ಕೋಲಾರ ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ರಾಜ್ಯ ರೈತ ಸಂ ಹಾಗೂ ಹಸಿರು ಸೇವೆ ಕಾರ್ಯಕರ್ತರು ಖಾಲಿ ಸಿಲೆಂಡರ್, ತರಕಾರಿ ಸಮೇತ ಸೋಮವಾರ ಪ್ರತಿಭಟನೆ ನಡೆಸಿದರು.
ಕೋಲಾರ: ಮಧ್ಯ ಪ್ರಾಚ್ಯ ಯುದ್ದದಿಂದ ಸೃಷ್ಟಿಯಾಗಿರುವ ಸಿಲಿಂಡರ್ ಸಮಸ್ಯೆ ಹಾಗೂ ಏರಿಕೆಯಾಗಿರುವ ಕೃಷಿ ಪರಿಕರಣಗಳ ಬೆಲೆ ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಹೊಸ ಬಸ್ ನಿಲ್ದಾಣದ ವೃತ್ತದಲ್ಲಿ ಜಮಾಯಿಸಿದ ಸಂದ ಕಾರ್ಯಕರ್ತರು ಖಾಲಿ ಸಿಲೆಂಡರ್, ತರಕಾರಿ ರಾಶಿ ಹಾಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
ಸಂದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣ ಗೌಡ ಮಾತನಾಡಿ, ಯುದ್ಧವನ್ನೇ ಬಂಡವಾಳ ಮಾಡಿಕೊಂಡಿರುವ ವ್ಯಾಪಾರಸ್ಥರು ರೈತರ, ಬಡವರ ಹೊಟ್ಟೆ ಮೇಲೆ ಆರ್ಥಿಕ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಜನರ ಹಿತಕ್ಕಿಂತ ವ್ಯಾಪಾರದಲ್ಲಿ ಲಾಭದ ಹಿತವೇ ಮುಖ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಬೆಳೆದ ಬೆಳೆಗೆ ಬೆಲೆ ಇಲ್ಲದೇ ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ. ಕೃಷಿ ಪರಿಕರಗಳ ಮಳಿಗೆಗಳ ಮಾಲೀಕರು ಅಗತ್ಯವಾಗಿ ಕೃಷಿ, ತೋಟಗಾರಿಕೆ ಪರಿಕರಗಳ ಮೇಲಿನ ದರ ಏರಿಕೆ ಮಾಡಿದ್ದಾರೆ. ಪ್ರಶ್ನೆ ಮಾಡಿದರೆ ಯುದ್ಧದ ನೆಪ ಹೇಳಿ ಕಂಪನಿಗಳವರೆ ಏರಿಕೆ ಮಾಡಿರುವುದಾಗಿ ಸಬೂಬು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಬಲಿತ ರಾಷ್ಟ್ರಗಳು ಪ್ರತಿಷ್ಠೆಗಾಗಿ ಯುದ್ದಗಳನ್ನು ಸೃಷ್ಠಿಸಿಕೊಂಡು ಅಶಾಂತಿ ಸೃಷ್ಠಿಮಾಡಿ ಜೀವಗಳನ್ನು ಬಲಿಕೊಡುಲಾಗುತ್ತದೆ. ಜತೆಗೆ ಯುದ್ದ ನೆಪದಲ್ಲಿ ಕೃಷಿ ಕ್ಷೇತ್ರವನ್ನು ನಾಶ ಮಾಡಿ ಆಹಾರ ಅಭದ್ರತೆ ಸೃಷ್ಠಿಸುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೋಲೆ ಎಂದು ಕಿಡಿಕಾರಿದರು.
ಸಿಲಿಂಡರ್ ಸಮಸ್ಯೆಯಿಂದ ಹೋಟಲ್ ಉದ್ಯಮಕ್ಕೆ ಹೊಡತ ಬೀಳುವ ಜತೆಗೆ ತರಕಾರಿ ಬೆಳೆದ ರೈತನು ಬೀದಿಗೆ ಬರುವಂತಾಗಿದೆ. ಬಂಡವಾಳ ಹಾಕಿ ಬೆಳೆದ ಬೆಳೆಯು ಕೈಗೆ ಸಿಕ್ಕರು ಸಹ ಬೆಲೆಯಿಲ್ಲದೆ ಕಂಗಾಲಾಗಿದ್ದಾರೆ. ಸರ್ಕಾರಗಳು ಮಧ್ಯ ಪ್ರವೇಶ ಮಾಡಿ ರೈತರ ಬೆಳೆಗಳನ್ನು ದಸ್ತಾನು ಮಾಡಿಡಲು ಶಿಥಿಲ ಕೇಂದ್ರ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಯುದ್ದ ನೆಪದಲ್ಲಿ ಅಗತ್ಯ ವಸ್ತುಗಳು ಸಿಲಿಂಡರ್ ಹಾಗೂ ಕೃಷಿ ಕ್ಷೇತ್ರಕ್ಕೆ ಅವಶ್ಯಕತೆ ಇರುವ ಪರಿಕರಣಗಳನ್ನು ಕೃತ ಅಭಾವ ಸೃಷ್ಠಿ ಮಾಡಿದ್ದಾರೆ. ದಾಸ್ತನು ಇಲ್ಲವೆಂದು ಕಾಳಸಂತೆಯಲ್ಲಿ ವ್ಯಾಪಾರಸ್ಥರು 10 ರೂ ವಸ್ತವನ್ನು 500 ರೂಪಾಯಿ ಮಾರಾಟ ಮಾಡುವ ಮೂಲಕ ಕರಾಳ ಮುಖವನ್ನು ಪ್ರದರ್ಶಿಸುತ್ತಿದ್ದಾರೆ. ಸಕಷ್ಠದಲ್ಲಿರುವ ಸಮಯದಲ್ಲಿ ತೋರಿಸುತ್ತಿರುವುದು ಮಾನವಿಯತೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಂದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಪದಾಧಿಕಾರಿಗಳಾದ ಕಮ್ಮದಟ್ಟಿ ಚಲಪತಿ ಮಂಜುನಾಥ್, ತೆರ್ನಹಳ್ಳಿ ಅಂಜಿನಪ್ಪ, ತಿಮ್ಮಣ್ಣ ಕುವಣ್ಣ, ಗೋವಿಂದಪ್ಪ, ಸುಪ್ರಿಂಚಲ, ಪುತ್ತೇರಿ ರಾಜು, ಗಿರೀಶ್, ಚಂದ್ರಪ್ಪ, ಯಲ್ಲಣ್ಣ, ವೆಂಕಟೇಶ, ಶೈಲಜ, ಪವಿತ್ರ, ರತ್ನಮ್ಮ, ನಯನ ಗೌರಮ್ಮ, ಪದ್ಮಮ್ಮ, ಮುನಿಚೌಡಮ್ಮ ಪಾಲ್ಗೊಂಡಿದ್ದರು.