ಕೋಲಾರದ ಖಾಲಿ ನಿವೇಶನದಲ್ಲಿ ನಗರಸಭೆಯಿಂದ ನಾಮಫಲಕ ಅಳವಡಿಸಿರುವುದು. 
ಕೋಲಾರ

ಸರ್ಕಾರಿ ಆಸ್ತಿ ಕಬಳಿಸಿದರೆ ಎಫ್‌ಐಆರ್

ಕಿರುವಾರ ಎಸ್.ಸುದರ್ಶನ್
ಎಸ್. ಸುದರ್ಶನ್, ಕೋಲಾರ
ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಯಾರಾದರೂ ಕಬಳಿಕೆಗೆ ಮುಂದಾದರೆ ಅಂತಹವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.
ಸರ್ಕಾರಿ ಆಸ್ತಿಗಳ ಸಂಬಂಧ ಅಕ್ರಮ ಖಾತೆ, ಸರ್ಕಾರಿ ಆಸ್ತಿ ಪರಭಾರೆ ಮಾಡಿರುವ ಆರೋಪಗಳು ಕೇಳಿ ಬಂದಿದ್ದವು, ಕಚೇರಿಯಲ್ಲಿ ಆಸ್ತಿಯ ಕಡತಗಳನ್ನು ತಿದ್ದು ಸಹ ಬೆಳಕಿಗೆ ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತವು ಒತ್ತುವರಿದಾರರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯಾನವನ, ಖಾಲಿ ನಿವೇಶನ, ಸಿಎ ನಿವೇಶನ ಹೀಗೆ ಹಲವು ಆಸ್ತಿಗಳಿವೆ. ಖಾಲಿ ನಿವೇಶನಗಳ ಫೈಲ್ ಸಂಖ್ಯೆ, ಓವರ್ ಹೆಡ್ ಟ್ಯಾಂಕ್, ಅಂಗನವಾಡಿ ಹೀಗೆ ಸಾರ್ವಜನಿಕ ಉಪಯೋಗಕ್ಕೆ ನೀಡಲಾಗಿದೆ. ಸದ್ಯ ಖಾಲಿ ಇರುವ ನಿವೇಶನಗಳಿಗೆ ನಾಮಫಲಕ ಅಳವಡಿಸುವ ಮೂಲಕ ರಕ್ಷಣೆಗೆ ಪಾತೆಟಿಸಿದ್ದಾರೆ.
ಅಧಿಕಾರಿಗಳ ಕಮ್ಮು: ಖಾಲಿ ಜಾಗದಲ್ಲಿ ಬಹು ವರ್ಷಗಳ ಕಾಲ ಸ್ತ್ರೀಯನಕ್ಕೆ, ಯಾರೂ ಬಾರದಿದ್ದರೆ, ಭೂಮಾಫಿಯಾ, ರಿಯಲ್‌ಎಸ್ಟೇಟ್ ದಲ್ಲಾಳಿಗಳ ಕಣ್ಣು ಬಿದ್ದರೆ ಅದು ಬೇರೂರಿಸಿಗೆ ಪರಭಾರವಾಗುವುದು ಗ್ಯಾರಂಟಿ ಎಂಬ ಸ್ಥಿತಿ ಇದೆ. ಜತೆಗೆ ಇಲಾಖೆಯ ಕೆಲ ಸಿಬ್ಬಂದಿ ಭೂಗಳ್ಳರೊಂದಿಗೆ ಶಾಮೀಲಾಗಿ, ಕಚೇರಿಯಲ್ಲಿ ಲಭ್ಯವಿರುವ ಆಸ್ತಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಬೇರೊಬ್ಬರ ಹೆಸರಿಗೆ ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಆಸ್ತಿಗಳ ಕುರಿತು ಮಾಹಿತಿ ಪಡೆದುಕೊಂಡಿದ್ದರು, ಇದರಲ್ಲಿ ಕೆಲ ಆಸ್ತಿಗಳು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿರುವ ಮಾಹಿತಿ ಲಭ್ಯವಾಗಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿವೇಶನ ಗುರುತಿಸಿ, ಆ ಜಾಗಕ್ಕೆ ಬೇಲಿ ನಿರ್ಮಿಸುವುದು, ಈ ಸುತ್ತ ನಗರದರೆಯೆಂದು ಎಂಬುದಾಗಿ ನಾಮಫಲಕ ಹಾಕಿಸುವ ಮೂಲಕ ಜಿಲ್ಲಾಡಳಿತ ವಿನೂತನ ಕ್ರಮಕ್ಕೆ ಮುಂದಾಗಿದೆ.
ಒತ್ತುವರಿ ಮಾಡಿದರೆ ಕಠಿಣ ಕ್ರಮ
ಮೊದಲಿನಿಂದಲೂ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಆಸ್ತಿ ರಕ್ಷಣೆ ಮಾಡಲಾಗುತ್ತಿದೆ. ಲಭ್ಯವಿರುವ ನಿವೇಶನಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಕೆಲ ನಿವೇಶನಗಳ ಖಾಲಿ ಒತ್ತುವರಿಯಾಗಿದೆ. ಒತ್ತುವರಿ ತೆರವುಗೊಳಿಸಿ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದೆ ಯಾರಾದರೂ ಜಾಗ ಒತ್ತುವರಿ ಮಾಡಿಕೊಳ್ಳಲು ಮುಂದಾದರೆ ಕಠಿಣ ಕ್ರಮಕ್ಕೆ ಗೊಳಲಾಗುತ್ತದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅಂಬಿಕಾ ತಿಳಿಸಿದ್ದಾರೆ.
ನಿವೇಶನಗಳ ವಿವರ
ಜಿಲ್ಲೆಯ ಒಟ್ಟು 7 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 90 ನಿವೇಶನಗಳಿದ್ದು, ಆ ಪೈಕಿ ಕೋಲಾರ ವ್ಯಾಪ್ತಿಯಲ್ಲಿ 18, ಕೆಜಿಎಫ್ 9, ಮುಳಬಾಗಿಲು 4, ಬಂಗಾರಪೇಟೆ 15, ಮಾಲೂರು 32, ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯಲ್ಲಿ 6 ನಿವೇಶನಗಳಿವೆ. ಇನ್ನು ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಡಾವಣೆಗಳಲ್ಲಿ ಸಿಎ ನಿವೇಶನಗಳು 72, ಉದ್ಯಾನವನಗಳು 78 ಹೋರತುಪಡಿಸಿದೆ ಉಳಿದಂತೆ ಅಧೀನದಲ್ಲಿ ಖಾಲಿ ನಿವೇಶನಗಳ ಮಾತಿನ್ನು ಇಲ್ಲ, ದಾಖಲೆ ಪರಿಶೀಲಿಸಿ, ಡಿಜಿಟಲ್ ರೂಪದಲ್ಲಿ ಆಸ್ತಿ ಸಂಖ್ಯೆ ನಿಗದಿಸುವ ಮೂಲಕ (ಪಿಐಡಿ) ಭದ್ರಪಡಿಸುವ ಕ್ರಮಕ್ಕೆ ಮುಂದಾಗಿದೆ.
ಸಿಬ್ಬಂದಿ ವಿರುದ್ಧ ತಿದ್ದುಪಡಿ ಆರೋಪ
ಸಿಬ್ಬಂದಿಯೇ ತಿದ್ದುಪಡಿ ಮಾಡಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿರುವ ಆರೋಪವಿದೆ. ಈ ಸಂಬಂಧ ದಾಖಲೆಗಳನ್ನು ತಿದ್ದುಪಡಿ ಮಾಡಿರುವುದು ಸಹ ಬೆಳಕಿಗೆ ಬಂದಿದ್ದು, ಇನ್ನು ಮುಂದೆ ಇದು ಮರುಕಳಿಸದಂತೆ ಅಧಿಕಾರಿಗಳಿಗೆ ಎಚ್ಚರವಹಿಸಬೇಕಿದೆ.
ನಗರಸಭೆ, ಪುರಸಭೆಯ ಕಂದಾಯ ವಿಭಾಗದ ಅಧಿಕಾರಿಗಳು ಸಂಸ್ಥೆಯ ವ್ಯಾಪ್ತಿಯಲ್ಲಿರುವ ನಿವೇಶನಗಳ ಮಾಹಿತಿ ಪಡೆದು, ಸ್ಥಳಕ್ಕೆ ಭೇಟಿ ನೀಡಿ ನ್ಯೂಗೋನಿಸುವುದು, ನಾಮಫಲಕ ಅಳವಡಿಸುವ ಮೂಲಕ ಭದ್ರಪಡಿಸಿಕೊಳ್ಳುತ್ತಿದ್ದಾರೆ.