ಕೋಲಾರ ಜಿಲ್ಲೆಯ ಎ.ಕೊತ್ತೂರು ಭಾಗದಲ್ಲಿ ಡ್ರೋನ್ ಮೂಲಕ ಗಸ್ತು ನಡೆಸಿರುವುದು.
ಕೋಲಾರ: ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿನೂತಿನ ಡ್ರೋಗ್ ಗಸ್ತು ಪ್ರಾರಂಭಿಸಲಾಗಿದೆ.
ಪುಂಡುಪೋಕರಿಗಳು, ಜೂಜುಗಾರರು, ಮಾದಕ ವಸ್ತುಗಳ ಮಾರಾಟ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆ ಎಸಗುವವರ ಹೆಡೆಮುರಿ ಕಟ್ಟಲು ಡ್ರೋನ್ ಗಸ್ತು ಮತ್ತಷ್ಟು ಶಕ್ತಿ ನೀಡಿದಂತಾಗಿದೆ.
ಕಳ್ಳತನ, ಗುಂಪುಕಟ್ಟಿಕೊಂಡು ಜಗಳ ಮಾಡುವುದು, ರ್ನಿಜನ ಪ್ರದೇಶಗಳಲ್ಲಿ ಇಸ್ಪೀಟ್ ಆಟ, ಕೋಳಿ ಪಂದ್ಯದಲ್ಲಿ ತೊಡಗಿರುವ ಸೇರಿದಂತೆ ಹಲವಾರು ಅಪರಾಧ ಚಟುವಟಿಕೆಗಳ ಪತ್ತೆ ಹಚ್ಚಲು, ಈಗಾಗಲೇ ಗ್ರಾಮೀಣ, ನಗರ, ಪಟ್ಟಣ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭಕ್ಕೆ 112 ತಂಡ ಮೀಸಲಿರಿಸಲಾಗಿದೆ.
ಸೂಕ್ಷ$್ಮ ಪ್ರದೇಶಗಳನ್ನು ಗುರುಸಿ ಸಿಸಿ ಟಿ.ವಿಯನ್ನು ಸಹ ಅಳವಡಿಸಲಾಗಿದೆ. ಇದೀಗ ಪೊಲೀಸರು ಸಿಸಿ ಟಿವಿ ಜತೆಗೆ ಡ್ರೋನ್ ಬಳಸುತ್ತಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಿ ನಿಯೋಜಿಸಲಾಗಿದೆ. ಅವರು ನಿತ್ಯ ಆಯ್ದ ಸ್ಥಗಳಲ್ಲಿ ಡ್ರೋನ್ ಗಸ್ತು ನಡೆಸುವ ಮೂಲಕ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಈಗಾಗಲೇ ಬೆಂಕಿ ಅವಘಡ ಹಾಗೂ ಪ್ರಾಣಿಗಳ ಚಲನವಲನ ಪತ್ತೆಗೆ ಅರಣ್ಯ ಇಲಾಖೆ ಡ್ರೋನ್ ಆಧಾರಿತ ಕಣ್ಗಾವಲು ವ್ಯವಸ್ಥೆ ಬಳಸುತ್ತಿದೆ. ಕೃಷಿಗೆ ಔಷಧ ಸಿಂಪಡಣೆ ಇರಬಹುದು, ಕಾರ್ಯಕ್ರಮಗಳ ವಿಡಿಯೊ, ಫೋಟೋ ತೆಗೆಯಲು ಡ್ರೋನ್ ಬಳಸಲಾಗುತ್ತಿದೆ. ಇಚೆಗೆ ಸಭೆ, ಸಮಾರಂಭಗಳಲ್ಲೂ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು, ರಾತ್ರಿ ಗಸ್ತು ಹೆಚ್ಚಿಸುವುದು, ಡ್ರೋನ್ ಬಳಕೆಯಿಂದ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಬಹುದು ಎಂಬುದು ಇಲಾಖೆಯ ನಂಬಿಕೆಯಾಗಿದೆ.
ಕಾಡು, ಬೆಟ್ಟ ಗುಡ್ಡಗಳ ತಪ್ಪಲು, ಜನ ಸಂದಣಿ ಪ್ರದೇಶಗಳಲ್ಲಿ ನಡೆಯುವ ಅಪರಾಧ ಚಟುವಟಿಕೆ ಪತ್ತೆ ಹಚ್ಚಲು ಡ್ರೋನ್ ಪೆಟ್ರೋಲಿಂಗ್ ನೆರವಾಗಲಿದೆ. ಇಂಥ ಪ್ರದೇಶದಲ್ಲಿ ಯಾರೂ ಬರಲ್ಲವೆಂದು ಜೂಜಾಡುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಕೆಲವರು ನಿರತರಾಗುತ್ತಾರೆ. ಅವರಿಗೆ ಕಡಿವಾಣ ಹಾಕಬಹುದು. ದಾಳಿ ವೇಳೆ ಪರಾರಿ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ತಕ್ಷಣ ಡ್ರೋನ್ ಬಳಿಸಿ ಆರೋಪಿಗಳ ಮುಖಚಯೆರ್ ಕಂಡುಹಿಡಿಯಬಹುದು, ಎಲ್ಲಿ ಪರಾರಿಯಾಗುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಬಹುದು.
ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾಲನೂರು ಕೆರೆ, ಗ್ರಾಮ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹರಳಕುಂಟೆ ಮತ್ತು ಭಟ್ರಹಳ್ಳಿ, ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಸೊನ್ನಪಲ್ಲಿ, ಬೈರಗಾನಪಲ್ಲಿ ಮತ್ತು ಎ.ಕೊತ್ತೂರು, ಶ್ರೀನಿವಾಸಪುರ ಠಾಣಾ ವ್ಯಾಪ್ತಿಯ ದಳಸನೂರು, ರೋಜೊರಪಲ್ಲಿ, ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುಜಾವರ್ ಮೊಹಲ್ಲಾ ನೂಗಲುಬಂಡೆ, ಶಮೀರ್ ಮೊಹಲ್ಲಾ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಡ್ರೊನ್ ಮುಖಾಂತರ ಗಸ್ತು ನಡೆಸಲಾಗಿದೆ.
10 ಕಿ.ಮೀ ವ್ಯಾಪ್ತಿವರೆಗಿನ ಪ್ರದೇಶವನ್ನು 500 ಮೀಟರ್ ಎತ್ತರದವರೆಗೆ ಹಾರಾಟ ನಡೆಸಿ ಡ್ರೋನ್ಗಳ ಮೂಲಕ ಪರಿಶೀಲನೆ ನಡೆಸಬಹುದು. ಜನದಟ್ಟಣೆ ಪ್ರದೇಶ, ಬೆಟ್ಟಗುಡ್ಡ, ದಟ್ಟ ಕಾಡು, ಬೆಟ್ಟದ ತಪ್ಪಲು ಸೇರಿದಂತೆ ವಿವಿಧ ಪ್ರದೇಶದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಹಾಯವಾಗುತ್ತದೆ.
ಜಾಯ್ ಸ್ಟಿಕ್ ಬಳಿ ಮೊಬೈಲ್ ಫೋನ್ ಇರಿಸಿ ಡ್ರೋನ್ ಸೆರೆ ಹಿಡಿಯುವ ದೃಶ್ಯಗಳನ್ನು ಲೈವ್ ಆಗಿ ವೀಕ್ಷಿಸಬಹುದು. ಕೆಲವೆಡೆ ನೆಟ್ವರ್ಕ್ ಇಲ್ಲದ ಸ್ಥಳಗಳಲ್ಲಿ ವಿಡಿಯೊವನ್ನು ಕಚೇರಿಗೆ ತಂದು ಪರಿಶೀಲಿಸಿ ಕ್ರಮ ವಹಿಸಬಹುದು.
ಕೋಲಾರ ಜಿಲ್ಲಾ ಪೊಲೀಸರು ಕೆಲ ದಿನಗಳಿಂದ ವಿವಿಧೆಡೆ ಮೂರು ಡ್ರೋನ್ಗಳ ಮೂಲಕ ಗಸ್ತು ನಡೆಸಲಾಗುತ್ತಿದ್ದು, ಅಪರಾಧ ಚಟುವಟಿಕೆಗಳ ಮೇಲಿ ಕಣ್ಣಿಡಲಾಗಿದೆ. ಇದಕ್ಕಾಗಿಯೇ 8 ಕಾನ್ಸ್ಟೆಬಲ್ಗಳಿಗೆ ಬೆಂಗಳೂರಿನಲ್ಲಿ ತರಬೇತಿ ಕೊಡಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಒಂದು ದಿನ ಡ್ರೋನ್ ಬಳಸಿ ಪರಿಶೀಲನೆ ನಡೆಸುತ್ತಿರುತ್ತಾರೆ.
ಹೆಚ್ಚು ಅಪರಾಧ ಚಟುವಟಿಕೆಗಳು ನಡೆಯುವ ಸ್ಥಳಗಳನ್ನು ಗುರುತಿಸಲಾಗಿದ್ದು, 3 ಡ್ರೋನ್ಗಳ ಮೂಲಕ ಸ್ಥಳಗಳಲ್ಲಿ ಗಸ್ತು ನಡೆಸಲಾಗುತ್ತಿದೆ. ಹೆಚ್ಚು ಗಡಿ ಪ್ರದೇಶಗಳಲ್ಲಿ ನಡೆಸಲಾಗುತ್ತಿದ್ದು, ಪೋಲೈಟ್ ಪ್ರಾಜೆಕ್ಟ್ ಆಗಿ ತೆಗೆದುಕೊಳ್ಳಲಾಗಿದೆ. ಅನುಕೂಲ ಆದರೆ ಇನ್ನಷ್ಟು ಡ್ರೋನ್ಗಳನ್ನು ಖರೀದಿ ಗಸ್ತು ಹೆಚ್ಚಿಸಲಾಗುವುದು.
- ಬಿ.ನಿಖಿಲ್, ಕೋಲಾರ ಎಸ್ಪಿ,