ಕೆ.ವೈ.ನಂಜೇಗೌಡ  
ಕೋಲಾರ

ರಿಯಲ್​ ಎಸ್ಟೇಟ್​ ಗಿರಾಕಿಯಲ್ಲ, ರಿಯಾಲ್ಟಿ ರಾಜಕಾರಣಿ

ಕೋಲಾರ: ಮಂಜುನಾಥ್​ ಗೌಡ, ಹೂಡಿ ವಿಜಯ್​ ಕುಮಾರ್​ ರಿಯಲ್​ ಎಸ್ಟೇಟ್​ ಗಿರಾಕಿಗಳಾಗಿದ್ದು, ರಿಲ್​ ಮಾಡುತ್ತಾರೆ. ನಾನು ರಿಯಾಲ್ಟಿ ರಾಜಕಾರಣಿ, ಯಾರೆ ಬಂದರು ಎದುರಿಸಲು ಸಿದ್ದನಿದ್ದೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, 1986ರಲ್ಲಿ ರಾಜಕೀಯ ಪ್ರವೇಶ ಮಾಡಿದವರು ನಾವು, ಅಂದಿನಿಂದಲೂ ಜನ ಜತೆಯಿದ್ದು ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೆವೆ ಎಂದರು.
ಹಿಂದೆ ಎಡವಿದ ಹಾಗೆ ಮುಂದಿನ 2028ರ ಚುನಾವಣೆಯಲ್ಲಿ ಎಡುದಿಲ್ಲ. ಚುನಾವಣೆಗೆ ಈಗಿನಿಂದಲೇ ಪೂರ್ವ ತಯಾರಿ ನಡೆಸಲಾಗುತ್ತಿದೆ. ಬಿಜೆಪಿ& ಜೆಡಿಎಸ್​ನಲ್ಲಿ ಟಿಕೆಟ್​ ಗೊಂದಲವಿದೆ, ಕಾಂಗ್ರೆಸ್​ನಲ್ಲಿ ಯಾವುದೇ ರೀತಿ ಗೊಂದಲವಿಲ್ಲ. ನನ್ನ ಪಕ್ಷ ಕಾಂಗ್ರೆಸ್​ ಆಗಿದ್ದು ಯಾರೇ ಎದುರಾಳಿ ಆದರೂ ಗೆಲುವು ಖಚಿತ ಎಂದರು.
ಬಿಜೆಪಿ&ಜೆಡಿಎಸ್​ ಒಂದೇ ನಾಣ್ಯದ ಎರಡು ಮುಖಗಳು, ಮಂಜುನಾಥ್​ ಗೌಡರು ಮಾತನಾಡುತ್ತಾ ಅನೇಕ ವಿಚಾರಗಳ ಬಗ್ಗೆ ಮಾತನಾಡಿ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಮ್ಮಿಶ್ರ ಸರ್ಕಾರ ಬೀಳು ಯಾರನ್ನು ಎಲ್ಲೆಲ್ಲಿಗೆ ಕರೆದುಕೊಂಡು ಹೋದರು ಎಂಬುದು ಗೊತ್ತಿದೆ. ಸಮ್ಮಿಶ್ರ ಸರ್ಕಾರ ಉರಳಲು ಮಂಜುನಾಥ್​ ಗೌಡ ಶ್ರಮ ಇದೆ ಎಂದು ಕುಟುಕಿದರು.
ಬಿಜೆಪಿ&ಜೆಡಿಎಸ್​ ಒಂದಾಗಿ ನಾಳೆ ಬೆಳಗ್ಗೆ ರಾಜೀಯಾಗಬಹುದು. ಅವರು ಒಂದಾದರು ಆಗಲಿ, ವಿಂಗಡಣೆಯಾದರು ಆಗಲಿ. 2028ರ ಚುನಾವಣೆಗೆ ಜೆಡಿಎಸ್​ನಿಂದ ಹೂಡಿ ವಿಜಯ್​ ಕುಮಾರ್​, ಬಿಜೆಪಿಯಿಂದ ಮಂಜುನಾಥ್​ ಗೌಡನ, ಅವರಲ್ಲಿ ಈಗಲೂ ಗೊಂದಲ ಇದೆ. ಕಾಂಗ್ರೆಸ್​ನಿಂದ ನಂಜೇಗೌಡ ಒಬ್ಬಾನೆ ಅಭ್ಯರ್ಥಿ ಎಂದು ತಿಳಿಸಿದರು.
ಒಬ್ಬರು ಬೆಂಗಳೂರಿನವರು, ಇನ್ನೊಬ್ಬರು ಕೋಡಿಹಳ್ಳಿಯವರು, ನಾನು ಲೋಕಲ್​. ಸದಾ ಜನರ ಜೊತೆಗೆ ಇದ್ದು ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ. ಕ್ಷೇತ್ರದಲ್ಲಿ ಇತ್ತೀಚಿಗೆ ಭೂ ಹಗರಣಗಳು ಬೆಳಕಿಗೆ ಬಂದಿದ್ದು, ತನಿಖೆಗೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದರ ಹಿಂದೆ ಯಾರೆ ಇದ್ದರು ಸಹ ಬಿಡುವ ಪ್ರಶ್ನೆಯಿಲ್ಲ. ನಾನು ಭೂ ಅಕ್ರಮ ತೊಡಗಿದ್ದೇನೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಸಾಭೀತುಪಡಿಸಿದರೆ ಶಿೆಗೆ ಸಿದ್ದ ಎಂದು ಸವಾಲು ಹಾಕಿದರು.