ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ನಡೆದ ವಚನಕಾರ ದೇವರ ದಾಸೀಮಯ್ಯ ಜಯಂತಿ ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಉದ್ಘಾಟಿಸಿದರು.
ಕೋಲಾರ: ನೇಕಾರರಿಗೆ ವೃತ್ತಿಯೊಂದಿಗೆ ತತ್ವ ಬೋಧಿಸಿದವರು ಶಿವಶರಣ ದೇವರ ದಾಸೀಮಯ್ಯ. ಅವರ ವೈಚಾರಿಕ, ನಿಷ್ಠುರ, ಸಾಮಾಜಿಕ ಸುಧಾರಣೆಯ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಉಪ ವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಪಂಜಮಸಾಲಿ,
ನೇಕಾರ ಸಮುದಾಯಗಳ ಸಹಾಯೋಗದಲ್ಲಿ ಸೋಮವಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಚನಕಾರ ದೇವರ ದಾಸೀಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುಮಾರು10-&11 ನೇ ಶತಮಾನದ ಆದ್ಯ ವಚನಕಾರ ಶಿವಶರಣ ದೇವರ ದಾಸಿಮಯ್ಯನವರು ರಾಮನಾಥ ಅಂಕಿತದೊಂದಿಗೆ ಸರಳ ಕನ್ನಡದಲ್ಲಿ ವಚನಗಳನ್ನು ಬರೆದವರು, ಕನ್ನಡ ಸಾಹಿತ್ಯದ ಆದ್ಯ ವಚನಕಾರರಲ್ಲಿ ಒಬ್ಬರು. ಬಸವಣ್ಣನವರಿಗಿಂತ ಮುಂಚೆಯೇ ವಚನ ಚಳುವಳಿಗೆ ಅಡಿಪಾಯ ಹಾಕಿದವರು ಎಂದು ತಿಳಿಸಿದರು.
ಕಾಯಕವೇ ಕೈಲಾಸ ಎಂಬ ತತ್ವವನ್ನು ಎತ್ತಿಹಿಡಿದು, ಸಮಾಜದಲ್ಲಿದ್ದ ಮೂಢ ನಂಬಿಕೆಗಳನ್ನು ವಿರೋಧಿಸಿದವರು. ಸಮ ಸಮಾಜದ ನಿಮಾರ್ಣಕ್ಕೆ ಅಡಿಪಾಯ ಹಾಕಿದ
ದೇವರ ದಾಸಿಮಯ್ಯ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಹಾದಿಯಲ್ಲಿ ಸಾಗಬೇಕು ಎಂದರು.
ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅಧ್ಯಕ್ಷ ಎಂ.ವಿ.ರವೀಂದ್ರ ಮಾತನಾಡಿ, ತೀರ ಹಿಂದುಳಿದ ಸಮುದಾಯದಲ್ಲಿ 45 ಉಪ ಪಂಗಡಗಳಿವೆ. ಸುಮಾರು 50 ಲಕ್ಷ ಜನ ಸಂಖ್ಯೆಯಲ್ಲಿ ಇದ್ದರೂ ಸಂಘಟನೆಯ ಕೊರತೆಯಿಂದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ಸರ್ಕಾರಗಳು ನಮ್ಮನ್ನು ಓಟ್ ಬ್ಯಾಂಕ್ಗಾಗಿ ಮಾತ್ರ ಬಳಕೆ ಮಾಡಿಕೊಳ್ಳುತ್ತಿದೆ ಹೊರತು, ಗುರುತಿಸುತ್ತಿಲ್ಲ ಕೆಲಸ ಮಾಡಲಿಲ್ಲ. ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ ಆಗಿಲ್ಲ. ಸರ್ಕಾರದ ಮುಂದೆ ಬೇಡಿಕೆಗಳನ್ನು ಇಟ್ಟರು ಸಹ ಸ್ಪಂದಿಸುತ್ತಿಲ್ಲ. ಇನ್ನಾದರೂ ಸಮುದಾಯದವರು ಎಚ್ಚೆತ್ತುಕೊಂಡು ಸಂಘಟನೆಗೆ ಒತ್ತು ನೀಡಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಮುಖ್ಯ ವಾಹನಿಗೆ ತರುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಉಪನ್ಯಾಸಕಿ ಡಾ.ರಾಧಮ್ಮ ಶಿವಶರಣ ವಚನಕಾರ ದೇವರ ದಾಸಿಮಯ್ಯನವರ ಬಗ್ಗೆ
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ, ಪದ್ಮಶಾಲಿ ಸಂಘದ ಗೌರವ ಅಧ್ಯಕ್ಷ ವೆಂಕಟರವಣಪ್ಪ,ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಕಾರ್ಯದರ್ಶಿ ಚಂದ್ರಶೇಖರ್, ಒಕ್ಕೂಟದ ಮಾಲೂರು ತಾಲೂಕು ಅಧ್ಯಕ್ಷ ವಿ.ಎನ್.ರವಿಕುಮಾರ್, ಮುಖಂಡರಾದ ಜಿ.ಸಿ.ಕೃಷ್ಣಮೂರ್ತಿ, ನವರತ್ನ ಕುಮಾರ್, ಶ್ರೀನಿವಾಸ್, ನಂಜುಡೇಶ್ವರ, ಜಿ.ಸಿ.ಲಕ್ಷಿ$್ಮಪತಿ ಮುಂತಾದವರು ಉಪಸ್ಥಿತರಿದ್ದರು.