ಕೊಳ್ಳೇಗಾಲ ಪಟ್ಟಣದ ಗೀತಾ ಪ್ರೈಮರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕೊಳ್ಳೇಗಾಲ ನಗರ ಒಕ್ಕಲಿಗರ ಸಂಘ ಉದ್ಘಾ ಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಡಾ.ಗಿರೀಶ್ ಹಾಗೂ ಇತರರನ್ನು ಸನ್ಮಾನಿಸಲಾಯಿತು. ಆರ್.ನರೇಂದ್ರ, ಡಾ.ಎಸ್.ದತ್ತೇಶ್ ಕುಮಾರ್, ಎನ್.ಶೇಖರ್, ದೊಡ್ಡಲಿಂಗೇಗೌಡ, ಬಾಲಕೃಷ್ಣ, ಹೊನ್ನಪ್ಪ, ಶಿವಮಲ್ಲೇಗೌಡ ಇದ್ದರು. 
ಜಿಲ್ಲೆ

ಸಂಘದ ಅಭಿವೃದ್ಧಿಗೆ ಶ್ರಮಿಸಲಿ

ನಾಗೇಶ ಎಸ್

ಕೊಳ್ಳೇಗಾಲ: ಪಟ್ಟಣದ ಗೀತಾ ಪ್ರೈಮರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಕೊಳ್ಳೇಗಾಲ ನಗರ ಒಕ್ಕಲಿಗರ ಸಂಘ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿತ್ತು.

ಮಾಜಿ ಶಾಸಕ ಹಾಗೂ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಆರ್.ನರೇಂದ್ರ ಮಾತನಾಡಿ, ನಗರ ಪ್ರದೇಶದಲ್ಲಿ ಸಂಘ ರಚನೆ ಮಾಡಿಕೊಂಡಿರುವುದು ಉತ್ತಮ ಬೆಳವಣಿಗೆ. ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ಸಂಘಟನೆ ಕಾರ್ಯಕ್ರಮಗಳನ್ನು ಮುಂದುವ ರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.

ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ.ಗಂಗಾಧರ್ ಮಾತನಾಡಿ, ಒಕ್ಕಲಿಗರ ಸಂಘದ ಇತಿಹಾಸ ಗಮನಿಸಿದರೆ ಸಂಘಟನೆಗಳಲ್ಲಿ ಹೊಂದಾಣಿಕೆಯೇ ಇರುವುದಿಲ್ಲ. ಹೀಗಾಗಿ ಈ ರೀತಿಯ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸುವಂತೆ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ನಗರ ಪ್ರದೇಶದಲ್ಲಿ ಸಂಘ ರಚನೆ ಮಾಡಿರುವುದು ಉತ್ತಮ ಬೆಳವಣಿಗೆ. ಸಂಘವು ಸಮುದಾಯದವರಿಗೆ ಉತ್ತಮ ಸೇವೆ ನೀಡಲಿ. ನನ್ನಿಂದ ಆಗಬೇಕಾದ ನೆರವಿಗೆ ಸಿದ್ಧವಿದ್ದೇನೆ ಎಂದು ಭರವಸೆ ನೀಡಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಎಂ.ಬಿ.ಮಂಜೇಗೌಡ ಮಾತನಾಡಿ, ಕೇಂದ್ರ ಒಕ್ಕಲಿಗ ಸಂಘದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯಗಳಿವೆ. ಆ ಸೌಲಭ್ಯ ಬೇಕಾದವರು ನನ್ನನ್ನು ಸಂಪರ್ಕಿಸುವಂತೆ ತಿಳಿಸಿದರು.

ನಿರ್ದೇಶಕ ಕೆ.ವಿ.ಶ್ರೀಧರ್ ಮಾತನಾಡಿ, ಚಾ.ನಗರ ಜಿಲ್ಲೆಯಲ್ಲಿ ಕೇಂದ್ರ ಸಂಘದ ವತಿಯಿಂದ ಈ ಭಾಗದ ಮುಖಂಡರೊಂದಿಗೆ ಚರ್ಚಿಸಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವುದಾಗಿ ಹೇಳಿದರು.

ನಗರ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಹಾಗೂ ಮಾನಸ ಶಿಕ್ಷಣ ಸಂಸ್ಥೆಯ ಡಾ.ದತ್ತೇಶ್ ಕುಮಾರ್ ಮಾತನಾಡಿ, ಈ ಸಂಘದ ಸರ್ವತೋಮುಖ ಅಭಿವೃದ್ಧಿಗೆ ನನ್ನ ನೆರವು ಸದಾ ಇರುತ್ತದೆ. ಸಂಘವು ಉತ್ತಮವಾಗಿ ನಡೆದುಕೊಂಡು ಹೋಗುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಒಕ್ಕಲಿಗರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಂಜಯಾಗಾಂಧಿ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ಗಿರೀಶ್ ಅವರನ್ನು ಸನ್ಮಾನಿಸಲಾಯಿತು.

ಒಕ್ಕಲಿಗರ ಸಂಘದ ನಗರಾಧ್ಯಕ್ಷ ಎನ್.ಶೇಖರ್, ಸಲಹಾ ಸಮಿತಿ ಸದಸ್ಯ ದೊಡ್ಡಲಿಂಗೇಗೌಡ, ಬಾಲಕೃಷ್ಣ, ಹೊನ್ನಪ್ಪ, ಶಿವಮ ಲ್ಲೇಗೌಡ, ಪ್ರವೀಣ್ ಇದ್ದರು.