ಕೊಳ್ಳೇಗಾಲ: ಪಟ್ಟಣದ ಬಸ್ತೀಪುರ ಬಡಾವಣೆಯಲ್ಲಿ ಜೂ.13, 14 ರಂದು ನಡೆಯಲಿರುವ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವಕ್ಕೆ ಅಗತ್ಯವಿರುವ ಮರದ ದಿಮ್ಮಿಗಳನ್ನು ಶುಕ್ರವಾರ ಎತ್ತಿನಗಾಡಿಯಲ್ಲಿ ತುಂಬಿಕೊಂಡು ಮೆರವಣಿಗೆ ಮೂಲಕ ಬಡಾವಣೆಗೆ ಕೊಂಡೊಯ್ಯಲಾಯಿತು.
ಬಸ್ತೀಪುರದ ಯಜಮಾನರು ಹಾಗೂ ಮುಖಂಡರುಗಳು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ, ಸಾಲಾಗಿ 20 ಎತ್ತಿನ ಗಾಡಿ, 2 ಟ್ರಾೃಕ್ಟರ್ ಹಾಗೂ 4 ಗೂಡ್ಸ್ ವಾಹನದಲ್ಲಿ ಮರದ ದಿಮ್ಮಿಗಳನ್ನು ಸಾಗಿಸಿದರು.
ಈ ಮೆರವಣಿಗೆ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ ಮೂಲಕ ಸಾಗಿ ಬಸ್ತೀಪುರದ ಕೊಂಡದ ಮಾಳಕ್ಕೆ ತಲುಪಿತು. ಮೆರವಣಿಗೆಯಲ್ಲಿ ಯುವಕರು ಹಾಗೂ ಗ್ರಾಮಸ್ಥರು ಮಂಗಳವಾದ್ಯದ ಮೇಳಕ್ಕೆ ಹೆಜ್ಜೆ ಹಾಕಿದರು.
ಈ ವೇಳೆ ನಗರಸಭೆ ಸದಸ್ಯ ಬಸ್ತೀಪುರ ಶಾಂತರಾಜು, ಸುರೇಶ್, ಮಾಜಿ ಸದಸ್ಯ ಪುಟ್ಟೇಗೌಡ, ಮುಖಂಡ ಬಸ್ತೀಪುರ ರವಿ, ಶಾಂತರಾಜು, ಸ್ವಾಮಿ ನಂಜಪ್ಪ, ದಲಿತ ಜನಾಂಗದ ಯಜಮಾನರಾದ ಪುಟ್ಟಮಾದಯ್ಯ, ಸಿದ್ದರಾಜು , ಶಿವಕುಮಾರ್, ಟಿ.ನಂಜಯ್ಯ, ಸೋಮಣ್ಣ, ಮಾದೇಶ, ಮುದ್ದುಮಾದ, ಮಾದೇಶ, ಸಿದ್ದರಾಜು ಬತ್ತಯ್ಯ, ನಾಯಕ ಜನಾಂಗದ ಯಜಮಾನರಾದ ಸಿದ್ದನಾಯಕ, ಗೋವಿಂದನಾಯಕ, ಕುರುಬ ಜನಾಂಗದ ಯಜಮಾನರಾದ ಬೋಳೆಗೌಡ, ಶಿವಣ್ಣ, ಮಲ್ಲಿಕಾರ್ಜುನ, ಪುಟ್ಟೇಗೌಡ ಹಾಗೂ ಮತ್ತಿತರಿದ್ದರು.