ಕೊಳ್ಳೇಗಾಲ: ಪಟ್ಟಣದ ಮಾನಸ ಎಜುಕೇಶನಲ್ ಟ್ರಸ್ಟ್ ನಿಸರ್ಗ ವಿದ್ಯಾನಿಕೇತನ ಶಾಲೆಯಲ್ಲಿ ಶುಕ್ರವಾರ 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು.
ಬಳಿಕ ಶಾಲೆಯ ಮುಖ್ಯ ಶಿಕ್ಷಕ ಶಂಕರ್ ಮಾತನಾಡಿ, ಭಾರತದಲ್ಲಿ ಯೋಗ ಪದ್ಧತಿ ಸುಮಾರು 500 ವರ್ಷಗಳಿಂದ ರೂಢಿಯಲ್ಲಿದೆ. ಇಡೀ ಜಗತ್ತಿಗೆ ಯೋಗದ ಮಹತ್ವವನ್ನು ಸಾರುವ ಉದ್ದೇಶದಿಂದ ಜೂ.21ರಂದು ಯೋಗ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ನಿಸರ್ಗ ವಿದ್ಯಾನಿಕೇತನ ಶಾಲೆಯ ಶಿಕ್ಷಕರಾದ ರವಿಕುಮಾರ್, ಯೋಗೇಶ್, ಶಶಿಕುಮಾರ್, ಶಶಿಕಲಾ, ಶಿಲ್ಪರಾಣಿ, ಶಿವಾಕ್ಷಿ, ಜೀವಿತಾ, ಮಂಜುಳಾ, ಕುಸುಮಾ ಮತ್ತಿತರಿದ್ದರು.