ಕೋಲಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.
ಕೋಲಾರ: ರಾಜ್ಯ ಕಾಂಗ್ರೆಸ್ ಸರ್ಕಾರವು ಭ್ರಷ್ಟಚಾರದಲ್ಲಿ ಮುಳುಗಿದ್ದು, ಅಭಿವೃದ್ಧಿ ಬಿಟ್ಟು ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ವಿರುದ್ಧ ದಾಖಲೆ ಸಮೇತ ಮಾತನಾಡಿದರು ಸಹ ಬಂಡತನ ತೋರುತ್ತಿದೆ. ರಾಜ್ಯವನ್ನು ನಿರ್ವಹಣೆ ಮಾಡಲು ಬೇಕಾಗಿರುವ ಅನುಕೂಲಕ್ಕಾಗಿ ಭ್ರಷ್ಟಚಾರದಲ್ಲಿ ತೊಡಗಿದೆ ಎಂದು ದೂರಿದರು.
2014ರ ಲೋಕಸಭೆ ಚುನಾವಣೆಗೂ ಮುನ್ನ ಎತ್ತಿನ ಹೊಳಗೆ ಯೋಜನೆಗೆ ಚಾಲನೆ ನೀಡಿ ಒಂದು ವರ್ಷದಲ್ಲಿ ಕೋಲಾರ, ಚಿಕ್ಕಬಳ್ಳಾರಕ್ಕೆ ನೀರು ತರುವುದದಾಗಿ ಭರವಸೆ ನೀಡಿದರು. ಆಗ ಇದಕ್ಕೆ ವರ್ಷದಲ್ಲಿ ನೀರು ಹರಿದರೆ ತಲೆ ಬೊಳಿಸಿಕೊಳ್ಳುವುದಾಗಿ ಹೇಳಿದ್ದೆ. ದಶಕವೇ ಕಳೆದು ನೀರು ಬರಲಿಲ್ಲ, ಆದರೆ ಯೋಜನೆ ಗಾತ್ರ 33 ಸಾವಿರ ಕೋಟಿಗೆ ಹೆಚ್ಚಿಸಿಕೊಂಡು ಚುನಾವಣೆಗಳನ್ನು ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಜಿ ಸಂಸ್ಥೆಯು ಎತ್ತಿನ ಯೋಜನೆ ಬಗ್ಗೆ ಸಂಶೋಧನೆ ಮಾಡಿ ಕಳಪೆ ಕಾಮಗಾರಿ, ಅಳವಡಿಸಲಾಗಿರುವ ಪಂಪು ಮೋಟಾರು ತುಕ್ಕು ಹಿಡಿದಿರುವ ಬಗ್ಗೆ ವರದಿ ನೀಡಿದ್ದಾರೆ. ಕುಡಿಯುಲು ನೀರು ಕೇಳಿದಕ್ಕೆ ಕೆಸಿ ವ್ಯಾಲಿ ಮೂಲಕ ತ್ಯಾಜ್ಯ ನೀರು ಹರಿಸಿದರು. ಐಎಟಿ ಸೇರಿದಂತೆ ಸಂಶೋಧನಾ ಸಂಸ್ಥೆಯ ವರದಿಗಾಳ ಪ್ರಕಾರ ಇದು ಯೋಗ್ಯವಲ್ಲ ಎಂಬುದು ಸಾಭೀತಾಗಿದ್ದರು ಸಹ ಸರ್ಕಾರ ಬಯಲು ಸೀಮೆ ಜಿಲ್ಲೆಗಳ ಜತೆ ಚೆಲ್ಲಾಟವಾಡುತ್ತಿದೆ ಎಂದು ಹೇಳಿದರು.
* ಕೃಷ್ಣಾ ನೀರು ತರಲು ಸತತ ಪ್ರಯತ್ನ
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ತರುವ ಬಗ್ಗೆ ಶೀಘ್ರದಲ್ಲಿಯೇ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲೆಗಳಿಗೆ ನದಿಯ ನೀರು ಕೊಡುತ್ತೇವೆಂದು ಹೇಳಿ ಎತ್ತಿನಹೊಳೆ ಯೋಜನೆ ಮಾಡಿದರು. ಆದರೆ ಬೆಂಗಳೂರಿನ ರೊಚ್ಚು ನೀರು ಕೊಟ್ಟರು. ಮೂರನೇ ಹಂತದ ಶುದ್ಧೀಕರಣ ಮಾಡಿ ಎಂದರೂ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೃಷ್ಣಾ ನದಿಯ ನೀರು ಬಿಟ್ಟರೆ ನಮಗೆ ಬೇರೆ ದಾರಿ ಇಲ್ಲ ಎಂದು ಎಂದರು.
* ಕಾಂಗ್ರೆಸ್ನಲ್ಲಿ ಕುರ್ಚಿಗಾಗಿ ಕಿತ್ತಾಟ
ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಕೇಂದ್ರ ಸರ್ಕಾರದ ಮೇಲೆ ಹೊರೆಸುವುದನ್ನು ಕಾಂಗ್ರೆಸ್ ಮಾಡುತ್ತಿದೆ. ಈ ಪಕ್ಷದ ಮೇಲೆ ಜನ ವಿಶ್ವಾಸ ಇಟ್ಟು 140 ಸ್ಥಾನ ನೀಡಿದ್ದಾರೆ. ಮಾಡುವ ಕೆಲಸ ಬಿಟ್ಟು ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ಆದರೆ ಇರುವರೆಗೂ ರಾಜ್ಯಕ್ಕಾಗಿ ಆಗಬೇಕಾಗಿರುವ ಕೆಲಸದ ಬಗ್ಗೆ ನಮ್ಮ ಭೇಟಿ ಮಾಡಿ ಯಾವೊಬ್ಬ ಸಚಿವರು ಮಾಡಿಲ್ಲ. ನಮ್ಮ ಪ್ರಯತ್ನದಿಂದ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಂದ್ರ ಸರ್ಕಾರ ಮಾವಿಗೆ ಬೆಂಬಲ ಬೆಲೆ ನೀಡಿದೆ ಎಂದು ಹೇಳಿದರು.
* ನೋಟಿಸ್ಗೂ ನನಗೆ ಸಂಬಂಧವಿಲ್ಲ
ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿರುವುದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ರೈತರು ಬೀದಿಗೆ ಬಂದಾಗ ಮನೆಯಿಂದ ಹೊರಗಡೆ ಬರಲಿಲ್ಲ. ಈಗ ಅವರ ಬುಡಕ್ಕೆ ಬಂದಿದೆ ಎಂದು ಹೇಳಿ ಹೇಳಿಕೆ ನೀಡಿದರೆ ನಂಬಲು ಸಾಧ್ಯವಿಲ್ಲ. ಬಿಡದಿಯಲ್ಲಿ ಈ ಸರ್ಕಾರ ನನಗೂ ನೋಟಿಸ್ ಕೊಟ್ಟು ಕೊಡಬಾರದ ಕಾಟ ನೀಡಿತು. ಅದಕ್ಕೆ ರಮೇಶ್ ಕುಮಾರ್ ಅವರು ಕಾರಣ ಎಂದು ಹೇಳಿದರೆ ಆಗುತ್ತದೆಯೇ.? ನನ್ನ ವಿಚಾರಕ್ಕೆ ಎಸ್ಐಟಿ ರಚನೆ ಮಾಡಿದ್ದಾರೆ. ಅವರ ವಿಚಾರಕ್ಕೆ ಯಾಕೆ ರಚನೆ ಮಾಡಿಲ್ಲ ಏಕೆ ? ಕೋರ್ಟುಗಳು ಇವೆ, ಹೋರಾಟ ಮಾಡಲಿ, ನಾನು ಕೂಡ ಅದನ್ನೇ ಮಾಡುತ್ತಿದ್ದೇನೆ ಎಂದು ತಿಳಿಸಿದರು.
* ಬಿಜೆಪಿತೊಂದಿಗೆ ಚರ್ಚಿಸಿಯೇ ತೀರ್ಮಾನ
ರಾಜ್ಯದ ಯಾವುದೇ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಹಂಚಿಕೆ ಕುರಿತು ಮಾತುಕತೆ ಆಗಿಲ್ಲ. ಅದಕ್ಕೆ ಇನ್ನೂ ಸಮಯ ಇದೆ. ಬಿಜೆಪಿಯೊಂದಿಗೆ ಪರಸ್ಪರ ಮಾತಿನ ಮೂಲಕ ಎಲ್ಲವನ್ನು ತೀಮಾರ್ನ ಕೈಗೊಳ್ಳುತ್ತೇವೆ. ನಮ್ಮ ಮೊದಲ ಆದ್ಯತೆ ಜಿಲ್ಲಾ ಪಂಚಾಯಿತಿ ಮತ್ತು ಸ್ಥಳಿಯ ಸಂಸ್ಥೆ ಚುನಾವಣೆ ಗಮನ ನೀಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮಹಿಳಾ ಟಕದ ರಾಜ್ಯಾಧ್ಯೆ ರಶ್ಮಿ ರಾಮೇಗೌಡ, ಸಂಸದ ಮಲ್ಲೇಶ್ ಬಾಬು, ಶಾಸಕರಾದ ಜಿ.ಕೆ. ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಮೇಲೂರು ರವಿ, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಚ್.ಎಂ.ರಮೇಶ್ ಗೌಡ, ಡಾ.ಕೆ.ಅನ್ನದಾನಿ, ಸಿಎಂಆರ್ ಶ್ರೀನಾಥ್, ರಾಮೇಗೌಡ ಉಪಸ್ಥಿತರಿದ್ದರು.