ಕೋಲಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಕೋಲಾರ: ಕರ್ತವ್ಯದ ಒತ್ತಡದಿಂದ ಮುಕ್ತರಾಗಿ ನೆಮ್ಮದಿ ಕಂಡುಕೊಳ್ಳಲು ನೌಕರರಿಗೆ ಕ್ರೀಡೆ, ಸಾಂಸತಿಕ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಅದೇ ಪ್ರಮಾಣದಲ್ಲೂ ಸೇವೆಯಲ್ಲೂ ಸಹ ಬದ್ಧತೆ, ಪ್ರಮಾಣಿಕತೆ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ನೌಕರರ ನೆಮ್ಮದಿಗಾಗಿ ಕ್ರೀಡೆ ಬೇಕಾಗಿದೆ. ರಜೆ ದಿನ ಬಿಟ್ಟರೆ ಬೇರೆ ದಿನ ಕ್ರೀಡೆ, ಸಾಂಸತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯುವುದಿಲ್ಲ. ಈಗ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತನ್ನಮ್ಮಲಿರುವ ಪ್ರತಿಭೆ ಅನಾವರಣಗೊಳಿಸಬೇಕು ಎಂದು ಹೇಳಿದರು.
ನೌಕರರು, ಸಿಬ್ಬಂದಿ ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕು. ಜಿಲ್ಲೆಯ ಜನತೆ ಪರವಾಗಿ ಪ್ರಮಾಣಿಕ ಕೆಲಸ ಮಾಡಬೇಕು. ಸೇವೆಯಲ್ಲಿ ಪ್ರತಿಭೆ ತೋರಿಸಬೇಕು ಎಂದು ಕಿವಿಮಾತು ಹೇಳಿದರು.
ಡಿಸಿ, ಎಸ್ಪಿ, ಸಿಇಒ, ಎಸಿ, ತಹಶೀಲ್ದಾರ್ ಜತೆವೆ ನೌಕಕರು ಇದ್ದು ಕೃಷಿ ಪ್ರಧಾನ ಕೋಲಾರ ಜಿಲ್ಲೆಯನ್ನು ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದಾರೆ. ಸಮಸ್ಯೆ ಹೇಳಿಕೊಂಡು ಕಚೇರಿಗೆ ಸಾರ್ವಜನಿಕರು ಬಂದಾಗ ಸೌಜನ್ಯದಿಂದ ಸ್ಪಂದಿಸಿ ಬಗೆಹರಿಸಬೇಕು ಎಂದು ತಿಳಿಸಿದರು.
ಕ್ರೀಡೆಯಲ್ಲಿ ಗೆದ್ದರು ಸೋತರು ಸಮವಾಗಿ ತೆಗೆದುಕೊಳ್ಳಬೇಕು. ಲಕ್ಷಾಂತರ ಮಂದಿಗೆ ಬುದ್ದಿ ಹೇಳುವ ಸ್ಥಾನದಲ್ಲಿ ನೌಕರರು ಇದ್ದೀರ. ಇದರ ಸದುಪಯೋಗ ಆಗಬೇಕು. ವೃತ್ತಿ ಜೀವನದಲ್ಲಿ ಬದ್ಧತೆಯಿದ್ದರೆ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದರು.
ಅಂತರಾಷ್ಟ್ರೀಯ ಕ್ರೀಡಾಪಟು ರಾಜೇಂದ್ರ ಕ್ರೀಡಾ ಜ್ಯೋತಿ ಬೆಳೆಗಿಸಿದರು. ಪ್ರತಿ ತಾಲೂಕಿನ ನೌಕರರ ತಂಡ ಕ್ರೀಡಾಪಟುಗಳು ಪಥ ಸಂಚಲನ ನಡೆಸಿ ಗೌರವ ಸೂಚಿಸಿದರು.
* ಆರೋಗ್ಯಕ್ಕಾಗಿ ಕ್ರೀಡಾಭ್ಯಾಸ ಮುಖ್ಯ
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ಕ್ರೀಡೆಯೂ ಆರೋಗ್ಯಕ್ಕೆ ಒಳ್ಳೆಯದು. ಯಾಕೆಂದರೆ ಇದರಲ್ಲಿ ವಿವಿಧ ರೀತಿಯ ವ್ಯಾಯಮ ಇರುತ್ತದೆ. ಪ್ರತಿನಿತ್ಯ ಅಭ್ಯಾಸದಲ್ಲಿ ತೊಡಗಿಸಿಕೊಂಡು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಎಂದು ಹೇಳಿದರು. ನಾನು ಸಹ ಕಬ್ಬಡಿ ಆಟಗಾರನಾಗಿದ್ದು, ಇದೇ ಕ್ರೀಡಾಂಗಣದಲ್ಲಿ ಬಹುಮಾನ ಗೆದ್ದುಕೊಂಡು ಹೋಗಿರುವುದು ಈಗಲೂ ನನಗೆ ನೆನಪಿದೆ. ವರ್ಷಕೊಮ್ಮೆ ಸಿಗುವ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಯಾವುದೇ ರೀತಿ ಬೇಧ ಭಾವವಿಲ್ಲ. ಇಲ್ಲಿರುವುದು ಕ್ರೀಡೆಯ ಜಾತಿ ಮಾತ್ರ ಎಂದು ತಿಳಿಸಿದರು.
* ಒತ್ತಡ ನಿವಾರಣೆಗಾಗಿ ಕ್ರೀಡಾಕೂಟ ಆಯೋಜನೆ
ನೌಕರರ ಸಂದ ಜಿಲ್ಲಾಧ್ಯಕ್ಷ ಎ.ಅಜಯ್ ಕುಮಾರ್ ಮಾತನಾಡಿ, ಸರ್ಕಾರಿ ಇಲಾಖಾಧಿಕಾರಿಗಳು, ಸಿಬ್ಬಂದಿ ನಿತ್ಯ ಕರ್ತವ್ಯದ ಜಂಜಾಟದಿಂದ ಒತ್ತಡದಲ್ಲಿ ಇರುತ್ತಾರೆ. ಒತ್ತಗಳಿಂದ ಮುಕ್ತರಾಗಲು ವರ್ಷಕ್ಕೊಮ್ಮೆ ಕ್ರೀಡಾಕೂಟ, ಸಾಂಸತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬದಲಾಗುತ್ತಿದೆ. ಇದರ ಯಶಸ್ಸಿಗೆ ಸಹಕಾರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂಎಲ್ಸಿಗಳಾದ ಎಂ.ಎಲ್.ಅನಿಲ್ ಕುಮಾರ್, ಡಿ.ಟಿ.ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಎಸ್ಪಿ ಕನ್ನಿಕಾ ಸಿಕ್ರಿವಾಲ್, ತಹಶೀಲ್ದಾರ್ ಡಾ.ಎಂ.ನಯನಾ, ಡಿಎಚ್ಒ ಡಾ.ಜಿ.ಶ್ರೀನಿವಾಸ್, ಸಂದ ಗೌರವಾಧ್ಯಕ್ಷ ಕೆ.ಎನ್.ಮಂಜುನಾಥ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸರೆಡ್ಡಿ, ವಿವಿಧ ತಾಲೂಕು ಅಧ್ಯಕ್ಷರಾದ ಶ್ರೀನಿವಾಸಪುರ ಎಂ.ಬೈರೇಗೌಡ, ವಿ.ಮುನೇಗೌಡ, ಮುಳಬಾಗಿಲು ಅರವಿಂದ್, ಬಂಗಾರಪೇಟೆ ರವಿ, ಕೆಜಿಎ್ ನರಸಿಂಹಮೂರ್ತಿ ಉಪಸ್ಥಿತರಿದ್ದರು.