ಸರ್ಕಾರಿ ಶಾಲೆ, ಶೈಕ್ಷಣಿಕ ಪ್ರಗತಿಗೆ ಬದ್ಧ Government school 
ಕೋಲಾರ

ಸರ್ಕಾರಿ ಶಾಲೆ, ಶೈಕ್ಷಣಿಕ ಪ್ರಗತಿಗೆ ಬದ್ಧ Government school

ಕೋಲಾರ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಟೇಕಲ್‌ನಲ್ಲಿ ಶಾಸಕ ನಂಜೇಗೌಡ ಹೇಳಿಕೆ
  • ತಾಲೂಕಿಗೆ 3 ಪಬ್ಲಿಕ್ ಶಾಲೆ ಮಂಜೂರು
ಟೇಕಲ್: ದಾನಿಗಳ ಸಹಕಾರ ಹಾಗೂ ಸರ್ಕಾರದ ಅನುದಾನದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು. Government school
ಟೇಕಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೋಲಾರ ರೋಟರಿ ಲೈಕ್ ಸೈಡ್ ಹಾಗೂ ಹುಳದೇನಹಳ್ಳಿ ಗ್ರಾಮದ ಗೌರಮ್ಮ ಭದ್ರೇಗೌಡ ಕುಟುಂಬದ ವತಿಯಿಂದ ವಿದ್ಯಾರ್ಥಿಗಳಿಗೆ ಕೊಡ ಮಾಡಿದ ನೋಟ್ ಪುಸ್ತಕ ಹಾಗೂ 10 ಬೈಸಿಕಲ್‌ಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ತಾಲೂಕಿಗೆ ಸರ್ಕಾರದಿಂದ ಮೂರು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ವಾಡಲಾಗಿದೆ. ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ವಸತಿ ಶಾಲೆಗಾಗಿ ಸುವಾರು 50 ಕೋಟಿ ರೂ.ಅನುದಾನ ತರಲಾಗಿದೆ. ಟೇಕಲ್‌ನಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಐಟಿಐ, ಪಿಯು ಕಾಲೇಜ್, ನಾಡಕಚೇರಿ, ರೈತ ಸಂಪರ್ಕ ಕೇಂದ್ರ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಿಗೆ ಜಾಗ ಮಂಜೂರು ವಾಡಿಸಲಾಗಿದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆ ಅಧ್ಯಕ್ಷ ರಾಮಕೃಷ್ಣ್ಣ ಗೌಡ ವಾತನಾಡಿ, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಂಸ್ಥೆಯಿಂದ ನೋಟ್ ಪುಸ್ತಕ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಜಿಲ್ಲೆಯಲ್ಲಿ ಕೆರೆಗಳ ಜೀರ್ಣೋದ್ಧಾರ ಹಾಗೂ ಸಂರಕ್ಷಣೆಗೆ ಮುಂದಾಗಿದ್ದು, ಇದೇ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ನಾನು ಈ ಶಾಲೆ ಹಾಗೂ ಬಡ ಮಕ್ಕಳ ಸೇವೆಗೆ ಕೈಲಾದ ಸಹಾಯ ಮಾಡಬೇಕೆಂದು ಇಂತಹ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದೇನೆ ಎಂದರು.
ಇದೇ ವೇಳೆ ಕೋಲಾರ ರೋಟರಿ ಲೈಕ್ ಸೈಡ್ ಅಧ್ಯಕ್ಷ ಚೌಡಪ್ಪ, ಕಾಂಗ್ರೆಸ್ ಮುಖಂಡ ಎಚ್.ವಿ ಚಂದ್ರಶೇಖರ್ ಗೌಡ, ಪ್ರಗತಿ ಶ್ರೀನಿವಾಸ್ ಹಾಗೂ ಶಿಕ್ಷಕರು ಇದ್ದರು.