ಕೋಲಾರ ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ನಡೆದ ಕುಡಿಯುವ ನೀರು ಮತ್ತು ಬೇಸಿಗೆ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಮಾತನಾಡಿದರು. 
ಕೋಲಾರ

ಕಲುಷಿತ ನೀರು ಪೂರೈಕೆಯಾಗದಿರಲಿ

ಕಿರುವಾರ ಎಸ್.ಸುದರ್ಶನ್
ಕೋಲಾರ: ಬೇಸಿಗೆ ಕಾಲದಲ್ಲಿ ಸಾರ್ವಜನಿಕರಿಗೆ ಕಲುಷಿತ ನೀರು ಪೂರೈಕೆಯಾಗದಂತೆ ಅಧಿಕಾರಿಗಳು ಎಚ್ಚರವಸಹಿಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಕುಡಿಯುವ ನೀರು ಮತ್ತು ಬೇಸಿಗೆ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು, ಸಮಸ್ಯಾತ್ಮಕ ಗ್ರಾಮ, ವಾರ್ಡ್​ಗಳ ಬಗ್ಗೆ ನಿಗಾ ಇರಬೇಕು ಎಂದು ತಿಳಿಸಿದರು.
ಕುಡಿಯುವ ನೀರಿನಲ್ಲಿ ಯಾವುದೇ ಕಲುಷಿತ ಅಂಶಗಳು ಕಂಡುಬರದಂತೆ ಜಾಗರೂಕತೆ ವಹಿಸಬೇಕು. ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ ಲೋಪವೆಸಗುವ ಅಥವಾ ರ್ನಿಲಕ್ಷ$್ಯ ತೋರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿ ವಾರವು ಕಡ್ಡಾಯವಾಗಿ ನೀರಿನ ಮಾದರಿ ಪರೀಕ್ಷಿಸಬೇಕು. ಚಿತ್ರದುರ್ಗದ ಘಟನೆಯಿಂದ ನಾವು ಪಾಠ ಕಲಿಯಬೇಕಿದೆ. ಪೈಪ್​ಲೈನ್​ಗಳಲ್ಲಿ ಸೋರಿಕೆ ಉಂಟಾಗಿ ಒಳಚರಂಡಿ ನೀರು ಮಿಶ್ರಣವಾಗದಂತೆ ನೋಡಿಕೊಳ್ಳುವುದು ಸ್ಥಳಿಯ ಸಂಸ್ಥೆಗಳ ಜವಾಬ್ದಾರಿ. ಪ್ರತಿ 10 ದಿನಕ್ಕೊಮ್ಮೆ ಎಫ್​ಟಿಕೆ ಕಿಟ್​ಗಳ ಮೂಲಕ ಓವರ್​ ಹೆಡ್​ ಟ್ಯಾಂಕ್​ಗಳ ನೀರನ್ನು ಪರೀಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರವಿಣ್​. ಪಿ. ಬಾಗೇವಾಡಿ, ಅಪರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರವಿಶಂಕರ್​, ಅಪರ ಜಿಲ್ಲಾಧಿಕಾರಿ ಎಸ್​.ಎಂ. ಮಂಗಳ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಜಿ.ಎಂ.ರಮೇಶ್​, ಹಿರಿಯ ಭೂವಿಜ್ಞಾನಿ ತಿಪ್ಪೆಸ್ವಾಮಿ, ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕಿ ಅಂಬಿಕಾ, ನಗರಸಭೆ ಆಯುಕ್ತ ನವೀನ್​ ಚಂದ್ರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚಂದನ್​ ಕುಮಾರ್​ ಉಪಸ್ಥಿತರಿದ್ದರು.
* ಖಾಸಗಿ ಆರ್​ಒ ಟಕಗಳ ಮೇಲಿರಲಿ ನಿಗಾ
ಜಿಲ್ಲೆಯಲ್ಲಿರುವ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತು ಕ್ಯಾನ್​ ನೀರು ಪೂರೈಸುವ ವೆಂಡರ್​ಗಳ ಮಾಲೀಕರು ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಣ ಮಾಡದೆ ಇರುವ ಬಗ್ಗೆ ದೂರುಗಳಿವೆ. ಇದನ್ನು ನಿಯಂತ್ರಿಸಲು ತಾಲೂಕು ಮಟ್ಟದ ಟಾಸ್ಕ್​ ಫೋರ್ಸ್​ ರಚಿಸಲಾಗಿದೆ. ಅನಧಿಕೃತವಾಗಿ ನೀರು ಮಾರಾಟ ಮಾಡುವವರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ. ಕಲುಷಿತ ನೀರು ನೀಡುವ ಮೂಲಕ ಸಾರ್ವಜನಿಕರ ಆರೋಗ್ಯದ ಜತೆ ಚೆಲ್ಲಾಟವಾಡುವ ಘಟಕಗಳನ್ನು ತಕ್ಷಣವೇ ಬಂದ್​ ಮಾಡಿಸಬೇಕು ಎಂದು ಡಾ.ಎಂ.ಆರ್​.ರವಿ ಹೇಳಿದರು.
ಮುಂಬರುವ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ 176 ಗ್ರಾಮ ಹಾಗೂ ನಗರ ಪ್ರದೇಶದ 52 ವಾರ್ಡ್​ಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ನೀರಿನ ಕೊರತೆ ಎದುರಾದಲ್ಲಿ ತಕ್ಷಣವೇ ನೀರು ಪೂರೈಸಲು ಜಿಲ್ಲೆಯಲ್ಲಿ 70 ಖಾಸಗಿ ಬೋರ್​ವೆಲ್​ಗಳನ್ನು ಗುರುತಿಸಲಾಗಿದೆ. ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಸೂಚಿಸಿದರು.
ಯರಗೋಳ್​ ಅಣೆಕಟ್ಟೆಯಲ್ಲಿ ಪ್ರಸ್ತುತ 202 ಎಂಎಲ್​ಡಿ ನೀರು ಲಭ್ಯವಿದ್ದು, ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳ ಸುಮಾರು 59 ವಾರ್ಡ್​ಗಳಿಗೆ ದಿನನಿತ್ಯ ನೀರು ಪೂರೈಸಲಾಗುತ್ತಿದೆ. ಸದ್ಯ ಇರುವ ನೀರು ಮೂರು ತಿಂಗಳು ಲಭ್ಯವಾಗಲಿದ್ದು ಮಳೆ ಬಂದರೆ ಅನುಕೂಲವಾಗಲಿದೆ ಎಂದು ತಿಳಿಸಿದರು.
* 25 ವಾರಗಳಿಗೆ ಆಗುವಷ್ಟು ಮೇವಿದೆ
ಜಿಲ್ಲೆಯಲ್ಲಿ ಪ್ರಸ್ತುತ 3,03,442 ಟನ್​ ಮೇವು ಲಭ್ಯವಿದ್ದು, ಇದು ಮುಂದಿನ 25 ವಾರಗಳಿಗೆ ಸಾಕಾಗಲಿದೆ. 1,316 ನೀರಿನ ತೊಟ್ಟಿಗಳ ಮೂಲಕ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಶಾಖ ತರಂಗ ಕ್ರಿಯಾ ಯೋಜನೆ-&2026 ಅಡಿಯಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷದಿಗಳು ಮತ್ತು ದಾಸ್ತಾನು ಇಟ್ಟುಕೊಳ್ಳಲು ಹಾಗೂ ನರೇಗಾ ಕೆಲಸದ ಅವಧಿಯನ್ನು ಬಿಸಿಲಿನ ತಾಪಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಬೇಕು ಎಂದು ಡಿಸಿ ಡಾ.ಎಂ.ಆರ್​.ರವಿ ಹೇಳಿದರು.