ಚಿಕ್ಕಬಳ್ಳಾಪುರ ಹಾಲಿನ ಒಕ್ಕೂಟದ ಡೇರಿ
ಚಿಕ್ಕಬಳ್ಳಾಪುರ: ಹೊಸ ವರ್ಷದ ಕೊಡುಗೆಯಾಗಿ ಜಿಲ್ಲಾ ಹಾಲು ಒಕ್ಕೂಟವು ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ ನೀಡಲಾಗುವ ದರದಲ್ಲಿ ೧ ರೂ ಹೆಚ್ಚಿಸಿದೆ.
ಜ.೧ ರಿಂದ ಮುಂಬರುವ ಮೂರು ತಿಂಗಳವರೆಗೆ ರೈತರಿಗೆ ಏರಿಕೆಯ ದರದ ಸಿಗಲಿದೆ. ಪ್ರಸ್ತುತ ಲೀಟರ್ ಹಾಲಿನ ದರ ೩೬.೪೦ ರೂ ಇದೆ.
ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೊಟವು ಬೇರ್ಪಟ್ಟ ಸಂದರ್ಭದಲ್ಲಿ 3.90 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿತ್ತು. ಈಗ 5.0 ಲಕ್ಷ ಲೀಟರ್ ಗೆ ಏರಿಕೆಯಾಗಿದೆ. ಪ್ರಸ್ತುತ ಚಳಿಗಾಲವಿರುವುದರಿಂದ ಹಾಲಿನ ಉತ್ಪಾದನೆ ಪ್ರಮಾಣವು ನಿರಂತರವಾಗಿ ಕಡಿಮೆಯಾಗುತ್ತಿದೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ರೈತರಿಗೆ ನೆರವು ನೀಡುವ ಉದ್ದೇಶದೊಂದಿಗೆ ಒಕ್ಕೂಟವು ಲೀಟರ್ ಹಾಲಿನ ದರ ಏರಿಕೆಯ ತೀರ್ಮಾನ ತೆಗೆದುಕೊಂಡಿದೆ. ಇದರಿಂದಾಗುವ ಲಾಭವು ಮೂರು ತಿಂಗಳ ಅವಧಿವರೆಗೂ ಸಿಗಲಿದೆ. ಬಳಿಕ ಅಂದಿನ ಪರಿಸ್ಥಿತಿಯನ್ನು ನೋಡಿಕೊಂಡು ಹಾಲಿನ ದರ ಏರಿಕೆ, ಇಳಿಕೆಯ ತೀರ್ಮಾನ ಕೈಗೊಳ್ಳುವ ಮಾತನ್ನು ಹೇಳಲಾಗುತ್ತಿದೆ.