Privatization of electricity will cut into your pocket
ವೇಮಗಲ್: ರಾಜ್ಯದಲ್ಲಿ ವಿದ್ಯುತ್ ವಿತರಣಾ ಪರವಾನಗಿ ಖಾಸಗಿ ಕಂಪನಿಗೆ ನೀಡದಂತೆ, ಜತೆಗೆ ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸದಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ವೇಮಗಲ್, ನರಸಾಪುರ, ಕ್ಯಾಲನೂರು ಭಾಗದ ಹೋರಾಟಗಾರರು, ನೌಕರರ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ವೇಮಗಲ್ ಬಯಲು ರಂಗಮಂದಿರದಿಂದ ಪ್ರಾರಂಭವಾದ ಹೋರಾಟ ಜಾಥಾ ರಾಮಶೆಟ್ಟಿ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ನಂತರ ಕುರುಗಲ್ ಪಪಂ ಕಚೇರಿ ಮುಂದೆ ಪ್ರತಿಭಟಿಸಲಾಯಿತು.
ಹಸಿರು ಸೇನೆ ಯುವ ಘಟಕ ಅಧ್ಯಕ್ಷ ರಾಮುಶಿವಣ್ಣ ಮಾತನಾಡಿ, ವಿದ್ಯುತ್ ಖಾಸಗೀಕರಣವಾದರೆ ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್ ರದ್ದಾಗುತ್ತದೆ. ರೈತರ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಿ ಬಡವರಿಗೆ ನೀಡುವ ವಿದ್ಯುತ್ ಯೋಜನೆಗಳಾದ ಗೃಹಜೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಗಂಗಾ ಕಲ್ಯಾಣ ಯೋಜನೆಗಳು ರದ್ದಾಗುತ್ತವೆ. ಜತೆಗೆ ಸಣ್ಣ ಕೈಗಾರಿಕೆಗಳಿಗೆ ನೀಡುವ ರಿಯಾಯಿತಿ ದರದ ವಿದ್ಯುತ್ ನಿಲ್ಲಲಿದೆ. ಕಾಲಾಂತರದಲ್ಲಿ ವಿದ್ಯುತ್ ಬಳಕೆಯ ಮೇಲೆ ಹೆಚ್ಚಿನ ದರ ನಿಗದಿ ಮಾಡುತ್ತಾರೆ ಎಂದರು.
ವಿದ್ಯುತ್ ಖಾಸಗೀಕರಣಗೊಂಡರೆ ಖಾಸಗಿ ಕಂಪನಿ ಹಿಡಿತದಲ್ಲಿರುತ್ತದೆ. ಈಗ ಕೃಷಿ ಪಂಪ್ಸೆಟ್ಗಳಿಗೂ ವಿದ್ಯುತ್ ಬಳಕೆಗೆ ಮುಂಗಡ ಹಣ ಪಾವತಿ ಮಾಡಬೇಕಾಗುತ್ತದೆ ಎಂದರು.
ಜಿ.ನಾರಾಯಣಸ್ವಾಮಿ, ಎಂಐಸಿಟಿ ಮಂಜುನಾಥ್, ಕಲ್ವಮಂಜಲಿ ಸಿ. ಶಿವಣ್ಣ, ಮಡಿವಾಳ ಮುನಿರಾಜು, ಕೃಷ್ಣಯ್ಯ, ಶಬೀರ್, ಕೆಇಬಿ ಚಂದ್ರು, ಸುಧಾಕರ್, ನಾಗರಾಜ್, ರಮೇಶ್, ಸತೀಶ್, ವೆಂಕಟೇಶ್, ನಾಗಭೂಷಣ್, ಕೃಷ್ಣಪ್ಪ, ಬ್ಯಾಟಪ್ಪ, ಸಂಜೀವಯ್ಯ, ಆಂಜಿನಪ್ಪ, ಬೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್ಗಳಾದ ಗುರಪ್ಪ, ಕೋಟ ರೆಡ್ಡಿ, ನಾಗರತ್ನ, ಆಲಿ, ಭಾಷಾ, ಚೌಡರೆಡ್ಡಿ, ಪ್ರಭಾಕರ್, ಪಪಂ ಅಧ್ಯಕ್ಷ ಅನುಷಾ ಡಿ ಮುನಿರಾಜು ಇದ್ದರು.