ಜಿಲ್ಲೆ

ತಳ ಸಮುದಾಯ ಸಂಸ್ಕಾರ ಪಡೆಯಲಿ

ರಮೇಶ ಮೇಳಕುಂದಾ

ಕಲಬುರಗಿ: ಸಮಾಜದ ತಳ ಸಮುದಾಯದ ಎಲ್ಲರೂ ಅಧ್ಯಾತ್ಮ ಸಂಸ್ಕಾರವನ್ನು ಪಡೆದು, ಆ ಹಾದಿಯಲ್ಲಿ ಸಾಗಬೇಕು. ಅಧ್ಯಾತ್ಮ ಚಿಂತನೆಗಳಿಲ್ಲದ ಸಮಾಜದ ಪ್ರಗತಿ ಕುಂಠಿತವಾಗಲಿದೆ ಎಂದು ಎಂದು ಸಿದ್ಧಾರೂಢ ಮಠದ ಶ್ರೀ ಮಹೇಶ್ವರ ಸ್ವಾಮೀಜಿ ಹೇಳಿದರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಮಾತಾ ಮಾಣಿಕೇಶ್ವರಿ, ಕೋಲಿ, ಕಬ್ಬಲಿಗ (ಗಂಗಾಮತ) ವಧುವರರ ಮಾಹಿತಿ ಕೇಂದ್ರದಿAದ ಭಾನುವಾರ

ಏರ್ಪಡಿಸಿದ್ದ ಕೋಲಿ, ಕಬ್ಬಲಿಗ ವಧುವರರ ೮ನೇ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿ, ಕಲುಷಿತ ವಾತಾವರಣದಿಂದ ಮಾನವ ಸಂಬAಧಕ್ಕೆ ಧಕ್ಕೆ ಬರುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಮಾವೇಶಗಳು ಅವಶ್ಯ. ದಾಂಪತ್ಯ ಜೀವನ ಸುಗಮವಾಗಿ ಸಾಗಲು ತ್ಯಾಗ, ಸಹನಶೀಲತೆ, ಸಕಾರಾತ್ಮಕ ಯೋಚನೆಗಳಿರಬೇಕು ಎಂದರು.
ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟ್ ಅಧ್ಯP್ಷÀ ಡಾ.ಮಲ್ಲಿಕಾರ್ಜುನ ಮುಕ್ಕಾ ಮಾತನಾಡಿ, ವಧುವರರ ಸಮಾವೇಶ ವ್ಯಾಪಾರ, ಪ್ರದರ್ಶನವಲ್ಲ. ಸಂಬAಧಗಳನ್ನು ಬೆಸೆಯುವ ವೇದಿಕೆ. ತಾಯಂದಿರು ಮಕ್ಕಳಲ್ಲಿ ಸಂಸ್ಕಾರದ ಬೀಜಗಳನ್ನು ಬಿತ್ತಿ, ಮೌಲ್ಯಯುತ ವ್ಯಕ್ತಿತ್ವ ರೂಪಿಸಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತ ಸೂರ್ಯಕಾಂತ ಜಮಾದಾರ ಮಾತನಾಡಿ, ಪ್ರಸ್ತುತ ಸಂಸ್ಕಾರ, ಸಂಸ್ಕೃತಿ ಮತ್ತು ವೈಚಾರಿಕ, ಶೈಕ್ಷಣಿಕ ಜಾಗೃತಿ ಆಗಬೇಕಿದೆ. ಷಡ್ಯಂತ್ರದಿAದ ಕೋಲಿ, ಕಬ್ಬಲಿಗ ಸಮಾಜವನ್ನು ವಿಭಜನೆ ಮಾಡಿ, ಶಕ್ತಿಯನ್ನು ಕ್ಷೀಣಿಸುವಂತೆ ಮಾಡಲಾಗುತ್ತಿದೆ. ಸಂಘಟಿತರಾಗಿ, ಒಗ್ಗಟ್ಟು ಪ್ರದರ್ಶಿಸಬೇಕು. ಇಲ್ಲದಿದ್ದರೆ ಸಮಾಜಕ್ಕೆ ಆಪತ್ತು ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದ ವಿವಿಧೆಡೆಯಿಂದ ವಧು ವರರು ಆಗಮಿಸಿದ್ದು, ರಾಜ್ಯದ ೩೦೦ಕ್ಕೂ ಹೆಚ್ಚು ಆಕಾಂಕ್ಷಿಗಳು ಭಾಗವಹಿಸಿದ್ದರು.
ನಿವÊತ್ತ ಉಪನ್ಯಾಸಕ ಶಿವರಾಯ ನಾವದಗಿ ಮಾತನಾಡಿದರು. ಮಹಲರೋಜಾದ ಪರಶುರಾಮ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಸೂರ್ಯಕಾಂತ ಬಿ.ಗುಡ್ಡಡಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಾಣಿಕೇಶ್ವರಿ ಎಸ್.ಮಟ್ಟಿ, ಬಾಬು ಪಿ.ಜಮಾದಾರ, ಅಶೋಕ ಚಾಂದಕವಠೆ ಇತರರಿದ್ದರು. ಸಿದ್ದಪ್ಪ ಜಿ.ಮಹಾಗಾಂವ್ ನಿರೂಪಣೆ ಮಾಡಿದರು.