ಶರಣ ಪ್ರಕಾಶ್​ ಪಾಟೀಲ್​  
ಕೋಲಾರ

ಸಚಿವ ಸ್ಥಾನ ಸಿಎಂ, ಹೈಕಮಾಂಡ್​ಗೆ ಬಿಟ್ಟ ವಿಚಾರ

ಕಿರುವಾರ ಎಸ್.ಸುದರ್ಶನ್
ಕೋಲಾರ: ಸಚಿವ ಸಂಪುಟ ಪುನರಚರನೆಯಾಗುವುದು ಯಾವುದೇ ಸರ್ಕಾರದಲ್ಲಿ ಸಹಜ. ಆ ಸಂದರ್ಭದಲ್ಲಿ ಶಾಸಕರಾದವರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಾರೆ, ಆದರೆ ಇದನ್ನೆಲ್ಲ ಸಿಎಂ, ಹೈಕಮಾಂಡ್​ ನೋಡಿಕೊಳ್ಳುತ್ತಾರೆ ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್​ ಪಾಟೀಲ್​ ಹೇಳಿದರು.
ಜಿಲ್ಲೆಯ ಟೇಕಲ್​ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸ್ಥಾನದ ಅಕಾಂ ಶಾಸಕರು ದೆಹಲಿ ಪ್ರವಾಸ ಮಾಡಿ ಬೇಡಿಕೆ ಇಟ್ಟಿದ್ದಾರೆ. ಹೈಕಮಾಂಡ್​ ತೀಮಾರ್ನ ಏನಾಗುತ್ತದೊ ನೋಡಬೇಕು, ಅವರ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ, ಇದಕ್ಕೆ ಹೆಚ್ಚಿನ ಅರ್ಥ ಕೊಡುವ ಅವಶ್ಯಕತೆ ಇಲ್ಲ. ಶಾಸಕರು ಅವಕಾಶ ಕೇಳೋದು ತಪ್ಪೇನಿಲ್ಲ ಎಂದರು.
ಮುಸ್ಲಿಂ ಮುಖಂಡರ ರಾಜಿನಾಮೆ ವಿಚಾರವಾಗಿ ಮಾತನಾಡಿ, ಪಕ್ಷದಲ್ಲಿ ಬಂದಿರುವ ರಿಪೊರ್ಟ್​ ಆಧರಿಸಿ ರಾಜೀಮಾನೆ ಪಡೆದಿರಬಹುದು. ಕೂಲಂಕುಶ ತನಿಖೆ ಮಾಡಿದ ಮೇಲೆ ನಿಜಾಂಶ ತಿಳಿಯಲಿದೆ. ಜಮೀರ್​ ಅಹಮದ್​ ಅವರು ಮುಂದಿನ ಗುರಿ ಎಂಬದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಪಕ್ಷ ವಿರೋಧಿ ಚಟುವಟಿಕೆ ತನಿಖೆ ನಡೆದ ಮೇಲೆ ಹೈಕಮಾಂಡ್​ ನಿರ್ಧಾರ ಮಾಡಲಿದೆ. ದಾವಣಗೆರೆ ವಿಚಾರವಾಗಿ ಯಾರ ತಲೆದಂಡವೂ ಆಗಿಲ್ಲ. ಹೈಕಮಾಂಡ್​ ಮಟ್ಟದಲ್ಲಿ ಆದ ರ್ನಿಣಯದ ಬಗ್ಗೆ ಮಾಹಿತಿ ಇಲ್ಲ, ಯಾರ ಮನೆಯಲ್ಲಿ ಸಾವಾಗುತ್ತೋ ಅವರ ಮನೆಗೆ ಟಿಕೆಟ್​ ನೀಡುವುದು ಕಾಂಗ್ರೆಸ್​ ಪಕ್ಷದಲ್ಲಿ ನಡೆದು ಬಂದಿರುವ ಪದ್ದತಿ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್​ ಪಕ್ಷದಲ್ಲಿ ಅಧಿಕಾರಗೊಂದಲದ ಬಗ್ಗೆ ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿ ಮಾತನಾಡಿ, ಸರ್ಕಾರದ ಬಗ್ಗೆ ಮಾತನಾಡಲು ವಿರೋಧ ಪಕ್ಷದವರಲ್ಲಿ ಏನೂ ಉಳಿದಿಲ್ಲ. ನಮ್ಮಲ್ಲಿ ಕಚ್ಚಾಟವಿಲ್ಲ, ಇರುವುದು ವಿರೋಧ ಪಕ್ಷಗಳ ನಾಯಕರಲ್ಲಿ ಎಂದು ವ್ಯಂಗ್ಯವಾಡಿದರು.
ಕೋಲಾರಕ್ಕೆ ಮೆಡಿಕಲ್​ ಕಾಲೇಜು ಮಂಜೂರು ಮಾಡಲು ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪರಿಶೀಲಿಸಿ ಅನುನೋದನೆ ನೀಡಲಾಗುವುದು ಎಂದು ಭರವಸೆ ನೀಡಿದರು.