filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 44; 
ಜಿಲ್ಲೆ

ಕೊಳ್ಳೇಗಾಲದಲ್ಲಿ ಬಸವ ದೇವರ ಮೆರವಣಿಗೆ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ಪಟ್ಟಣದಲ್ಲಿ ಶುಕ್ರವಾರ ಮಳವಳ್ಳಿ ತಾಲೂಕು ಹೊನ್ನ ನಾಯಕನಹಳ್ಳಿಯ ಶ್ರೀ ಮಂಟೇಸ್ವಾಮಿ ಮಠದ ಬಸವ ದೇವರ ಮೆರವಣಿಗೆ ಶ್ರದ್ಧಾ-ಭಕ್ತಿಯಿಂದ ನಡೆಯಿತು.

ಮೀನಾಕ್ಷಿ ಸಮೇತ ಶ್ರೀ ಮರುಳೇಶ್ವರ ಸ್ವಾಮಿ ದೇವಾಲಯದಲ್ಲಿ ನೀಲಗಾರರು ಬಸವ, ಶ್ರೀ ಮಂಟೇಸ್ವಾಮಿ ಕಂಡಾಯ, ಶ್ರೀ ಸಿದ್ದಪ್ಪಾಜಿ ಕಂಡಾಯ, ಸತ್ತಿಗೆಗೆ ವಿವಿಧ ಹೂಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಿದರು. ನಂತರ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಸವ ದೇವರ ಉತ್ಸವ ಸಾಗಿತು. ಸಾರ್ವಜನಿಕರು ಶ್ರದ್ಧಾ-ಭಕ್ತಿಯಿಂದ ಬಸವನ ಕಾಲಿಗೆ ಬಿದ್ದು ಇಷ್ಟಾರ್ಥ ನೆರವೇರಿಸುವಂತೆ ಬೇಡಿಕೊಂಡರು. ಮೆರವಣಿಗೆ ಹಳೇ ಕುರಬರ ಬೀದಿಯಲ್ಲಿರುವ ರಾಮ ಮಂದಿರ ತಲುಪಿತು.