ದೆಹಲಿಯಲ್ಲಿ ಬೀಡು ಬಿಟ್ಟುರುವ ರಾಜ್ಯದ ಶಾಸಕರೊಂದಿಗೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ. 
ಕೋಲಾರ

ಎಎನ್‌ಎನ್‌ಗೆ ಸಿಗುವುದೇ ಸಚಿವ ಸ್ಥಾನ?

ಕಿರುವಾರ ಎಸ್.ಸುದರ್ಶನ್
ವಿ.ಶಿವಾರೆಡ್ಡಿ ಬಂಗಾರಪೇಟೆ
ರಾಜ್ಯದಿಂದ ದೆಹಲಿಗೆ ತೆರಳಿರುವ ಕಾಂಗ್ರೆಸ್‌ನ ಹಲವು ಶಾಸಕ ಪೈಕಿ ಬಂಗಾರಪೇಟೆ ಶಾಸಕ ಎಸ್. ಎನ್.ನಾರಾಯಸ್ವಾಮಿ ಅವರೂ ಪ್ರಯಾಣ ಬೆಳೆಸಿದ್ದು, ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮುಂದೆ ಬೇಡಿಕೆಯಿಟ್ಟು ಲಾಬಿಗೆ ಮುಂದಾಗಿದ್ದಾರೆ.
ಮೊದಲ ಅವಧಿಯಲ್ಲಿ ಸಾಕಷ್ಟು ಮಂದಿ ಹಿರಿಯ ಶಾಸಕರು ಅವಕಾಶದಿಂದ ವಂಚಿತರಾಗಿರುವವರ ಪೈಕಿ ನಾರಾಯಣಸ್ವಾಮಿಯೂ ಒಬ್ಬರು. ಜಿಲ್ಲೆಯಲ್ಲಿ ಈ ಬಂಗಾರಪೇಟೆ ಎಸ್.ಎನ್.ನಾರಾಯಣಸ್ವಾಮಿ ಮೂರು ಬಾರಿ, ಕೆ.ವೈ.ನಂಜೇಗೌಡ, ಡಾ.ರೂಪಕಲಾ, ಕೊತ್ತೂರು ಜಿ.ಮಂಜುನಾಥ್ ತಲಾ ಎರಡು ಬಾರಿ ಶಾಸಕರಾಗಿದ್ದಾರೆ. ಇವರ ನಡುವೆ ಒಮ್ಮತದ ಹೊಂದಾಣಿಕೆಯಿಲ್ಲದ ಕಾರಣ ಜಿಲ್ಲೆಗೆ ಮಂತ್ರಿಗಿರಿ ದೊರೆತಿಲ್ಲ. ಈಗ ಮತ್ತೆ ಕೂಗು ಮುನ್ನಲೆಗೆ ಬರುತ್ತಿದ್ದಂತೆ ನಾರಾಯಣಸ್ವಾಮಿ ಅವರು ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್, ಹಿರಿಯ : ಮುಖಂಡರೊಂದಿಗೆ ಚರ್ಚೆ ನಡೆಸುತ್ತಿರುವ = ಫೋಟೋಗಳು ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹೈಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ. ಇದು ಒಬ್ಬ ಶಾಸಕರ ವೈಯಕ್ತಿಕ ಆಸೆ ಮಾತ್ರವಲ್ಲ, ಹಿರಿಯರಿಗೆ ನೀಡಿದ್ದ ಭರವಸೆ,
ದಲಿತ ಸಮುದಾಯದ ಪ್ರತಿನಿಧಿತ್ವ, ಕೋಲಾರ ಜಿಲ್ಲೆಯ ರಾಜಕೀಯ ಸಮತೋಲನ ಮತ್ತು ತಳಮಟ್ಟದ ಸಂಘಟನಾ ಶಕ್ತಿಗೆ ಮಾನ್ಯತೆ ಸಿಗಬೇಕು ಎಂಬುದು ಕ್ಷೇತ್ರದ ಜನರ ಬಹುದಿನಗಳ ಬೇಡಿಕೆಯಾಗಿದೆ.
ಹಕ್ಕೊತ್ತಾಯ
ಜಿಲ್ಲೆಯಲ್ಲಿ ನಾಲ್ಕು ಮಂದಿ ಕೈ ಶಾಸಕರಿದ್ದರೂ ಉಸ್ತುವಾರಿ ಹೊಣೆ ಹೊರ ಜಿಲ್ಲೆಯವರಿಗೆ ದೊರೆತಿರುವ ಅಸಮಾಧಾನವಿದೆ. ಜಿಲ್ಲೆಯ ರಾಜಕೀಯ ನಾಡಿ, ಸ್ಥಳೀಯ ಸಮಸ್ಯೆಗಳು ಮತ್ತು ಸಮುದಾಯಗಳ ಸಮೀಕರಣಗಳನ್ನು ಸಮೀಪದಿಂದ ಅರಿತಿರುವ ನಾಯಕನಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಜನತೆಯ ಒತ್ತಾಯವೂ ಆಗಿದೆ.