ಜಿಲ್ಲೆ

ಸಿದ್ದಯ್ಯನಪುರದಲ್ಲಿ ವಿಜೃಂಭಣೆಯ ಉತ್ಸವ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ಆಷಾಢ ಮಾಸದ ಎರಡನೇ ಶುಕ್ರವಾರ ಹಿನ್ನೆಲೆಯಲ್ಲಿ ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಪರಿಶಿಷ್ಟ ಜನಾಂಗ ವತಿಯಿಂದ ಶ್ರೀ ಕುರುಬನ ಕಟ್ಟೆ ಕಂಡಾಯ ಹಾಗೂ ಬಸವೇಶ್ವರ, ಬೊಮ್ಮೇಶ್ವರ ಸತ್ತಿಗೆಗಳ ಉತ್ಸವ ವಿಜೃಂಭಣೆಯಿಂದ ನೆರವೇರಿತು.

ಗ್ರಾಮದ ಹೊರವಲಯದಲ್ಲಿರುವ ಬ್ರಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಂಡಾಯ, ಸತ್ತಿಗೆಗಳನ್ನು ಶುಚಿಗೊಳಿಸಿ, ಹೂ-ಹೊಂಬಾಳೆ ಧರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಮೆರವಣಿಗೆ ಮೂಲಕ ಗ್ರಾಮದೊಳಗೆ ಉತ್ಸವವನ್ನು ಕರೆತರಲಾಯಿತು. ಈ ವೇಳೆ ಕಂಡಾಯ ಮತ್ತು ಸತ್ತಿಗೆಗೆ ಜನರು ಹೂ, ಹಣ್ಣು-ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.

ಉತ್ಸವದ ಹಿನ್ನೆಲೆ ಗ್ರಾಮವನ್ನು ತಳಿರು ತೋರಣ ಹಾಗೂ ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು. ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಎಸ್.ಜಯಣ್ಣ, ಸಿದ್ದಯ್ಯನಪುರ ಗ್ರಾಮದ ದೊಡ್ಡ ಯಜಮಾನ ಚಾಮರಾಜು, ಯಜಮಾನರಾದ ಸಿ.ಎಂ.ಮಹದೇವ, ಮಾದಯ್ಯ, ಸಿದ್ದಪ್ಪ, ಮಹದೇವ, ಲಕ್ಷಣಮೂರ್ತಿ, ಮಾದಪ್ಪ, ಮಹದೇವ, ಕಾಂತರಾಜು, ಲಿಂಗರಾಜು, ಮಹೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.