ಕೊಳ್ಳೇಗಾಲ: ಪಟ್ಟಣದ ಆನಂದಜ್ಯೋತಿ ಕಾಲನಿಯಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ 3 ಮಳಿಗೆಗಳ ಪೊಲೀಸ್ ಉಪಾಧೀಕ್ಷಕ ಎಂ.ಧಮೇಂದ್ರ ನೇತೃತ್ವದ ತಂಡ ಭಾನುವಾರ ದಾಳಿ ನಡೆಸಿದ್ದು, ಸುಮಾರು 37 ಕೆ.ಜಿ. ಗೋಮಾಂಸವನ್ನು ವಶಪಡಿಸಿಕೊಡು ಮೂವರನ್ನು ಬಂಧಿಸಿದ್ದಾರೆ.
ಪಟ್ಟಣದ ನಿವಾಸಿಗಳಾದ ಸಂತೋಷ್, ಅಲ್ಲಾ ಬಾಕಾಸ್ ಕುರೆಸಿಯಾ, ರಸುಲ್ಲಾ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಆಧರಿಸಿದ ಡಿವೈಎಸ್ಪಿ ಎಂ.ಧಮೇಂದ್ರ, ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಮಹೇಶ್ ಕುಮಾರ್ ಹಾಗೂ ಸಿಬ್ಬಂದಿ ತಂಡ ಹಿರಿಯ ಪಶು ವೈದ್ಯಾಧಿಕಾರಿ ಶಿವಕುಮಾರ್ ಸಮ್ಮುಖದಲ್ಲಿ ಆನಂದ ಜ್ಯೋತಿ ಕಾಲನಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗೊಮಾಂಸ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ. ಸಂತೋಷ್ ಎಂಬುವರ ಮಳಿಗೆಯಲ್ಲಿ 9 ಕೆಜಿ, ಅಲ್ಲಾ ಬಾಕಾಸ್ ಕುರೆಸಿಯಾ ಎಂಬುವರ ಮಳಿಗೆಯಲ್ಲಿ 8 ಕೆಜಿ, ರಸುಲ್ಲಾ ಎಂಬುವರ ಮಳಿಗೆಯಲ್ಲಿ 20 ಕೆ.ಜಿ. ಸೇರಿ ಒಟ್ಟು 37 ಕೆ.ಜಿ ಗೋಮಾಂಸ ವನ್ನು ವಶಕ್ಕೆ ಪಡೆದಿದ್ದಾರೆ. ಮಾಂಸ ಕಡಿದು ಮಾರಾಟ ಮಾಡಲು ಬಳಸಿದ್ದ ಸಲಕರಣೆಗಳನ್ನು ವಶಕ್ಕೆ ಪಡೆಯ ಲಾಗಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಮುಂದಿನ ಕ್ರಮ ಕೈ ಗೊಂಡಿದ್ದಾರೆ.