ಕೊಳ್ಳೇಗಾಲ: ಚಾಮರಾಜನಗರ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ೆ.8 ಮತ್ತು 9 ರಂದು ಪಟ್ಟಣದ ಎಂ.ಜಿ.ಎಸ್.ವಿ. ಕಿರಿಯ ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ನಾಗರಾಜು ಕೊಂಗರಹಳ್ಳಿ ತಿಳಿಸಿದರು.
8ರ ಬೆಳಗ್ಗೆ 8.30ಕ್ಕೆ ತ್ರಿವರ್ಣ ಧ್ವಜವನ್ನು ಉಪವಿಭಾಗಾಕಾರಿ ಗೀತಾ ಹುಡೇದ, ನಾಡಧ್ವಜವನ್ನು ತಹಸೀಲ್ದಾರ್ ಎಂ. ಮಂಜುಳಾ ಮತ್ತು ಪರಿಷತ್ತಿನ ಧ್ವಜವನ್ನು ಜಿಲ್ಲಾಧ್ಯಕ್ಷ ಎಂ. ಶೈಲಕುಮಾರ್ ಆರೋಹಣ ಮಾಡಲಿದ್ದಾರೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಮ್ಮೇಳನ ಸರ್ವಾಧ್ಯಕ್ಷರನ್ನಾಗಿ ಸಾಹಿತಿ ಮಹಾದೇವ ಶಂಕನಪುರ ಅವರನ್ನು ಆಯ್ಕೆ ಮಾಡಲಾಗಿದೆ. ಮೆರವಣಿಗೆಗೆ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಚಾಲನೆ ನೀಡಲಿದ್ದಾರೆ. ವಿವಿಧ ಕಲಾ ತಂಡಗಳು ಭಾಗವಹಿಸಲಿದೆ ಎಂದರು.
ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಎನ್.ಮಹೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಆರ್. ನರೇಂದ್ರ, ಪುಟ್ಟರಂಗಶೆಟ್ಟಿ, ನಿರಂಜನ ಕುಮಾರ್, ಜಿಲ್ಲಾಕಾರಿ ರಮೇಶ್, ಎಸ್ಪಿ ಪದ್ಮಿನಿ ಸಾಹೋ ಇತರರು ಇರುವರು. ನಂತರ ವಿಚಾರಗೋಷ್ಠಿ, ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.ೆ.9ರಂದು ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಬದುಕು -ಬರಹ ಸಂವಾದ, ಬಹಿರಂಗ ಅವೇಶನ ನಡೆಯಲಿದೆ. ಸಂಜೆ 5.30ಕ್ಕೆ ಮನೋರಖ್ಹಿತ ಬಂತೇಜಿ ಸಾನ್ನಿಧ್ಯದಲ್ಲಿ ಸಮಾರೋಪ ನಡೆಯಲಿದೆ. ಸಂಸದ ಶ್ರೀನಿವಾಸ ಪ್ರಸಾದ್ ಇತರರು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು. ಕಸಾಪ ಪದಾಕಾರಿಗಳಾದ ನಾಗರಾಜು, ಶಾಂತಮೂರ್ತಿ, ಬಸವರಾಜು, ರಘು, ಚಿಕ್ಕರಾಜು ಇದ್ದರು.