ಜೆ.ತಿಮ್ಮಸಂದ್ರ ಸಮೀಪದ ಕೆರೆಯಿಂದ ಮಣ್ಣು ಸಾಗಣೆ ಮಾಡುತ್ತಿರುವುದರಿಂದ ರಸ್ತೆ ಹಾಳಾಗಿರುವುದು ಮತ್ತು ಧೂಳು ತುಂಬಿಕೊಂಡಿರುವುದು.
- ನಿಯಮ ಮೀರಿ ಕೆರೆ ಮಣ್ಣು ಲೂಟಿ
ರಾಷ್ಟ್ರೀಯ ಹೆದ್ದಾರಿ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಗ್ರಾಮೀಣ ಭಾಗದ ಕೆರೆ ಕುಂಟೆಗಳ ಮಣ್ಣು ಸಾಗಣೆ ಮಾಡುತ್ತಿದ್ದು, ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಮನಬಂದತೆ ಜಲಮೂಲಗಳ ಸ್ವರೂಪವನ್ನೇ ನಾಶಪಡಿಸಲಾಗುತ್ತಿದೆ.
ದೊಡಮಲದೊಡ್ಡಿ, ಜೆ.ವಿ ಕಾಲನಿ ಗ್ರಾಮಕ್ಕೆ ಸೇರಿದ ಕೆರೆಯಲ್ಲಿ ಹೆದ್ದಾರಿ ರಿಂಗ್ರೋಡ್ ಮಾಡುವವರು ಅನುಮತಿ ಪಡೆದು ಹಿಟಾಚಿ, ಜೆಸಿಬಿ ಬಳಿಸಿ ಟಿಪ್ಪರ್ಗಳ ಮೂಲಕ ಮನಸ್ಸೋಇಚ್ಚೆ ಮಣ್ಣನ್ನು ಹಗಲು ದರೋಡೆ ಮಾಡುತ್ತಿದ್ದಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೆರೆಯಲ್ಲಿ ಇಂತಿಷ್ಟು ಅಡಿಗೆ ಮಾತ್ರ ಮಣ್ಣು ತೆಗೆಯಬೇಕು ಎಂಬ ನಿಯಮವಿದೆ. ಆದರೆ ಮುಳಬಾಗಿಲು ರಸ್ತೆಯಿಂದ ಚಿಂತಾಮಣಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ಕಾಮಗಾರಿ ಗುತ್ತಿಗೆ ಪಡೆದವರು ಕಳೆದ 10 ದಿನದಿಂದ ಹಗಲು&ರಾತ್ರಿ ಸುಮಾರು 4&5 ಟಿಪ್ಪರ್ಗಳ ಮೂಲಕ ಮಣ್ಣು ರವಾನೆ ಮಡುತ್ತಿದ್ದಾರೆ.
ಕೆರೆಯಲ್ಲಿ ಆಳವಾಗಿ ಮಣ್ಣು ತೆಗೆಯುತ್ತಿರುವುದರಿಂದ ಬೃಹದಾಕಾರದ ಹೊಂಡಗಳು ನಿರ್ಮಾಣವಾಗಿವೆ. ಗ್ರಾಮೀಣ ಭಾಗದ ಸುತ್ತಮುತ್ತಲಿನ ಹಳ್ಳಿಗಳ ಜಾನುವಾರುಗಳು ಮೇಯಿಸುವವರು, ಕುರಿ, ಹಸುಗಳು ನೀರು ಕುಡಿಯಲು ಬಂದಾಗ ಕೆರೆಗೆ ಬಿದ್ದು ಮೃತಪಟ್ಟರೆ ಯಾರು ಹೊಣೆ ಎಂಬ ಪ್ರಶ್ನೆ ಎದುರಾಗಿದೆ.
ಎಷ್ಟು ಟನ್ಗೆ ಅನುಮತಿ ಸಿಕ್ಕಿದೆ, ಸರ್ಕಾರಕ್ಕೆ ಎಷ್ಟು ರಾಯಲ್ಟಿ ಕಟ್ಟಿದ್ದಾರೆ. ಎಷ್ಟು ದಿನಗಳಿಗೆ ಅನುಮತಿ ನೀಡಿದ್ದಾರೆ. ಇವೆಲ್ಲವನ್ನೂ ಪರಿಶೀಲಿಸುವ ಅಧಿಕಾರಿಗಳು ಯಾರು?, ಸಂಬಂಧಿಸಿದ ಅಧಿಕಾರಿಗಳೂ ಇದರಲ್ಲಿ ಶಾಮಿಲಾಗಿದ್ದಾರೆಯೇ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ 2021&22ನೇ ಸಾಲಿನಲ್ಲಿ ಜೆ.ವಿ. ಕಾಲನಿಯ ಕೆರೆ ಕೋಡಿ ಕಾಲುವೆ ಮತ್ತು ರಕ್ಷಣಾ ಗೋಡೆ ನಿರ್ಮಿಸಲು ಸುಮಾರು 3 ಲಕ್ಷ ರೂ. ಖರ್ಚು ಮಾಡಲಾಗಿದೆ. ಈಗ ಅಧಿಕ ಮಣ್ಣು ತುಂಬುಕೊಂಡು ಈ ಮಾರ್ಗದಲ್ಲಿ ಟಿಪ್ಪರ್ಗಳು ಸಂಚಾರ ಮಾಡಿದ್ದರಿಂದ ಕಾಲುವೆಮತ್ತು ಗೋಡೆ ಬಳಿ ಗುಂಡಿ ಬಿದ್ದಿದ್ದು, ಈ ನಷ್ಟವನ್ನು ಕಟ್ಟಿಕೊಡುವವರು ಯಾರು ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಕೆರೆಗಳಿಂದ ಇಷ್ಟೇಲ್ಲ ಮಣ್ಣು ತೆಗೆಯುತ್ತಿದ್ದರೂ ಸಹ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಸರ್ಕಾರಕ್ಕೆ ಎಷ್ಟು ತೆರಿಗೆ ಕಟ್ಟಿಸಿಕೊಂಡಿದ್ದಾರೆ. ನಿಯಮ ಉಲ್ಲಂಸಿ ಬೃಹತ್ ಹಳ್ಳ ನಿರ್ಮಿಸಿ ಅನಾಹುತ ಸೃಷ್ಟಿಗೆ ಕಾರಣರಾದರು ಮತ್ತು ಹೊಣೆಗಾರರು ಯಾರು?, ಶ್ರೀನಿವಾಸಪುರ ಆಡಳಿತ ನಿದ್ದೆಗೆ ಜಾರಿದೆಯೇ?.
ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರೈತ ಸಂ ಹಾಗೂ ಹಸಿರು ಸೇನೆ
ಯಾವುದೇ ಗುತ್ತಿಗೆದಾರರು ಮಣ್ಣು ತೆಗೆಯುವಾಗ ಕೆರೆ ಸಂಬಂಧಪಟ್ಟ ಇಲಾಖೆ ಮೂಲಕ ರಾಜ ತೆರಿಗೆ ಪಾವತಿಯ ಮಾಡಿ ಒಂದು ಟನ್ಗೆ 70. ರೂ. ನಂತೆ ಪಾವತಿ ಮಾಡಿರಬೇಕು. ಒಂದು ಮೀಟರ್ ಆಳ ಇರಬೇಕು, ಕೆರೆಕಟ್ಟೆಯಿಂದ 10 ಮೀ. ಅಂತರದಲ್ಲಿ ಮಣ್ಣು ತೆಗೆಯಬೇಕು. ಕೆರೆ ಸ್ವರೂಪಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಉಲ್ಲಂಸಿದಲ್ಲಿ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಿ. ಕ್ರಮ ಜರುಗಿಸಲಾಗುವುದು.
ಕಾರ್ಯ ನಿರ್ವಹಣಾಧಿಕಾರಿ, ತಾಲೂಕು ಪಂಚಾಯಿತಿ
6ರಲ್ಲಿ ಎಸ್ವಿಪುರ ಗಣಿಗಾರಿಕೆ ಎಂದು ೋಲ್ಡರ್ ಇದೆ.....
1. ಜೆ.ತಿಮ್ಮಸಂದ್ರ ಸಮೀಪದ ಕೆರೆಯಿಂದ ಮಣ್ಣು ಸಾಗಣೆ ಮಾಡುತ್ತಿರುವುದರಿಂದ ರಸ್ತೆ ಹಾಳಾಗಿರುವುದು ಮತ್ತು ಧೂಳು ತುಂಬಿಕೊಂಡಿರುವುದು.