ಜಿಲ್ಲೆ

ದೇವರ ಮೂರ್ತಿ ಕಳವಿಗೆ ಯತ್ನ

reportermys

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಹೆದ್ದಾರಿ ರಸ್ತೆಯ ಬದಿಯಲ್ಲಿರುವ ನಿಗಣಾಪುರದ ಮಾರಮ್ಮನ ಮೂರ್ತಿಯನ್ನು ಬುಧವಾರ ರಾತ್ರಿ ಕಿಡಿಗೇಡಿಗಳು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಮೂರ್ತಿಯನ್ನು ಕಿತ್ತ ಕಿಡಿಗೇಡಿಗಳು ಸಮೀಪದ ಪೊದೆಯಲ್ಲಿ ಇಟ್ಟು ಹೋಗಿದ್ದಾರೆ. ಗ್ರಾಮದ ನಿವಾಸಿ ಉಮೇಶ್ ಎಂಬುವರು ಗುರುವಾರ ಬೆಳಗ್ಗೆ ಮೂರ್ತಿ ಕಾಣೆಯಾಗಿರುವುದನ್ನು ಕಂಡು ಜನರಿಗೆ ವಿಷಯ ತಿಳಿಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿಲ್ಲ.