಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ಹಿಂದು ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ದೇವಲ ಮಹರ್ಷಿ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಸಾಗಿ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಸಮಾವೇಶಗೊಂಡರು. ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ಅಮಾನುಷವಾಗಿ ದೌರ್ಜನ್ಯ ನಡೆಯುತ್ತಿದೆ. ಬದುಕು ಕಟ್ಟಿಕೊಳ್ಳಲು ಹೋದ ಹಿಂದುಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಸಂಚುಕೋರರು ಹಿಂದುಗಳನ್ನು ಟಾರ್ಗೆಟ್ ಮಾಡಿಕೊಂಡು ಪೈಶಾಚಿಕ ಕೃತ್ಯ ನಡೆಸುತ್ತಿದ್ದಾರೆ. ಹಾಗಾಗಿ ಹಿಂದುಗಳ ರಕ್ಷಣೆ ಆಗಬೇಕಿದೆ. ಮುಂದೆ ದೇಶದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಹಿಂದುಗಳ ಮೇಲಿನ ದೌರ್ಜನ್ಯ ತಡೆಗೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.
ರಮೇಶ್ ಮುರಾರಿ, ಸತ್ತೇಗಾಲ ಹ್ಯಾಂಡ್ ಪೋಸ್ಟ್ ರವಿಶಂಕರ್, ಎನ್.ವಿ.ಪರಮೇಶ್ವರಯ್ಯ, ಬೂದಿತಿಟ್ಟು ಶಿವಕುಮಾರ್, ಸಿದ್ದಪ್ಪಾಜಿ, ಭೃಂಗೀಶ್ ಕಟ್ಟೆ, ಸೋಮಣ್ಣ ಉಪ್ಪಾರ್, ಕೆ.ಕೆ.ಮೂರ್ತಿ, ಜಗದೀಶ್ ಶಂಕನಪುರ, ಡೇರಿ ಗಿರೀಶ್, ನಗರಸಭೆ ಸದಸ್ಯ ಪರಮೇಶ್, ವಕೀಲ ರಾಜೇಂದ್ರ, ಮಧುಚಂದ್ರ, ಆರ್‌ಎಸ್‌ಎಸ್ ಶಿವಕುಮಾರ್, ಬಜರಂಗ ದಳದ ನವೀನ್, ಸುಶೀಲಾ ಶಾಂತರಾಜು, ಮಮತಾ ಬದ್ರಿನಾಥ್, ರಾಜಶೇಖರ ಮೂರ್ತಿ, ಆನಂದ್ ಇದ್ದರು.