ಕೋಲಾರ: ತಾಲೂಕಿನ ಕೊಂಡರಾನಹಳ್ಳಿ ಗ್ರಾಮದ ಜಮೀನು ಭೂ ಪರಿವರ್ತನೆ ಆದೇಶದಲ್ಲಿ ಅಕ್ರಮವೆಸಗಿರುವುದು ಬೆಳಕಿಗೆ ಬಂದಿದೆ.
ತಾಲೂಕಿನ ಕೊಂಡರಾಜನಹಳ್ಳಿ ಗ್ರಾಮದ ಸರ್ವೆ ನಂಬರ್ 46/1ರ 0-35 ಗುಂಟೆ ಜಮೀನಿನ ಭೂ ಪರಿವರ್ತನೆಗೆ ಸಂಬಂಧಿಸಿದಂತೆ ದಾಖಲೆ ಸಿದ್ದವಾಗಿರುವುದು ನಕಲಿಯಾಗಿದೆ. ಇದರಲ್ಲಿ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಅವರ ಸಹಿಯನ್ನೇ ಪೋರ್ಜರಿ ಮಾಡಿರುವುದು ಮೇಲ್ನೋಟಕ್ಕೆ ಸಾಭೀತಾಗಿದೆ.
ಒಂದೇ ಸರ್ವೇ ನಂಬರ್ ಜಾಗವನ್ನು 2013 ಏಪ್ರಿಲ್ 10 ಹಾಗೂ 2023ರ ಡಿಸೆಂಬರ್ 29ರಂದು ಎರಡು ಬಾರಿ ಭೂ ಪರಿವರ್ತನೆ ಮಾಡಿ ಆದೇಶಿಸಲಾಗಿದೆ. ಇದನ್ನು ಗಮನಿಸಿದಾಗ ಅಕ್ರಮವೆಸಗಿರುವುದು ಪತ್ತೆಯಾಗಿದೆ.
ಡಿ.ಕೆ.ರವಿ ಜಿಲ್ಲಾಧಿಕಾರಿ ಸೇವಾ ಅವಧಿಯು 2013ರ ಆಗಸ್ಟ್ ನಿಂದ 2014ರಿಂದ ಅಕ್ಟೋಬರ್ವರೆಗೆ ಕರ್ತವ್ಯ ನಿರ್ವಹಿಸಿದ್ದು, ಆ ಅವಧಿಯಲ್ಲಿ ಡಿಜಿಟಲ್ ಸಹಿ ಇರುವುದಿಲ್ಲ. ಆದರೆ ಸುಳ್ಳು ದಾಖಲೆಗಳನ್ನು ನೀಡಿ ಆದೇಶ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಲ್ಲಿ ಖಾತೆದಾರ ನಾರಾಯಣಸ್ವಾಮಿ ಹಾಗೂ ಪಂಚಾಯಿತಿ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಕೆಯಾಗಿತ್ತು.
ತನಿಖೆಗಾಗಿ ಜಿಲ್ಲಾಡಳಿತದಿಂದ ತಹಶೀಲ್ದಾರ್ ಹಾಗೂ ತಾ.ಪಂ ಇಒ ಅವರಿಗೆ ನಿರ್ದೇಶನ ಬಂದಿತ್ತು, ಆದರಂತೆ ತಹಶೀಲ್ದಾರ್ ವರದಿಯಂತೆ ಆರೋಪ ಸಾಭೀತಾಗಿದ್ದರು ಸಹ ತಪ್ಪಿಸ್ಥ ಅಧಿಕಾರಿಗಳ ಯಾವುದೇ ರೀತಿ ಕ್ರಮ ಆಗದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
* ತಪ್ಪಿತಸ್ಥರ ವಿರುದ್ಧ ಯಾಕಿಲ್ಲ ಕ್ರಮ..?
ಕಳೆದ 2013ರಲ್ಲೇ ಭೂ ಪರಿವರ್ತನೆ ಮಾಡಲಾಗಿದೆ ಎಂಬುದಾಗಿ ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿಯನ್ನು ಪೋರ್ಜರಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಬಗ್ಗೆ ಸಂಬಂಧಪಟ್ಟ ಭೂ ಮಾಲೀಕರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸುವ ಹಾಗೂ 2023ರ ಭೂ ಪರಿವರ್ತನೆ ಆದೇಶ ಪ್ರತಿಯೂ ತಂತ್ರಾಂಶದಲ್ಲಿ ಸಾರ್ವಜನಿಕವಾಗಿ ಲಭ್ಯವಿದ್ದರೂ ಸಹ ಪರಿಶೀಲಿಸಿಕೊಂಡು ದೃಢಪಡಿಸಿಕೊಳ್ಳದೇ ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇ ಔಟ್ ವಿನ್ಯಾಸ ಅನುಮೋದನೆಯಿಲ್ಲದೇ ನಕಲಿ ದಾಖಲೆಗಳ ಆಧಾರದ ಮೇರೆಗೆ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮವಾಗಿ ಖಾತೆಗಳನ್ನು ಮಾಡಿರುವವರ ವಿರುದ್ಧ ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಜಿಲ್ಲಾಧಿಕಾರಿಗಳಿಂದ ನಿರ್ದೇಶಿಲ್ಪಟ್ಟಿದ್ದು, ಪಂಚಾಯಿತಿ ಅಧಿಕಾರಿಗಳು ಕ್ರಮಜರುಗಿಸಬೇಕಾಗಿದೆ.
ಹಿಂದಿನ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ಸಹಿ ಪೋರ್ಜರಿ ಮಾಡಿರುವುದು ಅಧಿಕಾರಿಗಳ ತನಿಖೆಯಲ್ಲಿ ಸಾಭೀತಾಗಿದ್ದು, ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳವಲ್ಲಿ ಅಧಿಕಾರಿಗಳು ವಿಳಂಭ ತೋರುತ್ತಿದೆ.
- ಡಿ.ಮುನೇಶ್, ಚಂಜಿಮಲೆ, ದೂರುದಾರ.