ಕೊಲ್ಹಾರ ತಾಲೂಕಿನ ತೆಲಗಿ ಗ್ರಾಪಂ ಅಧ್ಯಕ್ಷರಾಗಿ ಮುಮ್ತಾಜ್ ಬಾಬುಸಾಬ ಗೌಂಡಿ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀಬಾಯಿ ಕಾಶೀನಾಥ ಬಂಡಿವಡ್ಡರ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಅವರ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಕಾಂಗ್ರೆಸ್ ಕಾರ್ಯಕರ್ತ ಪರುಶುರಾಮ ಚಲವಾದಿ, ಸದಸ್ಯರಾದ ಕಮಲಾಬಾಯಿ ಆರೇಶಂಕರ, ಭೀಮನಗೌಡ ಅಂಗಡಗೇರಿ, ಮಲ್ಲೇಶಪ್ಪ ಹಂಡಗಿ ಇತರರಿದ್ದರು. 
ಜಿಲ್ಲೆ

ಅವಿರೋಧ ಆಯ್ಕೆ


ಕೊಲ್ಹಾರ: ತಾಲೂಕಿನ ತೆಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಮುಮ್ತಾಜ್ ಬಾಬುಸಾಬ ಗೌಂಡಿ, ಉಪಾಧ್ಯಕ್ಷೆಯಾಗಿ ಲಕ್ಷ್ಮೀಬಾಯಿ ಕಾಶೀನಾಥ ಬಂಡಿವಡ್ಡರ ಅವಿರೋಧವಾಗಿ ಆಯ್ಕೆಯಾದರು.ಒಟ್ಟು 13 ಜನ ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 9 ಜನರ ಸದಸ್ಯರು ಮಾತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಘೋಷಣೆ ಹೊರಬೀಳುತ್ತಿದ್ದಂತೆ ಕಾರ್ಯಕರ್ತರು ಪರಸ್ಪರ ಗುಲಾಲು ಎರಚುತ್ತ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಹಿಂದಿನ ಅಧ್ಯಕ್ಷರಾಗಿದ್ದ ಲಕ್ಷ್ಮೀಬಾಯಿ ಪರುಶುರಾಮ ಬಿರಾದಾರ, ಉಪಾಧ್ಯಕ್ಷರಾಗಿದ್ದ ಭಾರತಿ ಯಮನಪ್ಪ ಚಲವಾದಿ ಅವರ ರಾಜೀನಾಮೆಯಿಂದ ತೆರವಾದ ಎರಡು ಸ್ಥಾನಗಳಿಗೆ ಚುನಾವಣೆ ಘೋಷಣೆ ಆಗಿತ್ತು. ಹಿಂದುಳಿದ ವರ್ಗ-ಅ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮುಮ್ತಾಜ್ ಬಾಬುಸಾಬ ಗೌಂಡಿ, ಅನುಸೂಚಿತ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀಬಾಯಿ ಕಾಶಿನಾಥ್ ಬಂಡಿವಡ್ಡರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದಾಗಿ ಅವರನ್ನೇ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ, ತಾಪಂ ಇಒ ರಿದಾಬೇಗಂ ಪಠಾಣ್ ತಿಳಿಸಿದರು.

ಕಾಂಗ್ರೆಸ್ ಕಾರ್ಯಕರ್ತ ಪರುಶುರಾಮ ಚಲವಾದಿ, ಸದಸ್ಯರಾದ ಕಮಲಾಬಾಯಿ ಆರೇಶಂಕರ, ಭೀಮನಗೌಡ ಅಂಗಡಗೇರಿ, ಮಲ್ಲೇಶಪ್ಪ ಹಂಡಗಿ, ಮಲ್ಲನಗೌಡ ಪಾಟೀಲ, ಅರವಿಂದ ಹತ್ತರಕಿಹಾಳ ಇದ್ದರು.