ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೋಲಾರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ, ಬಹುಮಾನ ವಿತರಿಸಲಾಯಿತು. ಕೆ.ವಿ.ಶಂಕರಪ್ಪ, ಸುರೇಶ್, ವಿ.ಬಾಬು, ಸುಷ್ಮಾ ಇದ್ದರು.
ಕೋಲಾರ: ಪರಿಸರಕ್ಕೆ ಮಾನವ ಮಾರಕವಾಗಬಾರದು. ಅದನ್ನು ನಾಶ ಮಾಡಿದರೆ ಮುಂದಿನ ಮನುಷ್ಯನ ಉಳಿವು ಅಸಾಧ್ಯವಾಗುತ್ತದೆ. ಮಾನವನ ಆರೋಗ್ಯಕ್ಕಾಗಿ ಪರಿಸರ ರಕ್ಷಣೆ ಆಗಬೇಕು ಎಂದು ಭಾರತ್ ಸೈಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಹೇಳಿದರು.
ನಗರದ ಸೈಟ್ಸ್ ಭವನದಲ್ಲಿ ವಿಜಯವಾಣಿ, ಭಾರತ್ ಸೈಟ್ಸ್ ಮತ್ತು ಗೈಡ್ಸ್ ಸಂಸ್ಥೆ, ರೋಟರಿ ಕೋಲಾರ ನಂದಿನಿ ಮತ್ತು ವಂಶೋಧಯ ಆಸ್ಪತ್ರೆ, ಕೋಲಾರಮ್ಮ ಹಸಿರು ಪಡೆ ವತಿಯಿಂದ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ನಿಸರ್ಗ ಎಂದರೆ ಮಾನವ ಆರೋಗ್ಯ ಎಂದರ್ಥ, ಆದರೆ, ಅದನ್ನು ಈಗ ನಾನಾ ಕಾರಣಗಳಿಂದ ನಾಶಪಡಿಸಲಾಗುತ್ತಿದ್ದು, ಗಂಭೀರ ಕಾಯಿಲೆಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ. ಇದನ್ನು ಮನಗಂಡು ವಿದ್ಯಾರ್ಥಿಗಳು ಹಸಿರೀಕರಣ ಹೆಚ್ಚಿಸುವ ಮೂಲಕ ಪರಿಸರ ಸಂರಕ್ಷಣೆಗೆ ಪಣ ತೊಡಗಬೇಕು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಸಂಘಟಕ ವಿ. ಬಾಬು ಮಾತನಾಡಿ, ಹಿಂದೆ ಎಲ್ಲಿ ನೋಡಿದರೂ ಹಸಿರು ಕಾಣುತ್ತಿತ್ತು, ಉತ್ತಮ ಮಳೆ ಬೆಳೆಯಾಗಿ ಮನುಷ್ಯ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದ, ಆದರೆ, ಈಗ ಪರಿಸ್ಥಿತಿ ವ್ಯತಿರಿಕ್ತವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಕಳೆದ ಮೂರ್ನಾಲ್ಕು ವರ್ಷದಿಂದ ಹಸಿರು ಪಡೆ ಕಟ್ಟಿಕೊಂಡು ನಗರ ಸೇರಿದಂತೆ ವಿವಿಧೆಡೆ ಸರ್ಕಾರಿ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಹಿಂದೆ ನಾಟಿ ಮಾಡಿರುವ ಸಸಿಗಳು ಇದೀಗ ಮರಗಳಾಗಿ ಬೆಳೆದಿವೆ. ಇದಕ್ಕೆ ಸಹಕರಿಸಿದವರಿಗೆ ಅಭಿನಂದನೆ ತಿಳಿಸಿದರು.
ಮನುಷ್ಯ ಸಂಪಾದನೆ ಮಾಡಿದ ಆದಾಯದಲ್ಲಿ ಕೊಂಚ ಹಣವನ್ನು ವ್ಯರ್ಥ ಮಾಡುತ್ತಿರುತ್ತಾನೆ. ಅದನ್ನು ಮುಂದಿನ ಪೀಳಿಕೆಗೆ ಉಳಿವಿಗಾಗಿ ಹಸಿರು, ಮಾನೋಭಾವ ಇಟ್ಟುಕೊಂಡು ಹಸಿರು ಪಡೆಯೊಂದಿ ಸಹಕರಿಸಿದರೆ ಮತ್ತಷ್ಟು ಹಸಿರೀಕರಣ ಮಾಡಲು ಸಾಧ್ಯವಾಗುತ್ತದೆ. ಜನ್ಮದಿನಾಚರಣೆಯಂದು ವೆಚ್ಚ ಮಾಡುವ ಬದಲು ಒಂದು ಸಸಿ ನೆಟ್ಟು ಪೋಷಣೆ ಮಾಡಿದರೆ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಸದಸ್ಯತ್ವ ಹೊಂದಿರುವ ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣಗಳನ್ನು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೋಲಾರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ, ಬಹುಮಾನ ವಿತರಿಸಲಾಯಿತು. ಕೆ.ವಿ.ಶಂಕರಪ್ಪ, ಸುರೇಶ್, ವಿ.ಬಾಬು, ಸುಷ್ಮಾ ಇದ್ದರು.
ಪರಿಸರ ದಿನಾಚರಣೆ ಸಮಯದಲ್ಲಿ ಒಂದು ದಿನ ಗಿಡ ನೆಟ್ಟು ಅದನ್ನು ಮರೆಯಬಾರದು. ಆ ಗಿಡಕ್ಕೆ ವಿದ್ಯಾರ್ಥಿಗಳು ತಮ್ಮ ಹೆಸರನ್ನಿಟ್ಟು ನಿರಂತರ ಪೋಷಣೆ ಮಾಡುವ ಮೂಲಕ ಕೊಡುಗೆ ನೀಡಬೇಕು. ಆ ಶಾಲೆ ಬಿಟ್ಟ ನಂತರವೂ ಮರ ನೋಡಿದಾಗೆಲ್ಲ ತೃಪ್ತಿ ನೀಡುತ್ತದೆ ಎಂದು ಜಿಲ್ಲಾ ಪರಿಸರ ನಿಯಂತ್ರಣಾಧಿಕಾರಿ ವಸಂತ ಶ್ರೀ ಹೇಳಿದರು.ಪರಿಸರ ರಕ್ಷಣೆಗಾಗಿ ಜನಸಾಮಾನ್ಯರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಮಾನವನಿಂದ ಪರಿಸರಕ್ಕೆ ಆಗುವ ಹಾನಿ ತಡೆಗಟ್ಟಿ ನಿಸರ್ಗ ರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು, ಮಾಲಿನ್ಯ ಉಂಟು ಮಾಡುವ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು.
ವೃದ್ಧಿಸಿ ಸಮಾಜಕ್ಕೆ ಕೊಡುಗೆ ನೀಡುವ ಪ್ರಜೆಗಳನ್ನಾಗಿ ರೂಪಿಸಲಾಗುತ್ತಿದೆ. ಮತ್ತಷ್ಟು ವಿದ್ಯಾರ್ಥಿಗಳು ಸಂಸ್ಥೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಸೈಟ್ ಆಯುಕ್ತ ಸುರೇಶ್, ಶಿಕ್ಷಕರಾದ ಸತೀಶ್ ಕುಮಾರ್, ಸುಷ್ಟ, ಚಲಪತಿ ಮತಿತರರು ಹಾಜರಿದ್ದರು.
ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ವಿವಿಧ ಹಂತದ ವಿದ್ಯಾರ್ಥಿಗಳಿಗಾಗಿ ನಡೆಸಿದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಚಿತ್ರಗಳನ್ನು ಬಿಡಿಸಿದರು. ಆಮೂಲಕ ಜನರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಿದರು. ವಿಜೇತರಿಗೆ ಪ್ರಮಾಣ ಪತ್ರ, ಬಹುಮಾನ ವಿತರಿಸಲಾಯಿತು.
ಪ್ರಾಥಮಿಕ ವಿಭಾಗ : ಫರಾಜ್ ಖಾನ್ ಪ್ರಥಮ, ಹಸನ್ ಖಾನ್ ದ್ವಿತೀಯ, ಧನ್ವಿತ್ ತೃತೀಯ.
ಮಾಧ್ಯಮ ವಿಭಾಗ: ವರ್ಷಿಣಿ ಪ್ರಥಮ, ಹೇಮಪ್ರೀಯ ದ್ವಿತೀಯ, ಭಗತ್ ಗೌಡ ತೃತೀಯ.
ಪ್ರೌಢ ಶಾಲಾ ವಿಭಾಗ ವಿಭಾಗ : ರಾಗಿಣಿ ಪ್ರಥಮ, ರಿಷಿಕಾ ದ್ವಿತೀಯ, ಲಿಶಾಂತ್ ಗೌಡ ತೃತೀಯ.
ಪ್ರಾಥಮಿಕ ವಿಭಾಗ : ವಿನಮ್ರ ಪ್ರಥಮ, ಧನ್ಯಶ್ರೀ ದ್ವಿತೀಯ, ಗೌರವ್ ತೃತೀಯ.
ಅಮಾಧ್ಯಮಿಕ ವಿಭಾಗ : ಚಂದನ ಪ್ರಥಮ, ಸ್ಫೂರ್ತಿ ದ್ವಿತೀಯ, ರಚನಾ ತೃತೀಯ.
ಅಪ್ರೌಢ ಶಾಲೆ ವಿಭಾಗ : ಅವನಿಕ ಪ್ರಥಮ, ದೀಕ್ಷಾ ದ್ವಿತೀಯ, ಪ್ರಣತಿ ಲಕ್ಷ್ಮೀ ತೃತೀಯ.
ವಿವಿಧ ವಿಭಾಗದ ವಿದ್ಯಾರ್ಥಿಗಳು ಚಿತ್ರಕಲೆ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.