ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ಕಾರಿಡಾರ್ ರಸ್ತೆ
ಕೋಲಾರ: ಕೋಲಾರ ಜಿಲ್ಲೆಯ ಮೂಲಕವೇ 71 ಕಿ.ಮೀ. ಹಾದು ಹೋಗಿರುವ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ಕಾರಿಡಾರ್‌ನ 100 ಕಿ.ಮೀ. ಹೈವೇ ವಾಹನ ಸಂಚಾರಕ್ಕೆ ಮುಕ್ತವಾಗಿದ್ದು, ಬೆಂಗಳೂರು ಮತ್ತಿತರ ಕಡೆಯಿಂದ ತಿರುಪತಿ-ಚೆನ್ನೈಗೆ ಸಂಪರ್ಕಿಸುವ ಕೊಂಡಿ ಮತ್ತಷ್ಟು ಹತ್ತಿರವಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕರ್ನಾಟಕ, ಆಂಧ್ರಪ್ರದೇಶದ ಬೇತಮಂಗಲ-ಬೈರೆಡ್ಡಿಪಲ್ಲಿ ನಡುವಿನ 25 ಕಿ.ಮೀ ಮಾರ್ಗವನ್ನು ಇತ್ತೀಚೆಗೆ ಲೋಕಾರ್ಪಣೆ ಮಾಡುವುದರೊಂದಿಗೆ ಕೋಲಾರ ಭಾಗದ ವಾಹನ ಸವಾರರಿಗೆ ಚಿತ್ತೂರು, ತಿರುಪತಿ ಮತ್ತು ಚೆನ್ನೈ ಸಂಪರ್ಕ ಇನ್ನಷ್ಟು ಸುಗಮಗೊಳಿಸಿದೆ.
2025 ವರ್ಷಾರಂಭದಲ್ಲಿ ಎನ್.ಎಚ್.ಎ.ಐ. ಕಾರಿಡಾರ್ ಹೊಸಕೋಟೆಯಿಂದ ಕೆಜಿಎಫ್ ತಾಲೂಕಿನ ಬೇತಮಂಗಲದವರೆಗಿನ 71 ಕಿ.ಮೀ ಮಾರ್ಗ ತೆರೆದಿತ್ತು. ಈ ಮಾರ್ಗ ಸಂಪೂರ್ಣ ಹೊಸಕೋಟೆ, ಕೆಜಿಎಫ್ ತಾಲೂಕುಗಳ ಮೂಲಕ ಹಾದುಹೋಗುತ್ತದೆ. ಇದೀಗ ಬೇತಮಂಗಲ-ಬೈರೆಡ್ಡಿಪಲ್ಲಿ 25 ಕಿ.ಮೀ. ಸಹ ತೆರೆದಿದ್ದರಿಂದ ಒಟ್ಟು 96 ಕಿ.ಮೀ. ಮಾರ್ಗ ಜಿಲ್ಲೆಯ ಜನರಿಗೆ ನೇರವಾಗಿ ಬಳಕೆಗೆ ಲಭ್ಯವಾಗಿದೆ.
ಆಂಧ್ರಪ್ರದೇಶ 85 ಕಿ.ಮೀ. ಪ್ರೆಸ್‌ಅನ್ನು ಮೂರು ಹಂತದಲ್ಲಿ ನಿರ್ಮಿಸಲಾಗುತ್ತಿದೆ. ಈ ಬೇತಮಂಗಲ-ಬೈರೆಡ್ಡಿಪಲ್ಲಿ ಕಿ.ಮೀ. ಪೂರ್ಣ, ಸಂಚಾರಕ್ಕೆ ಮುಕ್ತ, ಬೈರೆಡ್ಡಿಪಲ್ಲಿ-ಬಂಗಾರುಪಾಳ್ಯಂ 31 ಕಿ.ಮೀ ಅರಣ್ಯ ಅನುಮತಿ ವಿಳಂಬದಿಂದ 11 ಕಿ.ಮೀ ಕಾಮಗಾರಿ ಬಾಕಿ. ವನ್ಯಜೀವಿ ಸಂಚಾರಕ್ಕೆ ಅಂಡರ್‌ಪಾಸ್ ನಿರ್ಮಾಣವಾಗಬೇಕಿದೆ. ಪ್ಯಾಕೇಜ್-3: ಬಂಗಾರುಪಾಳ್ಯಂ-ಗುಡಿಪಾಲ ಪ್ಯಾಕೇಜ್-2: 29 ಕಿ.ಮೀ ಒಂದು ವರ್ಷದ ಹಿಂದೆಯೇ ಕಾಮಗಾರಿ ಇಲಾಖೆ ಪೂರ್ಣ.2026 ಅಂತ್ಯಕ್ಕೆ ಪೂರ್ಣ ಎಕ್ಸ್‌ಪ್ರೆಸ್‌ವೇ ಸಿದ್ಧ.
ಈ ಕಾರಿಡಾರ್‌ನಿಂದಾಗಿ ಕೋಲಾರದಿಂದ ತಿರುಪತಿಗೆ ಪ್ರಯಾಣ ಸಮಯ 45 ನಿಮಿಷ ಕಡಿಮೆಯಾಗಲಿದೆ. ಚೆನ್ನೈಗೆ 1.5 ಗಂಟೆ ಉಳಿತಾಯವಾಗಲಿದೆ. ಈಗ ಕೋಲಾರದಿಂದ ಬೈರೆಡ್ಡಿಪಲ್ಲಿ ತಲುಪಿ ಅಲ್ಲಿಂದ ಜಿಲ್ಲಾ ರಸ್ತೆಗಳ ಮೂಲಕ ಹಳೆಯ ಚೆನ್ನೈ ಹೆದ್ದಾರಿ ಸೇರಿಕೊಳ್ಳಬಹುದು. ತಮಿಳುನಾಡು ವಿಭಾಗ ಸೇರಿ ಸಂಪೂರ್ಣ 262 ಕಿ.ಮೀ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ 2026ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಎನ್.ಎಚ್.ಎ.ಐ ಅಧಿಕಾರಿಗಳು ತಿಳಿಸಿದ್ದಾರೆ. ಒಮ್ಮೆ ಪೂರ್ಣಗೊಂಡರೆ ಬೆಂಗಳೂರಿನಿಂದ ಚೆನ್ನೈಗೆ ಕೇವಲ 3 ಗಂಟೆಯಲ್ಲಿ ತಲುಪಬಹುದು. ಕೋಲಾರದಿಂದ ಚೆನೈಗೆ 2.5 ಗಂಟೆ ಸಾಕಾಗಲಿದೆ.
ಕೋಲಾರ ಜಿಲ್ಲೆಯ ಸುಂದರಪಾಳ್ಯ, ಹೆಡಗಿನಬೆಲೆ ಹಾಗೂ ಗಡಿಭಾಗದ ಕೃಷ್ಣರಾಜಪುರದಲ್ಲಿ ಟೋಲ್ ಪ್ಲಾಜಾಗಳಿವೆ. ಹೊಸಕೋಟೆಯಿಂದ ಬೈರೆಡ್ಡಿಪಲ್ಲಿವರೆಗೆ ಕಾರು, ಜೀಪು, ವ್ಯಾನ್ ಗಳಿಗೆ ಏಕಮುಖ ಸಂಚಾರಕ್ಕೆ 195 ರೂ. ಟೋಲ್ ಶುಲ್ಕ ನಿಗದಿಯಾಗಿದೆ. ದ್ವಿಮುಖ ಪ್ರಯಾಣಕ್ಕೆ 290. ಈ ಪರಿಷ್ಕೃತ ದರ ಜೂನ್25 ರಿಂದ ಜಾರಿಯಲ್ಲಿದೆ. ಮುಖ್ಯ ಕ್ಯಾರೇಜ್‌ವೇ ಬಳಸಿದರೆ ಮಾತ್ರ ಟೋಲ್ ಅನ್ವಯ. ಸರ್ವಿಸ್ ರಸ್ತೆಗಳ ಮೂಲಕ ಊರಿಗೆ ಹೋಗಿ ಬರಲು ಟೋಲ್ ಶುಲ್ಕ
ಕಟ್ಟಬೇಕಿಲ್ಲ. ಪ್ರವೇಶ-ನಿರ್ಗಮನ
ಸವಾರರ ಅನುಕೂಲಕ್ಕಾಗಿ ಎನ್.ಜಿ. ಹುಲ್ಕೂರ್, ಸುಂದರಪಾಳ್ಯ, ಹೆಡಗಿನಬೆಲೆ, ಬೇತಮಂಗಲ ಬಳಿ ಎಕ್ಸ್‌ಪ್ರೆಸ್‌ವೇಗೆ ಪ್ರವೇಶ ಮತ್ತು ನಿರ್ಗಮನಕ್ಕೆ ಇಂಟರ್‌ಚೇಂಜ್ ಗಳನ್ನು ನಿರ್ಮಿಸಲಾಗಿದೆ. ಕೆಜಿಎಫ್, ಬಂಗಾರಪೇಟೆ, ಕೋಲಾರ ನಗರ, ಮುಳಬಾಗಿಲು ತಾಲೂಕಿನ ಜನರು ಈ ಇಂಟರ್‌ಚೇಂಜ್ ಬಳಸಿ ಸುಲಭವಾಗಿ ಎಕ್ಸ್‌ಪ್ರೆಸ್‌ವೇ ಪ್ರವೇಶಿಸಬಹುದು.