ಕೆಜಿಎಫ್ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಉದ್ಘಾಟನೆಯಾಗದ ಶುದ್ಧ ಕುಡಿಯುವ ನೀರಿನ ಘಟಕ.
ಬೇಸಿಗೆಯ ಬಿಸಿ ಏರುತ್ತಿದ್ದಂತೆಯೇ ಕೆಜಿಎಫ್ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಸಮರ್ಪಕ ನಿರ್ವಹಣೆಯಿಲ್ಲದೆ ಕೆಟ್ಟು ನಿಂತಿರುವುದರಿಂದ, ಜನರು ಅನಿವಾರ್ಯವಾಗಿ ಫ್ಲೋರೈಡ್ ಯುಕ್ತ ನೀರನ್ನು ಸೇವಿಸುವ ದುಸ್ಥಿತಿ ಬಂದಿದೆ. ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಸ್ಥಗಿತ: ನಗರಸಭೆ ಬಸ್ ನಿಲ್ದಾಣ, ತಾಲೂಕು ಕಚೇರಿ ಆವರಣ ಸೇರಿದಂತೆ 35 ವಾಡ್ ೯ಗಳು ಹಾಗೂ ಗ್ರಾಮಾಂತರ ಭಾಗದ ಸುಮಾರು 200ಕ್ಕೂ ಹೆಚ್ಚು ಘಟಕಗಳಲ್ಲಿ ಬಹುತೇಕವು ಈಗ 5. 1,000 ದಿಂದ 1,500 ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ ಅಂದಾಜು 10 ರಿಂದ 12 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದ್ದರೂ, ಕಳಪೆ ಗುಣಮಟ್ಟದ ಉಪಕರಣಗಳ ಬಳಕೆಯಿಂದಾಗಿ ಘಟಕಗಳು ಪದೇಪದೆ ದುರಸ್ತಿಗೆ ಬರುತ್ತಿವೆ.
ಮಾನದಂಡಗಳ ಉಲ್ಲಂಘನೆ: ಸಾಮಾನ್ಯವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಟಿಡಿಎಸ್ 50 0 150 2/2 (ಪಿಪಿಎಂ) ನಡುವೆ ಇರಬೇಕು ಎಂದು ಭಾರತೀಯ ಮಾನಕ ಬ್ಯೂರೋ ನಿಗದಿಪಡಿಸಿದ್ದು, ಆದರೆ, ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆರಳೆಣಿಕೆಯಷ್ಟು ಘಟಕಗಳಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. ಅಲ್ಲದೆ, 5 ರೂಪಾಯಿಗೆ 20 ಲೀಟರ್ ನೀರು ಎಂದು ಫಲಕ ಹಾಕಲಾಗಿದ್ದರೂ, ವಾಸ್ತವವಾಗಿ ಕೇವಲ 1,617 ಲೀಟರ್‌ನಷ್ಟು ಮಾತ್ರ ನೀರು ಬರುತ್ತಿದೆ.
ನಗರಸಭೆಯ ಆಡಳಿತ ಮಂಡಳಿ ಅಸ್ತಿತ್ವದಲ್ಲಿದ್ದಾಗ ಸುಸ್ಥಿತಿಯಲ್ಲಿದ್ದ ಈ ಘಟಕಗಳು, ಈಗ ಅಧಿಕಾರಾವಧಿ ಮುಗಿದ ಬಳಿಕ ಅನಾಥವಾಗಿವೆ. ವಾಲ್‌ಮ್ಯಾನ್‌ಗಳ ಬೇಜವಾಬ್ದಾರಿಯಿಂದ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ನಗರಕ್ಕೆ ನೀರು ಪೂರೈಸುವ ಕೃಷ್ಣಾವರಂನ 12 ಕೊಳವೆಬಾವಿಗಳಲ್ಲಿ ಹೇರಳ ನೀರಿದ್ದರೂ, ನಿರ್ವಹಣೆಯಿಲ್ಲದೆ ಕೇವಲ 3 ಬಾವಿಗಳು ಮಾತ್ರ ಬಳಕೆಯಾಗುತ್ತಿವೆ. ಇದರಿಂದ ಜನರಿಗೆ 15 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಘಟಕಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದು ಮತ್ತು ಟಿಡಿಎಸ್ ವ್ಯತ್ಯಾಸದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣವೇ ಇಂಜಿನಿಯರ್ ಗಳಿಂದ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು.
- ಶ್ರೀಧರ್ ಪೌರಾಯುಕ್ತ, ಕೆಜಿಎಫ್ ನಗರಸಭೆ
ಶಾಸಕಿ ರೂಪಕಲಾ ಅವರು ಜನರ ಹಿತದೃಷ್ಟಿಯಿಂದ 150ಕ್ಕೂ ಹೆಚ್ಚು ಘಟಕ ಸ್ಥಾಪಿಸಲು ಶ್ರಮಿಸಿದ್ದಾರೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಜನರು ನೀರಿಗಾಗಿ ಅಲೆದಾಡುವಂತಾಗಿದೆ.
- ರಾಮಕೃಷ್ಣರೆಡ್ಡಿ ಹೆಗಡೆ ಎಂ.ಕೊತ್ತೂರು ನಿವಾಸಿ.
ಕೃಷ್ಣಾವರಂ ಬಳಿ 12 ಕೊಳವೆಬಾವಿಗಳಿದ್ದರೂ ನಿರ್ವಹಣೆ ಕೊರತೆಯಿಂದ ಕೇವಲ 3 ಮಾತ್ರ ಚಾಲ್ತಿಯಲ್ಲಿವೆ. ಇದರಿಂದ ನಮಗೆ 15 ದಿನಕ್ಕೊಮ್ಮೆ ನೀರು ಬರುತ್ತಿದೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು.
- ಜಕ್ಕರಾಯ ಉರಿಗಾಂಪೇಟೆ ನಿವಾಸಿ