ಮಳಿಗೆಯಲ್ಲಿ ದಸ್ತಾನು ಮಾಡಿಟ್ಟಿರುವ ಮೊಟ್ಟೆಗಳು. 
ಕೋಲಾರ

ಏರುಗತಿಯಲ್ಲಿ ಮೊಟ್ಟೆ ದರ

ಕಿರುವಾರ ಎಸ್.ಸುದರ್ಶನ್
ಕಿರುವಾರ ಎಸ್​.ಸುದರ್ಶನ್​ ಕೋಲಾರ
ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆ ದರವು ದಿನದಿನಕ್ಕೆ ಏರಿಕೆಯಾಗುತ್ತಿದೆ. ಇದರ ಜತೆಗೆ ಕೋಳಿ ಮಾಂಸದ ಬೆಲೆಯು ಏರು ಗತಿಯಲ್ಲಿ ಸಾಗಿದ್ದು, ಮಾಂಸ ಪ್ರಿಯರಿಗೆ ದರ ಏರಿಕೆ ಬಿಸಿ ತಟ್ಟಿದೆ.
ಮೊಟ್ಟೆ ಹಾಗೂ ಮಾಂಸದ ದರವು ಏರಿಯಾಗುತ್ತಿರುವುದರಿಂದ ಕುಕ್ಕುಟೋದ್ಯಮಿಗಳ ಮೊಗದಲ್ಲಿ ಸಂತಸ ಮೂಡಿದೆ. ಕಳೆದ 15&20 ದಿನದಿಂದಮೊಟ್ಟೆ ಬೆಲೆ ಹೆಚ್ಚುತ್ತಲೇ ಇದೆ. ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಮೊಟ್ಟೆ ಉತ್ಪಾದನಾ ಕೋಳಿ ಫಾರಂಗಳಿವೆ ಬ್ರಾಯ್ಡರ್​ (ಮಾಂಸದ ಉದ್ದೇಶ) ಮತ್ತು ಲೇಯರ್​ (ಮೊಟ್ಟೆಯ ಉದ್ದೇಶ) ಕೋಳಿಗಳನ್ನು ಪ್ರಮುಖವಾಗಿ ಸಾಕಲಾಗುತ್ತಿದೆ.
ಬೇಕರಿ, ಹೋಟೆಲ್​, ಡಾಬಾ ಹಾಗೂ ಚಿಲ್ಲರೆ ಅಂಗಡಿ ಮಾಲೀಕರು ತತ್ತರಿಸಿದ್ದಾರೆ. ಸ್ಥಳಿಯ ಮಾರುಕಟ್ಟೆಯಲ್ಲಿ ಆಗಸ್ಟ್​ ತಿಂಗಳಲ್ಲಿ ಓಲ್​ ಸೇಲ್​ ದರ 100 ಮೊಟ್ಟೆಗಳ ಸಗಟು ದರ 400 ರಿಂದ 450 ರೂ.ಗಿಂತ ಹೆಚ್ಚಿತ್ತು. ಈಗ ಈಗ 100 ಮೊಟ್ಟೆಗೆ 580 ರಿಂದ 600ರ ಗಡಿ ದಾಟಿದ್ದು, ಜನವರಿ ಮೊದಲ ವಾರದಿಂದ ದರ ಇಳಿಯುವ ನಿರೀಕ್ಷೆ ಇದೆ.
ಒಂದು ಮೊಟ್ಟೆಯ ದರ 7ರಿಂದ8 ರೂ.ಗೆ ಮಾರಾಟವಾಗುತ್ತಿದೆ. ಡಜನ್​ಗೆ 90ರಿಂದ 100ರ ಗಡಿ ತಲುಪಿದೆ. ಹವಾಮಾನ ವೈಪರೀತ್ಯ ಮತ್ತು ಕೋಳಿಗಳಿಗೆ ಬರುವ ರೋಗಗಳಿಂದ ಉತ್ಪಾದನೆ ಕಡಿಮೆಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.
ಚಳಿಗಾಲದಲ್ಲಿ ಜನರು ದೇಹದ ಉಷ್ಣಾಂಶ ಕಾಪಾಡಿಕೊಳ್ಳಲು ಮೊಟ್ಟೆ ಹೆಚ್ಚಾಗಿ ಸೇವಿಸುತ್ತಾರೆ, ಅಲ್ಲದೆ ಕ್ರಿಸ್​ಮಸ್​ ಮತ್ತು ಹೊಸ ವರ್ಷಕ್ಕೆ ಕೇಕ್​ ತಯಾರಿಕೆಯಿಂದ ಬೇಡಿಕೆ ಹೆಚ್ಚಿದೆ. ಚಳಿಗಾಲದ ಕೊನೆಯವರೆಗೂ ದರ ಹೆಚ್ಚಾಗಿಯೇ ಇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಿಸುವ ಶಿಕ್ಷಕರು ಹೆಚ್ಚುವರಿ ಹಣ ಭರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಚಳಿಗಾಲದಲ್ಲಿ ಹೆಚ್ಚಾದ ಬೇಡಿಕೆ, ಹವಾಮಾನ ಬದಲಾವಣೆಯಿಂದ ಉತ್ಪಾದನೆ ಕುಸಿತ, ಮತ್ತು ವಿದೇಶಗಳಿಗೆ ಹೆಚ್ಚಿದ ರಫ್ತು ಕಾರಣದಿಂದಾಗಿ ಮೊಟ್ಟೆ ದರ ಗಣನೀಯವಾಗಿ ಏರಿಕೆಯಾಗಿದೆ. ಇದರ ಪರಿಣಾಮವು ಶಾಲೆ ಹಾಗೂ ಅಂಗನವಾಡಿಗಳಿಗೆ ಮೊಟ್ಟೆ ವಿತರಣೆಯ ಮೇಲೂ ಪರಿಣಾಮ ಬೀರುವಂತಾಗಿದೆ.
ಕ್ರಿಸ್​ಮಸ್​ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಡಿಸೆಂಬರ್​ನಲ್ಲಿ ಮೊಟ್ಟೆ ಮತ್ತು ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚುತ್ತದೆ. ಆದರೆ, ಈಗ ಸೊಪ್ಪು ಮತ್ತು ತರಕಾರಿಗಳು ತುಟ್ಟಿಯಾಗಿರುವುದರಿಂದ ಮಾಂಸಹಾರಿಗಳು ಮೊಟ್ಟೆ ಮತ್ತು ಮಾಂಸ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
* ನಾಟಿ ಕೋಳಿ ಮೊಟ್ಟೆಗೂ ಬೇಡಿಕೆ ಜಾಸ್ತಿ
ಮಾರುಕಟ್ಟೆಯಲ್ಲಿ ನಾಟಿ ಕೋಳಿ ಮೊಟ್ಟೆಗಳು ಸಿಗುವುದು ಅಪರೂಪ. ಸಿಕ್ಕರೂ ಅವುಗಳ ದರ ಫಾರಂ ಕೋಳಿ ಮೊಟ್ಟೆಗಿಂತ ದುಪ್ಪಟ್ಟಿದೆ.
ಫಾರಂ ಕೋಳಿ ಮೊಟ್ಟೆಗೆ ರಿಟೇಲ್​ ದರ 5 ರೂ ಇದ್ದರೆ, ನಾಟಿ ಕೋಟಿ ಮೊಟ್ಟೆ ಒಂದಕ್ಕೆ 10ರಿಂದ 12ರೂ ಇದೆ. ಚಳಿಗಾಲ ಶುರುವಾದಾಗಿನಿಂದ ಮೊಟ್ಟೆ ದರ ಒಂದು ಡಜನ್​ 150 ರೂ.ಗೆ ಮಾರಾಟವಾಗುತ್ತಿದೆ.
* ಉತ್ಪಾದನೆ ಕೊರತೆ
ಸಾಮಾನ್ಯವಾಗಿ ಕೋಳಿಗಳು ಮೊಟ್ಟೆಯನ್ನು 72 ವಾರಗಳವರೆಗೆ ಕೊಡುತ್ತವೆ. ನಂತರ ಮೊಟ್ಟೆ ನೀಡುವ ಪ್ರಮಾಣ ಕಡಿಮೆಯಾಗುತ್ತದೆ. ಸದ್ಯ ಇದೀಗ ಮೊಟ್ಟೆ ನೀಡುತ್ತಿದ್ದ ಕೋಳಿಗಳ ಪ್ರಮಾಣ ಕುಸಿದಿದೆ.
ಶಾಲೆಗಳಲ್ಲಿ ವಿತರಿಸಲಾಗುವ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಬೇಡಿಕೆ, ಉತ್ಪಾದನೆ ಮಧ್ಯೆ ಕೊರತೆಯಿದೆ. ಆಂಧ್ರ, ತಮಿಳುನಾಡಿನಲ್ಲೂ ಮೊಟ್ಟೆ ಉತ್ಪಾದನೆಯೂ ಕುಸಿತವಾಗಿದ್ದು, ಸಗಟು ವ್ಯಾಪಾರಿಗಳು ಜಿಲ್ಲೆಯತ್ತ ಮುಖಮಾಡಿದ್ದಾರೆ. ಕೋಲಾರ, ಮುಳಬಾಗಿಲು, ಶ್ರೀನಿವಾಸಪುರಕ್ಕೆ ಬಂದು ಖರೀದಿ ಮಾಡಿಕೊಂಡು ಹೋಗುತ್ತಾರೆ. ಇದರಿಂದಾಗಿ ಸ್ಥಳಿಯರಿಗೆ ಮೊಟ್ಟೆ ಸಿಗದೆ ಇರುವುದಕ್ಕೆ ಕಾರಣವಾಗಿದೆ.
* ಮೊಟ್ಟೆ ಪ್ರಮಾಣ ಕಡಿಮೆ
ಮಾಂಸಹಾರಿ ಹೋಟೆಲ್​ ಮತ್ತು ಡಾಬಾಗಳಲ್ಲಿ ಎಗ್​ ರೈಸ್​, ಆಮೈಟ್​, ಎಗ್​ ರೋಲ್​, ಎಗ್​ ಬುರ್ಜಿ ಸೇರಿದಂತೆ ವಿವಿಧ ಖಾದ್ಯಗಳಿಗೆ ಮೊಟ್ಟೆಯನ್ನು ಬಳಸಲಾಗುತ್ತದೆ. ಅದೇ ರೀತಿ ಬೇಕರಿಗಳಲ್ಲಿ ಎಗ್​ ಪಪ್ಸ್​ ಮತ್ತು ಕೇಕ್​ ತಯಾರಿಕೆಗೆ ಮೊಟ್ಟೆ ಬೇಕೇಬೇಕು. ಇದರಿಂದ ಮೊಟ್ಟೆ ಬಳಕೆ ಮಾಡುವ ಪ್ರಮಾಣ ಕಡಿಮೆ ಮಾಡುವಂತಾಗಿದೆ.
ಕೋಟ್​...
ಸ್ಥಳಿಯ ಉತ್ಪಾದನೆಯು ಕಡಿಮೆಯಾಗಿದೆ. ಜತೆಗೆ ಹೊರ ರಾಜ್ಯಗಳಿಗೂ ಹೆಚ್ಚಾಗಿ ಸರಬರಾಜು ಆಗುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ಖರೀದಿ ಮಾಡುವವರ ಗ್ರಾಹಕರ ಸಂಖ್ಯೆಯು ಕಡಿಮೆಯಾಗುತ್ತಿದೆ.
- ರಾಜೇಶ್​, ಮೊಟ್ಟೆ ವ್ಯಾಪಾರಿ. ಕೋಲಾರ.
ಕೋಟ್​...
ಮೊಟ್ಟೆಗಳಿಗೆ ಕಳೆದ ಒಂದು ತಿಂಗಳಿಂದ ಬೇಡಿಕೆ ಹೆಚ್ಚಿದೆ. ಇದರಿಂದ ಬೇಡಿಕೆಗೆ ತಕ್ಕಂತೆ ಉತ್ಪಾದನೆಯಾಗದೆ ಇರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಈ ಅವಧಿಯಲ್ಲಿ ಕೋಳಿ ಸಾಕಾಣಿಕೆದಾರಿಗೆ ಕೊಂಚ ಲಾಭ ಸಿಕ್ಕಂತಾಗಿದೆ.
- ಶ್ರೀನಿವಾಸರೆಡ್ಡಿ, ಕುಕ್ಕಟ ಉದ್ಯಮಿ, ಹೊಸೂರು.