ಕೋಲಾರ ಜಿಲ್ಲೆಯಾದ್ಯಂತ ಮಂಗಳವಾರ ಪ್ರಾರಂಭವಾದ ಎಸ್​ಐಆರ್​ ಅಭಿಯಾನದ ಕುರಿತು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು, ಪಿಸಿಹಳ್ಳಿ ನಗರಸಭೆ ಮಾಜಿ ಸದಸ್ಯ ರಾಕೇಶ್​ ಮನೆಯ ಪರಿಷ್ಕರಣೆ ಪರಿಶೀಲಿಸಿದರು.  
ಕೋಲಾರ

ಎಸ್​ಐಆರ್​ಗೆ ಉತ್ತಮ ಸ್ಪಂದನೆ

ಕೋಲಾರ: ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ಕಾರ್ಯವು ಮಂಗಳವಾರದಿಂದ ಶುರುವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪರಿಷ್ಕರಣಾ ಅಭಿಯಾನ ಪ್ರಾರಂಭವಾದದಿನ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು ಖುದ್ದಾಗಿ ಮತದಾರರ ಮನೆಗೆ ಭೇಟಿ ನೀಡಿ ಫಾಮ್​ರ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಂ.ಆರ್​.ರವಿ, ಮತದಾರರ ಪಟ್ಟಿಯ ನಿಖರತೆ, ಪಾರದರ್ಶಕತೆಗಾಗಿ ಪರಿಷ್ಕರಣೆ ಅತ್ಯಂತ ಮಹತ್ವದ್ದಾಗಿದೆ. ಬಿಎಲ್​ಒಗಳು ಸಾರ್ವಜನಿರೊಂದಿಗೆ ಸೌಜನ್ಯದಿಂದ ವರ್ತಿಸುವ ಮೂಲಕ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮತದಾರರು ತಮ್ಮ ವಿವರಗಳನ್ನು ನಮೂನೆಗಳಲ್ಲಿ ಸರಿಯಾಗಿ ಭರ್ತಿ ಮಾಡಬೇಕು, ಗೊಂದಲಕ್ಕೆ ಒಳಗಾಗದೆ ಸ್ಪಷ್ಟವಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ನಗರಸಭೆ ಆಯುಕ್ತ ವೆಂಕಟೇಶ್​, ಕಂದಾಯ ಅಧಿಕಾರಿ ವೇಣು, ರಾಜಸ್ವ ನಿರೀಕ್ಷಕ ರಾಜೇಂದ್ರ ಪ್ರಸಾದ್​ ಮತಿತರರು ಪಾಲ್ಗೊಂಡಿದ್ದರು.