ಕೋಲಾರ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಗ್ಯಾರೆಂಟಿ ಯೋಜನೆಗಳ ಕಾರ್ಯಗಾರ ಕಾರ್ಯಕ್ರಮವನ್ನು ಸಚಿವ ಬೈರತಿ ಸುರೇಶ್​ ಉದ್ಘಾಟಿಸಿದರು. 
ಕೋಲಾರ

ಪಂಚ ಯೋಜನೆ ನಿಲ್ಲಿಸುವ ಪ್ರಶ್ನೆಯಿಲ್ಲ

ಕೋಲಾರ: ರಾಜ್ಯದಲ್ಲಿ ಪಂಚ ಗ್ಯಾರೆಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಇದನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನಿಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಗ್ಯಾರೆಂಟಿ ಯೋಜನೆಗಳ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರಂಭದಲ್ಲಿ ಟೀಕೆ ಮಾಡಿದ ವಿರೋಧ ಪಕ್ಷದವರಿಗೆ ಈಗ ಮಾತೇ ಆಡ್ತಿಲ್ಲ ಎಂದರು.
ಚುನಾವಣಾ ಪೂರ್ವದಲ್ಲಿ ಪ್ರನಾಳಿಕೆಯಲ್ಲಿ ಘೋಷಿಸಿರುವಂತೆ ಗೃಹ ಲಕ್ಷಿ$್ಮ, ಗೃಹ ಜ್ಯೋತಿ, ಶಕ್ತಿ, ಯುವ ನಿಧಿ ಹಾಗೂ ಅನ್ನ ಭಾಗ್ಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಈ ಯೋಜನೆಗಳು ರಾಜ್ಯದಲ್ಲಿ ಬಡವರ ಪಾಲಿಗೆ ಬೆಳಕು ನೀಡಿವೆ ಎಂದು ಅಭಿಪ್ರಾಯಪಟ್ಟರು.
ವರ್ಷಕ್ಕೆ 55 ಸಾವಿರ ಕೋಟಿ ಪಂಚ ಯೋಜನೆಗಳಿಗೆ ವೆಚ್ಚ ಮಾಡಲಾಗುತ್ತಿದೆ. ಇದರ ಕೀರ್ತಿಯು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸಲ್ಲುತ್ತದೆ. ಇದಕ್ಕು ಮುಂದೆ ವಿರೋಧ ಪಕ್ಷಗಳವಲು ನಾನಾ ರೀತಿ ಟೀಕೆ ಮಾಡುತ್ತಿದ್ದರು. ಈಗ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಅನುಷ್ಠಾನ ಮಾಡುವ ಮೂಲಕ ನಮ್ಮನ್ನು ಪಾಲಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸುಮಾರು 55 ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ ತರುವುದು ಎಂದರೆ ಸುಲಭದ ಕೆಲಸವಲ್ಲ. ಇದು ಇಡೀ ವಿಶ್ವದ ಯಾವುದೇ ದೇಶದಲ್ಲಿ ದೊಡ್ಡ ಕಾರ್ಯಕ್ರಮ ಈ ರೀತಿ ಜಾರಿಯಾಗಿಲ್ಲ, ಅದು ನಮ್ಮ ರಾಜ್ಯದಲ್ಲಿ ಮಾತ್ರ. ಬಿಹಾರ, ರಾಜಸ್ಥಾನ ಸೇರಿದಂತೆ ಬಿಜೆಪಿ ಇರುವ ರಾಜ್ಯಗಳಲ್ಲಿ ನಮ್ಮನ್ನು ಪಾಲನೆ ಮಾಡಲು ಮುಂದಾಗಿದ್ದು ಯಶಸ್ಸು ಕಾಣಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
* ಕೊಟ್ಟ ಮಾತಿನಂತೆ ನಡೆದುಕೊಂಡು ಸರ್ಕಾರ
ಗ್ಯಾರೆಂಟಿ ಯೋಜನೆ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್​.ಎಂ.ರೇವಣ್ಣ ಮಾತನಾಡಿ, ರಾಜ್ಯ, ದೇಶದಲ್ಲಿ ನಮ್ಮ ಸರ್ಕಾರದ ಅಧಿಕಾರಕ್ಕೆ ಬಂದಾಗೆಲ್ಲ ಜಾರಿಗೊಳಿಸಿರುವ ಜನಪರ ಯೋಜನೆಗಳ ಜನರ ಮನೆ ಮಾತನಾಗಿವೆ ಎಂದು ಹೇಳಿದರು.
ಸರ್ಕಾರ ಇದುವರೆಗೂ 1,16,000 ಕೋಟಿ ಯಷ್ಟು ಹಣವನ್ನು ಗ್ಯಾರೆಂಟಿ ಯೋಜನೆಗಳ ಮೂಲಕ ಬಡವರ ಮನೆಗೆ ತಲುಪಿಸಿದೆ. ಕೊಟ್ಟ ಮಾತನಂತೆ ನಡೆದುಕೊಳ್ಳುತ್ತಿರುವ ಸಿದ್ದರಾಮಯ್ಯ ಸರ್ಕಾರ ಗ್ಯಾರೆಂಟಿಗಳನ್ನು ಅತ್ಯುತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಿದೆ. ಇದರ ಬಗ್ಗೆ ಯಾವುದೇ ರೀತಿ ಸಂಶಯಬೇಡ. ಬಿಟ್ಟಿ ಭಾಗ್ಯಗಳು ಎಂದು ಯಾರಾದರು ಮಾತನಾಡಲು ಬಂದರೆ ಅವರಿಗೆ ಲಾನುಭವಿಗಳೆ ಪಾಠ ಕಲಿಸಬೇಕು ಎಂದು ಎಚ್ಚರಿಸಿದರು.
ಇಂದಿರಾ ಗಾಂಧಿ, ದೇವರಾಜ ಅರಸು ಕಾಲದಲ್ಲಿ ಉಳ್ಳುವವನಿಗೆ ಭೂ, ವೃದ್ಧಪ್ಯ, ಅಂಗವಿಕಲ ವೇತನಗಳನ್ನು ಜಾರಿಗೆ ತಂದಿದ್ದು ಈಗಲು ಚಾಲ್ತಿಯಲ್ಲಿವೆ. ಹಿಂದೆ ಅನ್ನಭಾಗ್ಯ ಯೋಜನೆ ತಂದ ಸಿದ್ದರಾಮಯ್ಯ ಅವರು ಜನಪಾಲಿಗೆ ಅನ್ನರಾಮಯ್ಯ ಆಗಿ ಖ್ಯಾತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
* ಸುಳ್ಳು ಹೇಳುವ ವಿಶ್ವಗುರು ಮೋದಿ
ದೆಹಲಿಯಲ್ಲಿರುವ ವಿಶ್ವ ಗುರು ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಕಲ್ಪಿಸುತ್ತೆವೆ ಎಂದು ಹೇಳಿದವರು ಇದೀಗ ಮರೆಯು ಹೋಗಿದ್ದಾರೆ. ಬಂಗಾರಪ್ಪ ಕಾಲದಲ್ಲಿ ಕೊಳವೆಬಾವಿಗೆ ಉಚಿತ ವಿದ್ಯುತ್​ ಕಲ್ಪಿಸಲಾಯಿತು. ಕೋಲಾರ ಜಿಲ್ಲೆಯ ಜನ ಶ್ರಮ ಜೀವಿಗಳು, ತರಕಾರಿ ಹಣ್ಣುಗಳನ್ನು ಬೆಳೆಯುವಲ್ಲಿ ಪ್ರಬುದ್ಧರಾಗಿದ್ದಾರೆ. ರಾಜ್ಯಕ್ಕೆ ಬಂದಿದ್ದ ಮೋದಿ ಟೀಕೆ ಮಾಡಿ ಹೋಗಿದ್ದರು. ಈಗ ಇದಕ್ಕೆ ಉತ್ತರ ನೀಡಲಿ ಎಂದು ಸವಾಲು ಹಾಕಿದರು.
ಶಕ್ತಿ ಯೋಜನೆಯಡಿ ಸಾರಿ ಬಸ್​ಗಳಲ್ಲಿ 665 ಕೋಟಿ ಮಂದಿ ಪ್ರಯಾಣಿಸಿದ್ದು, ವರ್ಲ್ಡ್​ ರೇಕಾರ್ಡ್​ ಬುಕ್​ ಪ್ರಶಸ್ತಿ ಸಹ ದೊರೆತಿದೆ. ಇದಕ್ಕೆ ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡಲಾಗಿದೆ. ಗ್ಯಾರೆಂಟಿಗಳ ಜತೆಗೆ ಅಭಿವೃದ್ಧಿಯೂ ಸಾಗುತ್ತಿದೆ. ಇದರಿಂದ ತಲಾ ಅದಾಯ ಹೆಚ್ಚಾಗಿದೆ. ಇದರಲ್ಲಿ ಕರ್ನಾಟಕ ಮುಂದಿದಿದ್ದು, ಜಿಎಸ್ಟಿ ಪಾವತಿಯಲ್ಲೂ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆದರೆ ಕೇಂದ್ರದಿಂದ ತಾರತಮ್ಯ ಆಗುತ್ತಿದೆ ಎಂದು ದೂರಿದರು.
* ಪಿಜೆಪಿ ಪ್ರಯತ್ನ ವಿಫಲ
ಶಾಸಕರಾದ ಕೊತ್ತೂರು ಜಿ.ಮಂಜುನಾಥ್​, ಸರ್ಕಾರದಿಂದ ಜನರಿಗಾಗಿ ಜಾರಿಗೆ ತಂದಿರುವ ಯೋಜನೆಗಳು ಜನರಿಗೆ ತಲುಪುತ್ತಿದಿಯೇ ಎಂಬುದರ ಬಗ್ಗೆ ಖಾತರಿ ಪಡೆದುಕೊಳ್ಳಲು ಕಾರ್ಯಾಗಾರ ಮಾಡಲಾಗುತ್ತಿದೆ ಎಂದರು.
ಪಂಚ ಗ್ಯಾರೆಂಟಿಯೂ ರಾಜ್ಯದಲ್ಲಿ ಸಾಧನೆ ಆಗಿರುವುದರಿಂದ ಬಿಹಾರ್​, ಪಶ್ಚಿಮಗಾಳದಲ್ಲಿ ಜಾರಿಗೆ ತರಲು ಬಿಜೆಪಿಯವರು ಮುಂದಾದರು. ಆದರೆ ವಿಲವಾಗಿದೆ. ಸಿಎಂ, ಡಿಸಿಎಂ ಉದ್ದೇಶ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಬೇಕು ಎಂಬುದು. ಈ ಕಾರ್ಯಕ್ರಮಗಳು ಶಾಶ್ವತವಾಗಿ ಮುಂದುವರೆಯುತ್ತವೆ. ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ವೈ.ನಂಜೇಗೌಡ, ಎಂಎಲ್ಸಿಗಳಾದ ಎಂ.ಎಲ್​.ಅನಿಲ್​ ಕುಮಾರ್​, ಡಿ.ಟಿ.ಶ್ರೀನಿವಾಸ್​, ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ, ಜಿ.ಪಂ ಸಿಇಒ ಡಾ.ಪ್ರವಿಣ್​ ಬಾಗೇವಾಡಿ, ಎಸ್ಪಿ ಕನ್ನಿಕಾ ಸಿಕ್ರಿವಾಲ್​, ಉಪಕಾರ್ಯದರ್ಶಿ ಟಿ.ಕೆ.ರಮೇಶ್​, ರಾಜ್ಯ ಉಪಾಧ್ಯಕ್ಷರಾದ ಡಾ.ಪುಷ್ಪ, ಸೂರಜ್​ ಎಂ.ಹೆಗಡೆ, ಜಿಲ್ಲಾಧ್ಯಕ್ಷ ವೈ.ಶಿವಕುಮಾರ್​, ಎಸ್ಪಿ ಕನ್ನಿಕಾ ಸಿಕ್ರಿವಾಲ್​, ಎಸಿ ರೇಣುಕಾ ಪ್ರಸಾದ್​ ದಿಲೀಪ್​ ಮತಿತರು ಉಪಸ್ಥಿತರಿದ್ದರು.
ಮೃತಪಟ್ಟಿರುವ ಯಜಮಾನಿ ಖಾತೆಗೆ ಗೃಹ ಲಕ್ಷಿ$್ಮ ಹಣ ಪಾವತಿ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಇದನ್ನು ನಿಯಂತ್ರಣ ಮಾಡಬೇಕು.
- ಎಚ್​.ಎಂ.ರೇವಣ್ಣ, ರಾಜ್ಯಾಧ್ಯಕ್ಷ, ಗ್ಯಾರೆಂಟಿ ಪ್ರಾಧಿಕಾರ.