ಜಿಲ್ಲೆ

ಜಿಲ್ಲಾದ್ಯಂತ ಅವಾಂತರ ಸೃಷ್ಟಿಸಿದ ಮಳೆರಾಯ

ಕೋಲಾರ ಡೆಸ್ಕ್

ರೈಲ್ವೆ ಕೆಳ ಸೇತುವೆಯಲ್ಲಿ ಬಸ್‌ಗಳು, ಕಾರು ಸಿಕ್ಕಿಹಾಕಿಕೊಂಡು ಟ್ರಾಫಿಕ್ ಜಾಮ್


ಕೋಲಾರ: ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಂಗಳವಾರ ಸಂಜೆ ಸುರಿದ ಮಳೆಯು ಅವಾಂತರ ಸೃಷ್ಟಿಸಿತು.
ನಗರದ ಚಿಕ್ಕಬಳ್ಳಾಪುರ ರಸ್ತೆಯ ರೈಲ್ವೆ ಕೆಳ ಸೇತುವೆ, ಅಂತರಗಂಗೆ ರೈಲ್ವೆ ಕೆಳ ಸೇತುವೆ, ಚಿಕ್ಕಹಸಳ ಕೆಳಸೇತುವೆ ಕೆಳಗೆ ನೀರು ನಿಂತು ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಸೇತುವೆ ಕೆಳಗೆ ಕೆಎಸ್‌ಆರ್‌ಟಿಸಿ ಬಸ್, ಕಾರು ನೀರಿನಲ್ಲಿ ಸಿಕ್ಕಿಹಾಕಿಕೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿಯಿತು. ಆಟೋ, ದ್ವಿಚಕ್ರವಾಹನಗಳ ಸವಾರರು ಆಶ್ರಯಪಡೆದುಕೊಳ್ಳಲು ಅವಕಾಶ ಇಲ್ಲದೆ ಮಳೆಯಲ್ಲೇ ನೆನೆಯಬೇಕಾದ ಪರಿಸ್ಥಿತಿ ಉದ್ಬವಿಸಿತು.
ಗ್ರಾಮೀಣ ಪ್ರದೇಶದಲ್ಲಿಯು ಹೆಚ್ಚು ಮಳೆಯಾಗಿ ಜೋಳ, ಪಪ್ಪಾಯ, ಟೊಮ್ಯಾಟೊ, ಬೀನ್ಸ್, ಕ್ಯಾಪ್ಸಿಕಂ ಬೆಳೆಗಳು ಹಾನಿಯಾಗಿವೆ. ಟೊಮ್ಯಾಟೊ ಕೊಯ್ಲು ಮಾಡಿರುವ ರೈತರು ಮಾರುಕಟ್ಟೆಗೆ ಸಾಗಿಸಲು ಹರಸಾಹಸಪಟ್ಟಿದರು. ಟೊಮ್ಯಾಟೊ ವಾಹನಗಳು ಸಿಕ್ಕಾಕಿಕೊಂಡು ತೆರವುಗೊಳಿಸಲು ಪರಿತಪಿಸಿದರು. ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದ ಹಿನ್ನೆಲೆಯಲ್ಲಿ ನೀರು ರಸ್ತೆಯ ಮೇಲೆ ಹರಿಯಿತು, ಇದರಿಂದಾಗಿ ರಸ್ತೆಯಲ್ಲಿನ ಗುಂಡಿಗಳು ಸರಿಯಾಗಿ ಗೋಚರಿಸದೆ ಸಂಕಷ್ಟಕ್ಕೆ ಸಿಲುಕಿದರು. ಇನ್ನು ಯುಜಿಡಿ ಮ್ಯಾನ್ಯುಯಲ್ ಹೊಲ್ಗಳು ಹಾನಿಯಾಗಿದ್ದುಕೊಳಚೆ ನೀರು ರಸ್ತೆಗೆ ಹರಿಯಿತು. ನಗರದಲ್ಲಿ ಗಲ್ಪೇಟೆ ಪೊಲೀಸರು ವಾಹನ ಸಂಚಾರ ನಿವಾರಣೆ ಹಾಗೂ ಅಗ್ನಿಸಾಮಕ ಅಧಿಕಾರಿಗಳು, ಸಿಬ್ಬಂದಿ ಸೇತುವೆ ಕೆಳಗೆ ಹಾಗೂ ರಸ್ತೆ ಮೇಲೆ ನಿಂತಿದ್ದ ನೀರು ತೆರವುಗೊಳಿಸಿದರು.