ಕೋಲಾರ ನಗರ ಬಸ್ ನಿಲ್ದಾಣದ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿರುವ ಪ್ರಯಾಣಿಕರು.
ಕಿರುವಾರ ಎಸ್.ಸುದರ್ಶನ್ ಕೋಲಾರ
ಪ್ರಯಾಣಿಕರು ನಗರ ಸೇರಿದಂತೆ, ವಿವಿಧ ತಾಲೂಕುಗಳಿಗೆ ಬೇರೆಬೇರೆ ಕಡೆ ಪ್ರಯಾಣಿಸಬೇಕಾದರೆ ಬಸ್ ನಿಲ್ದಾಣದಲ್ಲಿ ತಾಸುಗಟ್ಟಲೇ ಕಾತರೂ ಸಹ ಬಸ್ ಅಲಭ್ಯತೆ ಹೆಚ್ಚುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೋಲಾರದಿಂದ ಹೊರ ರಾಜ್ಯ, ಹೊರ ಜಿಲ್ಲೆ, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳು ಇವೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳು, ಹೊರ ರಾಜ್ಯಕ್ಕೆ ಹೋಗುವ ಬಹುತೇಕ ಪ್ರಯಾಣಿಕರು ಬಸ್ ಸಂಚಾರವನ್ನೇ ಅವಲಂಭಿಸಿದ್ದಾರೆ.
ಜಿಲ್ಲೆಯ ಗಡಿ ಗ್ರಾಮಗಳಿಗೆ ಸಂಚರಿಸುತ್ತಿದ್ದ ಸಾರಿಗೆ ಬಸ್ಗಳ ಸಂಚಾರ ಬಹುತೇಕ ಮಾರ್ಗಗಳಲ್ಲಿ ಸ್ಥಗಿತಗೊಳಿಸಿದ್ದು, ಅದನ್ನು ಪುನಾರಂಭಿಸಬೇಕು ಎಂ ಒತ್ತಾಯ ಕೇಳಿ ಬಂದಿದೆ.
ಆಂಧ್ರ, ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಕೋಲಾರ ಜಿಲ್ಲೆಯಿಂದ ಹೊರ ರಾಜ್ಯ ಮಾರ್ಗಗಳಲ್ಲಿ ಬಸ್ಗಳು ಸಂಚರಿಸುತ್ತಿವೆ. ಜತೆಗೆ ಗ್ರಾಮೀಣ ಭಾಗಕ್ಕೂ ಹಲವು ಮಾರ್ಗಗಳಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಕೋವಿಡ್ ಕಾಲಟ್ಟದಲ್ಲಿ ಹಾಗೂ ಶಕ್ತಿ ಯೋಜನೆ ಜಾರಿಯ ನಂತರ ಹಲವು ಮಾರ್ಗಗಳನ್ನು ಸ್ಥಗಿತಗೊಳಿಸಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಒಟ್ಟು 582 ಬಸ್ಗಳಿದ್ದು, ಅವುಗಳ ಪೈಕಿ 553 ಬಸ್ಗಳು ನಿತ್ಯ 4 ಸಾವಿರಕ್ಕೂ ಹೆಚ್ಚು ಮಾರ್ಗಗಳಲ್ಲಿ 6 ದೊಡ್ಡ ಬಸ್ ನಿಲ್ದಾಣ, 2 ಪುರಸಭೆ ಬಸ್ ನಿಲ್ದಾಣಗಳಿಂದ ಸಂಚರಿಸುತ್ತಿವೆ. ಆದರೆ ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್ ಸಂಚಾರ ಆಗದೆ ಇರುವುದು ಪ್ರಯಾಣಿಕರು ವಿವಿಧ ಕೆಲಸಗಳ ನಿಮಿತ್ತ ನಗರಕ್ಕೆ ಬರಬೇಕಾದರೆ ಖಾಸಗಿ ಆಟೋ, ಬಾಡಿಗೆ ವಾಹನಗಳ ಮೇಲೆ ಅವಲಂಭನೆಯಾಗಬೇಕಾಗಿದೆ.
ಇಚೆಗೆ ನಡೆದ ಪಂಚ ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲೂ ಮಾರ್ಗಗಳನ್ನು ಕಡಿತಗೊಳಿಸಿರುವ ಕುರಿತು ವಿವಿಧ ತಾಲೂಕುಗಳ ಅಧ್ಯಕ್ಷರು, ಸದಸ್ಯರು ವ್ಯಾಪಕ ಚರ್ಚೆ ಮಾಡಿದ್ದಾರೆ. ಜತೆಗೆ ಸಾರ್ವಜನಿಕರಿಂದ ಬಂದಿರುವ ದೂರುಗಳು ಕುರಿತು ಪ್ರಾಧಿಕಾರದ ಉಪಾಧ್ಯಕ್ಷರ ಗಮನಕ್ಕೆ ತಂದು, ಸ್ಥಗಿತಿಗೊಳಿಸಿರುವ ಮಾರ್ಗಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
* ಗ್ರಾಮಗಳಿಗೆ ಬಸ್ ಸೇವೆ ಹೆಚ್ಚಿಸಲಿ
ಜಿಲ್ಲಾ ಕೇಂದ್ರವಾದ ಕೋಲಾರದಿಂದ ಹಲವು ಹಳ್ಳಿಗಳ ಮಾರ್ಗದಲ್ಲಿ ವಿವಿಧ ತಾಲೂಕುಗಳಿಗೆ, ತಾಲೂಕುಗಳಿಂದ ಕೋಲಾರಕ್ಕೆ ಏಕ ಸಂಚಾರ ಮಾಡುತ್ತಿದ್ದವು. ಜತೆಗೆ ತಾಲೂಕು ಕೇಂದ್ರಗಳಿಂದ ಗ್ರಾಮಗಳಿಗೆ ಸಂಚಾರಿಸುತ್ತಿದ್ದ ಬಹುತೇಕ ಮಾರ್ಗಗಳನ್ನು ಕಡಿತಗೊಳಿಸಲಾಗಿತ್ತು.
ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಪುನಾರಂಭಿಸಲಾಯಿತಾದರು ಬಹಳ ವಿರಳವಾಗಿ ಪ್ರಯಾಣಿಕರು ಸಂಚರಿಸುತ್ತಿದ್ದ ಮಾರ್ಗಗಳಲ್ಲಿ ಬಸ್ ಸಂಚಾರ ನಿಲ್ಲಿಸಲಾಗಿದೆ.
ಮುಳಬಾಗಿಲು, ಕೆಜಿಎ್, ಬಂಗಾರಪೇಟೆ, ಶ್ರೀನಿವಾಸಪುರ ಹಾಗೂ ಮಾಲೂರು ತಾಲೂಕು ವ್ಯಾಪ್ತಿಯ ಗ್ರಾಮಗಳಿಗೆ ಹೋಗುತ್ತಿದ್ದ ಬಸ್ ಸಂಚಾರ ಕಲ್ಪಿಸಲು ಸಾರ್ವಜನಿಕರ ಒತ್ತಾಯ ಕೇಳಿ ಬಂದಿದೆ.
ಕೋಲಾರ ಸೇರಿದಂತೆ ವಿವಿಧ ತಾಲೂಕುಗಳಿಂದ ಬೆಂಗಳೂರು ಅಥವಾ ಬೇರೆ ಜಿಲ್ಲೆಗೆ ಹೋಗಬೇಕಾದರೆ ಸಕಾಲಕ್ಕೆ ಬಸ್ ವ್ಯವಸ್ಥೆಯಿಲ್ಲ. ಕೆಲಸಕ್ಕೆ ಹೋಗುವವರು ತಡವಾಗಿ ಹೋಗಬೇಕಾಗು ಪರಿಸ್ಥಿತಿ ಎದುರಾಗಿದೆ.
ಶಾಲಾ ಕಾಲೇಜುಗಳಿಗೆ ಬರುವ ಹಾಗೂ ತರಗತಿ ಮುಗಿಸಿಕೊಂಡು ಮನೆಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸ್ ಸಿಗುತ್ತಿಲ್ಲ ಎಂಬ ಆರೋಪವಿದೆ. ಬಸ್ ಸಿಗದೆ ಇರುವುದನ್ನು ನಿಲ್ದಾಣದಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಬರುವ ಕಾಯಬೇಕಾಗಿದ್ದು, ಬಸ್ಗಳು ಸಿಗೋದೆ ಕಷ್ಟ.
* ನಗರ ಸಾರಿಗೆ ವಿಸ್ತರಣೆಗೂ ಬೇಡಿಕೆ
ಕೋಲಾರ ನಗರ ಬಸ್ ನಿಲ್ದಾಣದಿಂದ 4 ಬಸ್ಗಳನ್ನು ಸಂಗೊಂಡಹಳ್ಳಿ, ಹಾಸಳಗೇಟ್, ವಡಗೂರು, ಛತ್ರಕೋಡಿಹಳ್ಳಿ, ಅರಹಳ್ಳಿ ತನಕ ನಗರ ಸಾರಿಗೆ ಸಂಚಾರ ನಡೆಯುತ್ತಿದೆ.
ನಗರ ಸಾರಿಗೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಾಸಳಗೇಟ್ನಿಂದ ದಿಂಬ, ಅಮ್ಮೇರಹಳ್ಳಿಯಿಂದ ವಕ್ಕಲೇರಿ, ವಡಗೂರಿನಿಂದ ತಿಮ್ಮಸಂದ್ರ, ಗಿರ್ನಹಳ್ಳಿ, ಚನ್ನರಾಯಪುರ, ಸಂಗೋಡಹಳ್ಳಿಯಿಂದ ವೇಮಗಲ್ ತನಕ ನಗರ ಸಾರಿಗೆ ವಿಸ್ತರಣೆ ಮಾಡಿದೆರ ಅನುಕೂಲವಾಗಲಿದೆ ಎಂಬುದು ಪ್ರಯಾಣಿಕರ ಬೇಡಿಕೆಯಾಗಿದೆ.
ಬೇಡಿಕೆ ಹೆಚ್ಚಿರುವುದರಿಂದ ಟಮಕ, ದಿಂಬ ಮಾರ್ಗದಲ್ಲಿ ಹೆಚ್ಚಗಿ ಸರ್ಕಾರಿ ಇಲಾಖಾ ಕಚೇರಿಗಳು, ಶಾಲಾ ಕಾಲೇಜುಗಳಿದ್ದು ಬಸ್ಗಳ ಸಂಖ್ಯೆ ಹೆಚ್ಚಿಸಬೇಕಾಗಿದೆ. ಜತೆಗೆ ಬಸ್ ನಿಲ್ದಾಣದಲ್ಲಿ ನಗರ ಸಾರಿಗೆ ಬಸ್ ಸಂಚಾರ ಕುರಿತು ವೇಳಾ ಪಟ್ಟಿ ಅಳವಡಿಸಬೇಕು.
ಕೋವಿಡ್ ನಂತರ ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರ ಕಲ್ಪಿಸಲಾಯಿತು. ಪ್ರಯಾಣಿಕರ ಸಂಖ್ಯೆ ಕಡಿ ಆಗಿದ್ದರಿಂದ ನಿಲ್ಲಿಸಲಾಗಿದ್ದು, ಇದರ ಜತೆಗೆ ಬೇಡಿಕೆ ಇರುವ ಮಾರ್ಗಗಳಲ್ಲಿ ಸೇವೆ ಪ್ರಾರಂಭಿಸಲಾಗುತ್ತಿದೆ.
- ಶ್ರೀನಾಥ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್ಆರ್ಟಿಸಿ, ಕೋಲಾರ.
ಕೋವಿಡ್ ನಂತರ ಗ್ರಾಮಗಳಿಗೆ ಸಂಚರಿಸುತ್ತಿದ್ದ ಮಾರ್ಗಗಳನ್ನು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಬಸ್ಗಳ ಕೊರತೆಯಿದ್ದರೆ ಸರ್ಕಾರಕ್ಕೆ ಪತ್ರ ಬರೆದು ತರಸಿಕೊಂಡು ಮರು ಚಾಲನೆ ನೀಡಲು ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ.
- ವೈ.ಶಿವಕುಮಾರ್, ಗ್ಯಾರೆಂಟಿ ಯೋಜನೆ ಪ್ರಾಧಿಕಾರ ಅಧ್ಯಕ್ಷ.