ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಕಚೇರಿ.
ಕೋಲಾರ: ನಗದು ದುರುಪಯೋಗ ಪಡಿಸಿಕೊಂಡಿರುವ ಆರೋಪದ ಮೇಲೆ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಇಬ್ಬರು ಅಧಿಕಾರಿಗಳ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿರಿಯ ಸಹಾಯಕ ಜಿ.ಎನ್.ಸತೀಶ್, ಎಚ್.ಎನ್. ಮಧುಸೂದನ್ ವಿರುದ್ಧ ಬ್ಯಾಂಕಿನ ವ್ಯವಸ್ಥಾಪಕ ಹಾಗೂ ಕಾನೂನು ಕೋಶ ವಿಭಾಗಾಧಿಕಾರಿ ನಗರದ ಗಲ್‌ಪೇಟೆ ಠಾಣೆಗೆ ಫೆ.17ರಂದು ದೂರು ನೀಡಿದ್ದಾರೆ.
ತಾಲೂಕಿನ ಬೆಳ್ಳೂರು ಗ್ರಾಮದ ರತ್ನಮ್ಮ ಎಂಬುವರ ಖಾತೆ ವ್ಯವಹಾರ ಮಾಡದ ಕಾರಣ ನಿಷ್ಕ್ರಿಯಗೊಂಡಿತ್ತು. ಅದಕ್ಕೆ ಜಿ.ಎನ್.ಸತೀಶ್ ಅವರ ಸಂಬಂಧಿ. 2 ರೂ. ಜಮಾ ಮಾಡಿ ಖಾತೆ ಚಾಲ್ತಿಗೆ ತಂದು. ಖಾತೆಯಲ್ಲಿದ್ದ 68,030 ರೂ. ಪೈಕಿ 2025ರ ಆ.11ರಂದು ಚೆಕ್ ಇಲ್ಲದೆ ಡೆಬಿಟ್ ಟ್ರಾನ್ಸ್‌ಫರ್ ಚಲನ್ ಮೂಲಕ 60 ಸಾವಿರ ರೂ. ಡೆಬಿಟ್ ಮಾಡಿದ್ದಾರೆ. ನಂತರ ಗೌರಿಬಿದನೂರು ಶಾಖೆಯ ಉಳಿತಾಯ ಖಾತೆ ಹೊಂದಿರುವ ಸುಜಾತಮ್ಮ ಎಂಬುವರ ಖಾತೆಗೆ ಜಮಾ ಮಾಡಿದ್ದಾರೆ. ಸುಜಾತಮ್ಮ ಎನ್ನುವವರು ಎಚ್.ಎಂ.ಮಧುಸೂದನ್ ಮಧುಸೂದನ್ ಮುಂದುವರಿದು 2024ರ ಅ.1ರಂದು ಅಲ್ಪಾವಧಿ ಬೆಳೆ ಸಾಲ ವಸೂಲಾತಿಯಾಗಿರುವುದಕ್ಕೆ ಸರ್ಕಾರದಿಂದ 5,98,048 ರೂ. ಬಡ್ಡಿ ಸಹಾಯಧನ ಬಿಡುಗಡೆಯಾಗಿದ್ದು, ಈ ಹಣದಲ್ಲೂ 7,730 ರೂ.ಗಳನ್ನು ಮಧಸೂದನ್ ಮತ್ತೆ ಸುಜಾತಮ್ಮ ಅವರ ಉಳಿತಾಯ ಖಾತೆಗೆ ಜಮೆ ಮಾಡಿದ್ದಾರೆ. ಗ್ರಾಹಕರ ಖಾತೆ, ಬಡ್ಡಿ ಹಣಕ್ಕೂ ಕನ್ನ ಹಾಕಿರುವ ಆರೋಪದಡಿ ಕಾನೂನು ಕೋಶಾಧಿಕಾರಿ ಗಿರೀಶ್ ದೂರು ನೀಡಿದ್ದಾರೆ. ಎಫ್ ಐಆರ್ ದಾಖಲಾಗುತ್ತಿದ್ದಂತೆ ಮಧುಸೂದನ್ ಅನುಮತಿ ಪಡೆಯದೆ ರಜೆ ತೆಗೆದುಕೊಂಡಿದ್ದಾರೆ. ಇನ್ನು ಜಿ.ಎನ್.ಸತೀಶ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಹೇಳಿಕೆ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ ಬ್ಯಾಂಕಿಗೆ ಭೇಟಿ ಪರಿಶೀಲನೆ ನಡೆಸಿದ್ದು ತನಿಖೆ ಚುರುಕುಗೊಳಿಸಿದ್ದಾರೆ.
ಕಿರಿಯ ಸಹಾಯಕ ಜಿ.ಎನ್.ಸತೀಶ್ ಶಾಖಾ ವ್ಯವಸ್ಥಾಪರಕರ ಜತೆ ಶಾಮಿಲಾಗಿ ಮಿಸ್ಟರ್ ಲಿಖಿತ್ ಚಕ್ರವರ್ತಿ ಅವರ ಉಳಿತಾಯ ಖಾತೆಗೆ ಜಂಟಿಯಾಗಿ ವ್ಯವಹರಿಸುತ್ತಿರುವ ಬ್ಯಾಂಕೊಂದರ ಚಾಲ್ತಿ ಖಾತೆಯಿಂದ ಆರ್ ಟಿಜಿಎಸ್ ಮೂಲಕ ಅಕ್ರಮವಾಗಿ 20 ಲಕ್ಷ ರೂ. ವರ್ಗಾವಣೆ ಮಾಡುವ ಮೂಲಕ ಅಕ್ರಮವೆಸಗಿದ್ದಾರೆ. ಕೋಲಾರ ಶಾಖೆಯಲ್ಲಿ ನಗದು ಗುಮಾಸ್ತನಾಗಿ ಸೇವೆ ಸಲ್ಲಿಸುತ್ತಿದ್ದ ಸತೀಶ್ 2025ರ ಅ.22ರಂದು ಕೋಲಾರ ಶಾಖೆಗೆ ಅಣ್ಣಹಳ್ಳಿ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಉಳಿತಾಯ ಖಾತೆಗೆ 10 ಲಕ್ಷ ರೂ. ಜಮೆ ಮಾಡಿದ್ದಾರೆ. ನಗದು ಸ್ವೀಕೃತವಾಗಿರುವ ಬಗ್ಗೆ ಬ್ಯಾಂಕಿಗೆ ಕೌಂಟರ್ ಫಾಯಿಲ್ ನಗದು ಗುಮಾಸ್ತರು ಏಕ ಮಾತ್ರ ಸಹಿಯೊಂದಿಗೆ ಸಂಘಕ್ಕೆ ನೀಡಿ ಕರ್ತವ್ಯ ಉಲ್ಲಂಘಿಸಿದ್ದಾರೆ. ಜಮೆ ಮಾಡಿದ ಹಣ ಸ್ಕೋಲ್‌ಗೆ ಜಮೆ ಪಡೆಯದೆ ದುರ್ಬಳಕೆ
ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದ್ದು, ಸೇವೆಯಿಂದ ಅಮಾನತುಪಡಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಫೆ.11ರಂದು ಆದೇಶಿಸಿದ್ದಾರೆ.