ಕೊಳ್ಳೇಗಾಲ: ಪಟ್ಟಣದ ಶ್ರೀ ಗುರುಮಲ್ಲೇಶ್ವರ ಶಾಲೆಯಲ್ಲಿ ಮುಂಬರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಮಟ್ಟದ ಚುನಾವಣೆ ಸಂಬಂಧ ಸಮಾಜದ ಮುಖಂಡರ ಸಭೆ ನಡೆಯಿತು.
ಸಭೆಯಲ್ಲಿ ಜು.21 ಕ್ಕೆ ತಾಲೂಕು ಸಂಘದ ಅಧ್ಯಕ್ಷ ಸ್ಥಾನ ಸೇರಿದಂತೆ 13 ಸಾಮಾನ್ಯ ನಿರ್ದೇಶಕ ಸ್ಥಾನ, 7 ಮಹಿಳಾ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಪ್ರಕ್ರಿಯೆ ಬಗ್ಗೆ ಸುದೀಘವಾಗಿ ಚರ್ಚಿಸಲಾಯಿತು. ಈ ವೇಳೆ ಸಮಾಜದ ಮುಖಂಡರು ಒಗಟ್ಟು ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಎಲ್ಲರೂ ಸೇರಿ ಮಾಡಬೇಕಿದೆ. ಈ ಹಿನ್ನಲೆ ಜೂ.4 ರಂದು 3 ಗಂಟೆ ಬಳಿಕ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಲಿದೆ. ಅಂದೇ ಸಮಾಜದ ಮುಖಂಡರೆಲ್ಲರೂ ಸಭೆ ಸೇರಿ ಒಮ್ಮತದಿಂದ ಅಧ್ಯಕ್ಷರು, ನಿರ್ದೇಶಕರ ಅಯ್ಕೆ ಮಾಡೋಣ ಎಂದು ತೀರ್ಮಾನ ಕೈಗೊಂಡರು.
ಅಖಿಲ ಭಾರತ ವೀರ ಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಮೂಡ್ಲಪುರ ನಂದೀಶ್, ಉಪಾಧ್ಯಕ್ಷ ತೋಟೇಶ್, ತಾಲೂಕು ಅಧ್ಯಕ್ಷ ಬಿ.ಮಹದೇವಪ್ರಸಾದ್ , ಕಾರ್ಯದರ್ಶಿ ಬಾಲಸುಬ್ರಮಣ್ಯಂ ಸ್ವಾಮಿ, ನಿರ್ದೇಶಕರಾದ ಮಂಜುನಾಥ್, ವೀರಭದ್ರಸ್ವಾಮಿ ಹಾಗೂ ತೋಟದ ಗೀರಿಶ್, ಬಸವರಾಜಪ್ಪ, ಬೃಂಗೇಶ್ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.