ಮುಳಬಾಗಿಲುvaccination ತಾಲೂಕಿನ ತಾತಿಕಲ್ಲು ಗ್ರಾಮದ ಹೊರವಲಯದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 9 ರಿಂದ 14 ವಯಸ್ಸಿನ ಒಳಗಿನ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್ಪಿವಿ ಲಸಿಕೆ ವಿತರಿಸಲಾಯಿತು. ಬಿಇಒ ಕೆ.ಎನ್.ರಾಮಚಂದ್ರಪ್ಪ, ಬೆಂಗಳೂರಿನ ರೋಟರಿ ಲೇಕ್ ಸೈಡ್ ಅಧ್ಯಕ್ಷ ಸುಧಾಕರ ಪಾಂಡೆ, ರೋಟರಿ ಮುಳಬಾಗಿಲು ಸೆಂಟ್ರಲ್ ಅಧ್ಯಕ್ಷ ಆರ್. ಶ್ರೀನಿವಾಸರೆಡ್ಡಿ, ಡಾ. ಜಿ. ಎನ್. ಮಂಜುನಾಥ್ ಮತ್ತಿತರರು ಇದ್ದರು.
- ಬಿಇಒ ಕೆ.ಎನ್. ರಾಮಚಂದ್ರಪ್ಪ ಹೇಳಿಕೆ
ಮುಳಬಾಗಿಲು:ಸರ್ಕಾರಿ ಶಾಲಾ&ಕಾಲೇಜುಗಳಲ್ಲಿ ಗ್ರಾಮೀಣ ಪ್ರದೇಶದ ಬಡ ಕುಟುಂಬದ vaccination ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ನೀಡಿದರೆ ಉತ್ತಮ ಸಾಧನೆ ಮಾಡುವುದು ಖಚಿತ ಆದುದರಿಂದ ರೋಟರಿ ಸಂಸ್ಥೆ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನಿಯ ಎಂದು ಬಿಇಒ ಕೆ.ಎನ್. ರಾಮಚಂದ್ರಪ್ಪ ಹೇಳಿದರು.
ತಾಲೂಕಿನ ತಾತಿಕಲ್ಲು ಗ್ರಾಮ ಹೊರವಲಯದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರೋಟರಿ ಮುಳಬಾಗಿಲು ಸೆಂಟ್ರಲ್, ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ, ದೇವರಾಜ್ ಅರಸು ವೇದಿಕೆಯ ಮಹಾವಿದ್ಯಾಲಯ ನರ್ಸಿಂಗ್ ಕಾಲೇಜು, ಬೆಂಗಳೂರಿನ ರೋಟರಿ ಲೇಕ್ ಸೈಡ್ ಹಾಗೂ ಎಂಬಿಟೆಲ್ ಟೆಕ್ನಾಲಜಿಸ್ ಸಹಯೋಗದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಎಚ್ಪಿವಿ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯವೇ ಮಹಾಭಾಗ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತು ರೋಗರಹಿತ ಜೀವನಕ್ಕೆ ಸಂಬಂಧಿಸಿದ ಚುಚ್ಚುಮದ್ದುಗಳನ್ನು ಕಾಲ ಕಾಲಕ್ಕೆ ಹಾಕಿಸಿಕೊಳ್ಳುವ ಮೂಲಕ ಸುಖಕರ ಜೀವನ ಮಾಡಬಹುದು ಎಂದರು.
ರೋಟರಿ ಮುಳಬಾಗಿಲು ಸೆಂಟ್ರಲ್ ಅಧ್ಯಕ್ಷ ತಿಪ್ಪದೊಡ್ಡಿ ಆರ್. ಶ್ರೀನಿವಾಸರೆಡ್ಡಿ ಮಾತನಾಡಿ, ಸರ್ಕಾರಿ ಆದರ್ಶ ಶಾಲೆಯಲ್ಲಿಂದು 216 ಬಾಲಕಿಯರಿಗೆ ಕ್ಯಾನ್ಸರ್ ತಡೆಗಟ್ಟುವ ಲಸಿಕೆಗಳನ್ನು ಅದರ ಮುಖಬೆಲೆ 2,600 ರೂ. ಪ್ರತಿ ಹೆಣ್ಣು ಮಗುವಿಗೆ ನೀಡಲಾಗಿದೆ ಎಂದರು.
ಆರ್.ಎಲ್. ಜಾಲಪ್ಪ ಆಸ್ಪತ್ರೆ ಕ್ಯಾನ್ಸರ್ ತಜ್ಞ ವೈದ್ಯ ಡಾ.ಜಿ.ಎನ್. ಮಂಜುನಾಥ್, ರೋಟರಿ ಮುಳಬಾಗಿಲು ಸೆಂಟ್ರಲ್ ಖಜಾಂಚಿ ಪಿ.ಎಸ್.ರಮೇಶ್, ಕೋಲಾರ ರೋಟರಿ ಲೇಕ್ ಖಜಾಂಚಿ ಪಿ.ವಾಸಂತಿ, ರೋಟೋರಿಯನ್ಗಳಾದ ಆರ್.ಕೆ.ಸುದರ್ಶನ್ ಬಾಬು, ಕೆ.ಎಸ್. ಪ್ರಭಾಕರ್, ಮಾಧವಿ, ಪಾಂಡುರಂಗ ರೆಡ್ಡಿ, ರಾಮಚಂದ್ರ, ಆದರ್ಶ ವಿದ್ಯಾಲಯದ ಎಸ್ಡಿಎಂಸಿ ಅಧ್ಯಕ್ಷ ಎಂ. ನಾರಾಯಣಸ್ವಾಮಿ, ಉಪಾಧ್ಯಕ್ಷೆ ತೇಜಸ್ವಿನಿ, ಮುಖ್ಯಶಿಕ್ಷಕ ವಿ.ಎ.ಅಶೋಕ್ ಇದ್ದರು.