ಜಿಲ್ಲೆ

ಕೊಳವಿ ಶಾಲೆಗೆ ಶತಮಾನೋತ್ಸವ

ಎಂ.ಎಸ್​.ಹಿರೇಮಠ ಬೆಳಗಾವಿ

ಸಂಗಮೇಶ ಅಂಗಡಿ ಮಮದಾಪುರ

ಸಮೀಪದ ಕೊಳವಿ ಗ್ರಾಮದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಅ.10ರಿಂದ 12ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ.

1925ರಲ್ಲಿ ಗ್ರಾಮದ ಪುಟ್ಟ ದೇವಸ್ಥಾನದಲ್ಲಿ ಆರಂಭಗೊಂಡ ಶಾಲೆಗೆ ಇಂದು ಶತಮಾನೋತ್ಸವ ಸಂಭ್ರಮ. ಹೀಗಾಗಿ, ಶಾಲೆ ಸುಣ್ಣ&ಬಣ್ಣ, ತಳೀರು&ತೋರಣ ಹಾಗೂ ವಿದ್ಯುತ್​ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು, ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಅಚ್ಚುಕಟ್ಟು ಕಾರ್ಯ: ಹಳೆಯ ವಿದ್ಯಾರ್ಥಿಗಳಿಂದ 30 ಲ ರೂ.ದೇಣಿಗೆ ಸಂಗ್ರಹಣೆ ಹಾಗೂ ಶಿಣ ಪ್ರೇಮಿಗಳ ಲವಾಗಿ ಶಾಲೆ ನವೀಕೃತಗೊಂಡಿದೆ. ಸರಸ್ವತಿ ಮಂದಿರ, ಧ್ವಜಸ್ತಂಭ, ಸಭಾ ಮಂದಿರ, ಹೈಟೆಕ್​ ಶೌಚಗೃಹ, ಜಲ ಕುಂಭ, ಎಲ್ಲ ಕೊಠಡಿಗಳ ಮೇಲ್ಛಾವಣಿ ದುರಸ್ತಿ, ಟೈಲ್ಸ್​ ಅಳವಡಿಕೆ, ಇಲೆಕ್ಟ್ರಿಕಲ್​, ಕೊಳವೆ ಬಾವಿ ದುರಸ್ತಿ, ಮಹಾತ್ಮರ ಡಿಜಿಟಲ್​ ಭಾವಚಿತ್ರ, ಗ್ರೀನ್​ ಬೋರ್ಡ್​ ಸೇರಿ ವಿವಿಧ ಅಭಿವೃದ್ಧಿ ಕೆಲಸಗಳಾಗಿವೆ.

ವಿವಿಧ ಕಾರ್ಯಕ್ರಮ: ಶಾಲೆಯಲ್ಲಿ ಅ.10ರಂದು ಸರಸ್ವತಿ ಮಂದಿರದ ಶಾರದಾಂಬೆ ಮೂರ್ತಿಗೆ ವಿಶೇಷ ಪೂಜೆ ಜರುಗಲಿದೆ. 9 ಗಂಟೆಗೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ. ಅ.11ರಂದು ಬೆಳಗ್ಗೆ 10.30ಕ್ಕೆ ನವೀಕೃತ ಶಾಲಾ ಕಟ್ಟಡ ಮತ್ತು ಶತಮಾನೋತ್ಸವ ಕಾರ್ಯಕ್ರಮ. ಅ.12ರಂದು ಬೆಳಗ್ಗೆ 10.30ಕ್ಕೆ ಗುರುವಂದನೆ ಮತ್ತು ಶಿಕ್ಷಕರು, ದಾನಿಗಳಿಗೆ ಸನ್ಮಾನ ಕಾರ್ಯಕ್ರಮವಿದೆ.

ಗಣ್ಯರ ಉಪಸ್ಥಿತಿ: ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸುವರು. ಅಂಕಲಗಿ ಅಡವಿ ಸಿದ್ಧೇಶ್ವರ ಮಠದ ಅಮರ ಸಿದ್ದೇಶ್ವರ ಸ್ವಾಮೀಜಿ, ಕುಷ್ಟಗಿ ಗೆಜ್ಜೆ ಬಾವಿಯ ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ತವಗದ ಸಿದ್ಧಲಿಂಗಯ್ಯ ಸ್ವಾಮೀಜಿ, ಬಾಳಯ್ಯ ಸ್ವಾಮೀಜಿ, ಹುಲಿಕಟ್ಟಿ ಶಿವಲಿಂಗೇಶ್ವರ ಮಠದ ಕುಮಾರ ಸ್ವಾಮೀಜಿ, ಬಸಯ್ಯ ಹುಲಕಂತಿಮಠ ಸಾನ್ನಿಧ್ಯ ವಹಿಸುವರು.

ಗ್ರಾಪಂ ಅಧ್ಯಕ್ಷ ಕರೆಪ್ಪ ಬಡಿಗವಾಡ ಅಧ್ಯತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವ ಸತೀಶ ಜಾರಕಿಹೊಳಿ, ಸಂಸದ ಜಗದೀಶ ಶೆಟ್ಟರ, ಶಾಸಕ ಬಾಲಚಂದ್ರ ಜಾರಕಿಹೊಳಿ, ಎಂಎಲ್ಸಿ ಲಖನ ಜಾರಕಿಹೊಳಿ, ಅಂಬಿರಾವ್​ ಪಾಟೀಲ, ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​, ಜಿಪಂ ಸಿಇಒ ರಾಹುಲ ಶಿಂಧೆ, ಜಿಪಂ ಮಾಜಿ ಸದಸ್ಯರಾದ ಟಿ.ಆರ್​.ಕಾಗಲ್​, ಎಸ್ಪಿ ಭೀಮಾಶಂಕರ ಗುಳೇದ, ಡಿವೈಎಸ್ಪಿ ರವಿಕುಮಾರ ನಾಯ್ಕ್​, ಜಿಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಶಿಣ ಇಲಾಖೆಯ ಈಶ್ವರ ಉಳ್ಳಾಗಡ್ಡಿ, ಡಿಡಿಪಿಐ ಎಸ್​.ಸೀತಾರಾಮು, ತಹಸೀಲ್ದಾರ್​ ಮೋಹನ ಭಸ್ಮೆ, ತಾಪಂ ಇಒ ಪರಶುರಾಮ ಸ್ತೆ, ಬಿಇಒ ಜಿ.ಬಿ.ಬಳಗಾರ, ಸಂಜುಕುಮಾರ ಜೋತಾವರ, ಭೀಮಗೌಡ ಪೊಲೀಸ್​ಗೌಡರ, ಬಸನಗೌಡ ಪಾಟೀಲ, ಭೂದಾನಿ ನಿಜಲಿಂಗಪ್ಪ ಅಂಗಡಿ, ಕವಿತಾ ಮಿಶ್ರಾ, ಶಿವಾನಂದ ಮಮದಾಪುರ, ಎಸ್​.ವಿ.ಕುಲಕರ್ಣಿ, ಎಂ.ಬಿ.ಮಲಬನ್ನವರ, ಬಾಳಪ್ಪ ವನಕಿ, ಎಸ್​ಡಿಎಂಸಿ, ಗ್ರಾಪಂ ಸದಸ್ಯರು, ನಿವೃತ್ತ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಸೇರಿ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಳೆಯ ವಿದ್ಯಾರ್ಥಿಗಳಾದ ಡಾ.ಆರ್​.ಡಿ.ಪಾಟೀಲ, ಎಂ.ಕೆ.ಪಾಟೀಲ ಹಾಗೂ ಅಶೋಕ ಸಿಂಗಾಡಿ ಭೋಜನ ವ್ಯವಸ್ಥೆ ಮಾಡಿದ್ದಾರೆ