ಜಿಲ್ಲೆ

25ರಂದು ಕೊಳ್ಳೇಗಾಲದಲ್ಲಿ ಪ್ರತಿಭಟನೆ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ತೈಲ ಬೆಲೆ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ರೈತಸಂಘ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳಿಂದ ಪಟ್ಟಣದಲ್ಲಿ ಜೂ.25 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಅಣಗಳ್ಳಿ ಬಸವರಾಜು ತಿಳಿಸಿದರು.

ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ನಡೆದ ವಿವಿಧ ಪ್ರಗತಿಪರ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಧಾರಗಳಿಂದ ಅಪ್ಪ-ಅಮ್ಮನ ಗಲಾಟೆಯಲ್ಲಿ ಕೂಸು ಬಡವಾಯಿತು ಎಂಬಂತೆ ಆಗಿದೆ. ಬೆಲೆ ಏರಿಕೆ ನಡುವೆ ಜನಸಾಮಾನ್ಯರು ಬದುಕುವುದು ಹೇಗೆ ಸಾಧ್ಯ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೆರಿಗೆಯನ್ನು ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ 50 ರಿಂದ 60 ರೂ.ಗೆ ಸಿಗುವಂತೆ ಕ್ರಮವಹಿಸಬೇಕು. ಕೂಡಲೇ ಬೆಲೆ ಏರಿಕೆ ಇಳಿಸುವಂತೆ ಆಗ್ರಹಿಸಿ ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಸಮಾವೇಶಗೊಂಡು ತಮ್ಮ ವಾಹನಗಳ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ತಾಲೂಕು ಕಚೇರಿಗೆ ತಲುಪಿ ಪ್ರತಿಭಟನೆ ನಡೆಸಲಾಗುವುದು. ಸಾರ್ವಜನಿಕರು ಹಾಗೂ ಪ್ರಗತಿಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ರೈತ ಸಂಘದ ಮುಖಂಡ ನಾಗರಾಜು, ಹಿರಿಯ ಮುಖಂಡ ತೇರಂಬಳ್ಳಿ ಮಹದೇವಪ್ಪ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಬಣದ ಜಿಲ್ಲಾ ಸಂಚಾಲಕ ನಿಸಾರ್ ಅಹಮ್ಮದ್, ಗೌರವಾಧ್ಯಕ್ಷ ಬಿಸಲಯ್ಯ, ಕುಮಾರ್, ಅಪ್ರೋಜ್ ಪಾಷ, ಜಗದೀಶ್ ಶಾಸ್ತ್ರಿ, ಆಯಾಜ್, ಮಹದೇವ ಪ್ರಸಾದ್, ಮಂಟೇಸ್ವಾಮಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘ ಅಧ್ಯಕ್ಷ ಅಬ್ದುಲ್ ಕರೀಮ್(ಬಚ್ಚ), ವ್ಹೀಲರ್ ಮೆಕಾನಿಕ್ ಸಂಘದ ಅಧ್ಯಕ್ಷ ಅಜ್ಗರ್ ಪಾಷ, ಕಾರ್ಯದರ್ಶಿ ಸೈಯದ್ ಸುಹೋಬ್, ಖಜಾಂಚಿ ಕೃಷ್ಣ, ಸರ್ವಧರ್ಮ ಕಾರು ಚಾಲಕರ ಸಂಘದ ಅಧ್ಯಕ್ಷ ಕಲೀಮ್ ಪಾಷ, ಖಜಾಂಚಿ ಸಿದ್ದರಾಜು, ಮಹಾ ಗಣಪತಿ ಕಾರು ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಚಿನ್ನಸ್ವಾಮಿ, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಪ್ರಭುದೇವ, ಖಜಾಂಚಿ ಶಿವು, ಭತ್ತ ಕಟಾವು ಯಂತ್ರ ಮಾಲೀಕರ ಸಂಘದ ಲೋಕೇಶ್, ಜೈ ಭುವನೇಶ್ವರಿ ಗೂಡ್ಸ್ ಆಟೋ ಮಾಲೀಕರ ಸಂಘದ ಬಸವಣ್ಣ, ಲಾರಿ ಮಾಲೀಕರ ಸಂಘದ ಜಮೀರ್ ಮತ್ತಿತರರಿದ್ದರು.