ಶ್ರೀನಿವಾಸಪುರ ಪುರಸಭೆ ಕಚೇರಿ ಮುಂಭಾಗ ಪ್ರತಿಭಟಿಸಿದ ಗಂಗೋತ್ರಿ.
ಶ್ರೀನಿವಾಸಪುರ: ಪಟ್ಟಣದ ಪುರಸಭೆ ಕಚೇರಿಯಲ್ಲಿ ಡಿ ಗ್ರೂಪ್ ನೌಕರನಾಗಿದ್ದ ತಂದೆ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದು, ಅವರ ನಿಧನದ ನಂತರ ತಾಯಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗಿದೆ. ಆದರೆ, ಇದನ್ನು ವಿರೋಧಿಸಿದ ಮಗಳು ಗಂಗೋತ್ರಿ, 15 ವರ್ಷಗಳ ಹಿಂದೆಯೇ ತಂದೆಯಿಂದ ಬೇರ್ಪಟ್ಟಿದ್ದ ತಾಯಿಗೆ ಉದ್ಯೋಗ ನೀಡಿರುವುದನ್ನು ಖಂಡಿಸಿ ಮಂಗಳವಾರ ಕಚೇರಿ ಮುಂಭಾಗ ಮೌನ ಪ್ರತಿಭಟನೆ ನಡೆಸಿದರು.
ತಂದೆ ಸಾವಿಗೂ ಬಾರದ ತಾಯಿಗೆ ಉದ್ಯೋಗ ನೀಡಿರುವುದು ಅನ್ಯಾಯ. ಅಂತಿಮ ವಿಧಿ&ವಿಧಾನಕ್ಕೆ ಹಣ ಇಲ್ಲದಾಗ ಸಾಲ ಮಾಡಿ ಅಂತ್ಯಕ್ರಿಯೆ ಮಾಡಿದ್ದೇನೆ. ತಾಯಿಗೆ ಆ ಕೆಲಸ ನೀಡಬಾರದು ಎಂದು ಪುತ್ರಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಪ್ರತಿಭಟನಾ ನಿರತ ಮಹಿಳೆಯನ್ನು ಕಚೇರಿ ಒಳಗೆ ಕರೆದೊಯ್ದು, ನಾರಾಯಣಸ್ವಾಮಿ ಪತ್ನಿ ವರಲಕ್ಷಿ$್ಮಗೆ ಉದ್ಯೋಗದ ಆದೇಶವಾಗಿದ್ದು, ಈ ರೀತಿ ಪ್ರತಿಭಟನೆ ಮಾಡದೆ, ಕಾನೂನು ಹೋರಾಟ ಮಾಡುವಂತೆ ಸಲಹೆ ನೀಡಿದರು. ಪೊಲೀಸರು ಮಧ್ಯಪ್ರವೇಶಿಸಿ, ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.