ಪೌರ ನೌಕರರಿಗಾಗಿ ಮೀಸಲಿಟ್ಟಿರುವ ಜಾಗದಲ್ಲಿ ಸಂದಿಂದ ಬೋರ್ಡ್ ಅಳವಡಿಸಿರುವುದು.
ಕೋಲಾರ: ಪೌರಕಾರ್ಮಿಕರ ವಸತಿ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದ ಜಾಗ ಸಂಬಂಧ ನಕಲಿ ದಾಖಲೆ ಸೃಷ್ಟಿಸಿಕೊಂಡು ಕಬಳಿಸಲು ಯತ್ನಿಸಿರುವ 9 ಮಂದಿ ವಿರುದ್ಧ, ನಗರ ಗಲ್ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಶಾಂತಿನಗರದ ನಿವಾಸಿಗಳಾದ ಲಕ್ಷ$್ಮಮ್ಮ (60), ಶಕುಂತಲ (30), ಶಶಿಧರ್ (43), ಆನಂದ (53), ನಗರದ ಧರ್ಮರಾಯ ನಗರದ ಹರೀಶ್ ಕುಮಾರ್ (46) ಬೆಂಗಳೂರಿನ ಕೆ.ಆರ್.ಪುರ ನಿವಾಸಗಿಳಾದ ಗಾಯಿತ್ರಿ (36), ಮೋಹನ್ (46), ಖಾಸಗಿ ಸರ್ವೇಯರ್ಗಳಾದ ಮಹೇಶ್ ಬಾಬು, ರಾಮಕೃಷ್ಣಪ್ಪ ವಿರುದ್ಧ ಪೌರ ನೌಕರರ ಗೃಹ ನಿರ್ಮಾಣ ಸಹಕಾರ ಸಂದ ಅಧ್ಯಕ್ಷ ವಿ.ಮೋಹನ್ ಮಾ.27ರಂದು ಪೊಲೀಸರಿಗೆ ದೂರು ನೀಡಿದ್ದು, ಎ್ಐಆರ್ ದಾಖಲಾಗಿದೆ.
ತಾಲೂಕಿನ ಬಾರಂಡಹಳ್ಳಿ ಗ್ರಾಮದ ಸರ್ವೇ ನಂಬರ್ 6ರ ಪೈಕಿ 3 ಎಕರೆ 29 ಗುಂಟೆ ಹಾಗೂ ಸವೇ ನಂಬರ್ 5ರ ಪೈಕಿ 1 ಎಕರೆ 17 ಗಂಟೆ ಜಮೀನನ್ನು ಪೌರ ನೌಕರರ ಗೃಹ ನಿರ್ಮಾಣದ ಸಲುವಾಗಿ 2001ರಲ್ಲಿ ಖರೀದಿ ಮಾಡಿ ಸಂದ ಪರವಾಗಿ ಅಂದಿನ ಅಧ್ಯಕ್ಷ ಟಿ.ವೆಂಕಟೇಶ್ ಅವರಿಗೆ ಹೆಸರಿಗೆ ಕ್ರಯ ಮಾಡಲಾಗಿರುತ್ತದೆ.
ಇದಕ್ಕೆ ಲೆಕ್ಕಪರಿಶೋಧಕರಿಂದ ಆಕ್ಷೇಪ ಬಂದಿದ್ದರಿಂದ ವೆಂಕಟೇಶ್ ಅವರೇ 227 ಮಂದಿ ಪೌರ ಕಾರ್ಮಿಕರಿಗೆ ಹಕ್ಕು ಪತ್ರಗಳನ್ನು ವಿತರಿಸಿದ್ದರು. 2008ರಲ್ಲಿ ವೆಂಕಟೇಶ್ ಮೃತಪಟ್ಟಿದ್ದು ತದ ನಂತರ ನಗರಸಭೆ ಕಚೇರಿಯ ಜವಾನ ಆನಂದ ಮತ್ತು, ಮೃತತರ ಪತ್ನಿ ಲಕ್ಷ$್ಮಮ್ಮ ಮತ್ತು ಮಕ್ಕಳು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಖತಾ ಬದಲಾಯಿಸಿಕೊಂಡಿರುತ್ತಾರೆ.
ಸದರಿ ಜಮೀನು ಸಂಬಂಧ 11 (ಎ) ನೆಯನ್ನು ಮಾಡಿಸಿದ್ದು, ಇದಕ್ಕಾಗಿ ಮೃತಪಟ್ಟಿರುವ ವೆಂಕಟೇಶ್ ಹೆಸರಿನಲ್ಲಿ 2025ರಲ್ಲಿ ಅರ್ಜಿ ಸಲ್ಲಿಸಿ, ಆನಂದ ಅವರ ಮೊಬೈಲ್ ಸಂಖ್ಯೆಯನ್ನು ನೀಡಲಾಗಿರುತ್ತದೆ. ಈ ಅಕ್ರಮ ಪರಭಾರೆಯನ್ನು ಮನಗಂಡ ಪೌರಕಾರ್ಮಿಕ ನಿರ್ಮಾಣ ಸಂದ ಅಧ್ಯಕ್ಷ ಮೋಹನ್ ಹಾಗೂ ಇತರರು, ನ್ಯಾಯಾಲಯದಲ್ಲಿ ಧಾವೆ ಹೂಡಿ ತಡೆಯಾಜ್ಞೆ ನೀಡಲು ಕೋರಿದ್ದರು, ಅದರಂತೆ ತಡೆಯಾಜ್ಞೆ ನೀಡುರುವ ನ್ಯಾಯಾಲಯವು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದ್ದರಿಂದ ದೂರು ದಾಖಲಾಗಿದೆ.