ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಸಚಿವ ವಿ.ಸೋಮಣ್ಣ ಅವರು ಭೇಟಿ ನೀಡಿ ಪರಿಶೀಲಿಸಿದರು.  
ಕೋಲಾರ

ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರ ಸಹಕರಿಸಲಿ

ಕೋಲಾರ: ರೈಲ್ವೆ ಯೋಜನೆಗಳ ಅನುಷ್ಠಾನಕ್ಕಾಗಿ ನಿರೀಕ್ಷೆಗೂ ಮೀರಿ ಕೇಂದ್ರ ಸರ್ಕಾರದಿಂದ ಸಹಕಾರ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರವು ಇದಕ್ಕೆ ಸಹಕಾರ ನೀಡಬೇಕು ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಸಂಸದ ಎಂ.ಮಲ್ಲೇಶ್ ಬಾಬು ಅವರ ಕಚೇರಿಯಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ಸರ್ಕಾರವು ಇಡೀ ದೇಶದಲ್ಲಿ 2.65 ಸಾವಿರ ಕೋಟಿ ಹೊಸ ಯುಗ ಪ್ರಾರಂಭವಾಗಿದೆ. ಹಿಂದಿನ ಸರ್ಕಾರದಲ್ಲಿ ೫ ಲಕ್ಷ ಪಡೆದುಕೊಳ್ಳಲು ಒದ್ದಾಡಬೇಕಾಗಿತ್ತು. ಆದರೆ ಈಗ ಅದು ಸುಲಭವಾಗಿದೆ ಎಂದರು.
ಸುಮಾರು 1,000 ಕೋಟಿ ರೂ. ವೆಚ್ಚಲ್ಲಿ 60 ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದ್ದು, ಮತ್ತಷ್ಟು ಕೆಲಸಗಳನ್ನು ಕೈಗೆತ್ತಿಗೊಳ್ಳಲಾಗಿದೆ. ಹೊಸ ನಿಲ್ದಾಣಗಳಲ್ಲಿ ವಿಶೇಷ ಚೇತನರಿಗೆ, ವೃದ್ಧರಿಗೆ, ಮಹಿಳೆಯರಿಗೆ ವಿಶ್ರಾಂತಿ ಕೊಠಡಿಗಳು ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಟೇಕಲ್, ಕೋರಮಂಡಲ್, ಊರಿಗಾಂ ನಿಲ್ದಾಣ ಲೋಕಾರ್ಪಣೆ ಮಾಡಲಾಗಿದೆ. ಬಂಗಾರಪೇಟೆ, ಕೋಲಾರ ವೀಕ್ಷಣೆ ಮಾಡಲಾಗಿದೆ. ಕೋಲಾರದಿಂದ ಬೆಂಗಳೂರಿಗೆ ನೇರವಾಗಿ ರೈಲು ಸಂಚಾರವಿಲ್ಲ. ಮಲ್ಲೇಶ್ ಬಾಬು ಅವರ ಕಾಲಾವಧಿಯಲ್ಲಿ ಆಗಬೇಕು ಎಂಬುದು ಇತ್ತೇನು, ಕಾಲ ಕೂಡಿ ಬರುತ್ತಿದೆ. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮೊದಲ ಆಧ್ಯತೆ ಅಗತ್ಯ ಇರುವ ಕಡೆಗಳಲ್ಲಿ ಸೇತುವೆ ನಿರ್ಮಾಣ ಮಾಡುವುದು. ಕೋಲಾರ ನಗರದ ಟೇಕಲ್ ರಸ್ತೆ, ಕಾಮಸಮುದ್ರ, ದೇಶಿಹಳ್ಳಿ, ಸ್ಯಾನಿಟೋರಿಯಂ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಹೋಗಿದೆ. ಅದಾಷ್ಟು ಬೇಗ ಅನುಮೋದನೆ ಕೊಡಿಸಿ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಈ ಬಗ್ಗೆ ರಾಜ್ಯದಲ್ಲಿ ಕಂದಾಯ ಹಾಗೂ ಸರ್ಕಾರದ ಕಾರ್ಯದರ್ಶಿಗಳ ಜತೆಗೆ ಚರ್ಚಿಸಿ ಕ್ರಮವಹಿಸಲಾಗುವುದು. ಇನ್ನು ಬಂಗಾರಪೇಟೆ ಆರ್‌ಸಿ 166 ಕೆಲಸ ನೆಡಯುತ್ತಿದ್ದು
ಕೆಜಿಎಫ್‌ಯಿಂದ ಬೆಂಗಳೂರಿಗೆ ಬೋಗಿಗಳ ಸಂಖ್ಯೆ ಹೆಚ್ಚಿಸಬೇಕಿರುವ ಬೇಡಿಕೆಯಿದ್ದು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ವೈಟ್ ಫೀಡ್ ರೈಲ್ವೆ ಲೈನ್ ಆಗಬೇಕಾಗಿರುವ ಬೇಡಿಕೆಯಿದ್ದು, ರಾಜ್ಯ ಸರ್ಕಾರವು ಸಹಕಾರ ನೀಡಬೇಕಿದೆ. ರಾಷ್ಟç ಮಂತ್ರಿಯಾಗಿದ್ದರು ಸಹ ರಾಜ್ಯಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ರಾಷ್ಟçದ ಅಭಿವೃದ್ಧಿಯಲ್ಲಿ ರಾಜ್ಯವು ಸೇರಬೇಕು ಎಂಬುದು ನಮ್ಮ ಉದ್ದೇಶ. ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಲ್ಲಿ ಘೋಷಣೆಯಾಗಿದ್ದ ಕೆಲಸಗಳು ಇನ್ನು ಪುಸ್ತಕದಲ್ಲೇ ಉಳಿದಿದ್ದು ಕಾರ್ಯಗತಗೊಳಿಸಲಾಗುವುದು. ರಾಜ್ಯದಲ್ಲಿ ಯಾವುದೇ ರೈಲ್ವೆ ಕೆಲಸ ಆಗಬೇಕಿದ್ದಾಗ ಹಣದ ಪಾಲು ನೀಡಬೇಕಿತ್ತು. ಇದೀಗ ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸುವ ಕೆಲಸ ಮಾಡುತ್ತಿದೆ.
ಮೋದಿಜಿ ಅವರು ೧೦೨೦೬ ಆರ್‌ಒಬಿ ನಿರ್ಮಾಣ ಆಗಿದ್ದು, ಅದು ರಾಜ್ಯದಲ್ಲಿ ೬೦೦ ಸಿಕ್ಕಿವೆ, ಇದರ ಜತೆಗೆ ರಾಷ್ಟಿçÃಯ ಹೆದ್ದಾರಿಗೂ ಸರ್ಕಾರ ಆಧ್ಯತೆ ನೀಡಿದೆ ಎಂದು ತಿಳಿಸಿದರು.
ರೈಲ್ವೆ ರಸ್ತೆ ನಿರ್ಮಾಣಕ್ಕೆ ಆಗುವ ಭೂಮಿಗೆ ಸ್ವಾಧೀನಕ್ಕೆ ನಾವ್ಯಕೆ ಹಣ ಕೊಡಬೇಕು, ಕೇಂದ್ರದವರೆ ಕೊಟ್ಟುಕೊಡಲಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ದೇಶ ಅಭಿವೃದ್ಧಿಯಾಗಬೇಕಾದರೆ, ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ ಅಭಿವೃದ್ಧಿಯಾಗಬೇಕು. ಸಿದ್ದರಾಮಯ್ಯ ಅವರು ಎರಡು ಭಾರಿ ಮುಖ್ಯಮಂತ್ರಿ ಆಗಿದ್ದವು, ಏನು ಕೆಲಸ ಆಗಬೇಕು ಎಂಬುದರ ಬಗ್ಗೆ ಗಮನದಲ್ಲಿ ಇರಬೇಕು. ಅಭಿವೃದ್ಧಿಗಾಗಿ ಸಂಪರ್ಕಿಸಿ ಚರ್ಚೆ ನಡೆಸುತ್ತೇನೆ. ಅವರನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇವೆ. ಅವರನ್ನ ಕೇಳುತ್ತಿರೊದು ಜಮೀನು ಮಾತ್ರ. ಒಕ್ಕೂಟದ ವ್ಯವಸ್ಥೆಯಲ್ಲಿ ಆಗಬೇಕಾಗಿರುವ ಕೆಲಸಗಳಿಗೆ ಸಹಕಾರ ನೀಡಕಾಗಿರುವ ಜವಾಬ್ದಾರಿ ರಾಜ್ಯಗಳ ಮೇಲಿದೆ ಎಂದು ತಿಳಿಸಿದರು.
ಸುಮಾರು 49,000 ಕೋಟಿ ವೆಚ್ಚದ ಕೆಲಸಗಳು ಬಾಕಿ ಹಿಂದಿನ ಸರ್ಕಾರದಿಂದ ಉಳಿದುಕೊಡಿದ್ದವು. ರಾಯದುರ್ಗ-ತುಮಕೂರು, ಧಾವಣಗೆರೆ, ಹುಬ್ಬಳಿ ಧಾರವಾಡ, ಬಾಗಲಕೋಟೆ ಯೋಜನೆಗಳನ್ನು ತೆಗೆದುಕೊಂಡಿದೇವೆ.
ತುಮಕೂರು, ಚಿತ್ರದುರ್ಗ, ಹಂಕೋಲ, ಶಿವಮೊಗ್ಗ ರಾಣಿಬೆನ್ನೂರು, ಕಡೂರು, ಚಿಕ್ಕಮಗಳ್ಳೂರು, ಬೇಲೂರು, ಮಾರಿಕುಪ್ಪಂ, ಕುಪ್ಪಂ, ಉಬ್ಬಳಿ, ಗದಗ, ವಾಡಿ, ಹೆಡಿಗೇರೆ, ರಾಯಚೂರು ಬಾಕಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದೇವೆ. ಜತೆಗೆ ಕೋಲಾರ-ವೈಟ್‌ಫೀಲ್ಡ್ ಮಾರ್ಗದ ಬೇಡಿಕೆಯಿದ್ದು ಅದಾಷ್ಟು ಬೇಕ ಜಾರಿಗೆ ತರಲಾಗುವುದು ಎಂದರು.
ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕಾಗಿ 2014 ಜನವರಿಯಲ್ಲೇ ಕೇಂದ್ರದಿಂದ ಅನುಮೋದನೆಯಾಗಿ ರಾಜ್ಯ ಸರ್ಕಾರದಿಂದ ಜಮೀನು ಹಸ್ತಾಂತರ ಮಾಡಲು ಕೋರಲಾಗಿತ್ತು. ಇದಾದನಂತರ ಕೋಚ್ ಫ್ಯಾಕ್ಟರಿ ಮಾಡಲು ಗ್ಯಾರೇಜ್ ನಿರ್ಮಾಣ ಉದ್ದೇಶಲಾಗಿತ್ತು, ಅತಿಹೆಚ್ಚಾಗಿ ಗ್ಯಾರೇಜ್‌ಗಳು ಇದ್ದುದ್ದರಿಂದ ಕೈಬಿಡಲಾಗಿದೆ ಎಂದರು.
ಸAಸದ ಎಂ.ಮಲ್ಲೇಶ್ ಬಾಬು, ಎಂಎಲ್ಸಿ ಇಂಚರ ಗೋವಿಂದರಾಜು, ಮಾಜಿ ಎಂಎಲ್ಸಿ ಚೌಡರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕರಾದ ವೆಂಕಟಮುನಿಯಪ್ಪ, ವೈ.ಸಂಪAಗಿ, ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ಕಾರ್ಯದರ್ಶಿ ರಾಜೇಶ್ ಸಿಂಗ್, ಮಾದ್ಯಮ ಕಾರ್ಯದರ್ಶಿ ಕೆಂಬೋಡಿ ನಾರಾಯಣಸ್ವಾಮಿ ಹಾಜರಿದ್ದರು.