ಕೋಲಾರದ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು. 
ಕೋಲಾರ

ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ!

ಕಿರುವಾರ ಎಸ್.ಸುದರ್ಶನ್
ಕೋಲಾರ: ಜಿಲ್ಲಾ ನ್ಯಾಯಾಲಯಕ್ಕೆ ಶುಕ್ರವಾರ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ 2 ಮೇಲ್‌ಗೆ karunanidhi. kundi@underworld.dog ಎಂಬ ಹೆಸರಿನ ಮೇಲ್‌ನಿಂದ ಸಂದೇಶ ಬಂದಿದ್ದು, ಕೊನೆಯಲ್ಲಿ ಪಾಪೂಲರ್ ಫ್ರಂಟ್ ಆಫ್ ಇಂಡಿಯಾ, ಜೈ ಕನಿಮೊಳಿ ಎಂದು ಬರೆಯಲಾಗಿದೆ.ನ್ಯಾಯಾಲಯ సిబ్బంది ఇ-మంలో ಸಂದೇಶ ಗಮನಿಸುತ್ತಿದ್ದಂತೆ, ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ಆಗ ಕೂಡಲೇ ಆವರಣದಲ್ಲಿದ್ದ ಕಕ್ಷಿದಾರರು, ವಕೀಲರನ್ನು ಹೊರಗೆ ಕಳುಹಿಸಿ, ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಲೋಕೇಶ್ ನೇತೃತ್ವದ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಹಾಗೂ ಪೊಲೀಸ್ ಅಧಿಕಾರಿಗಳು ಆವರಣ ಮತ್ತು ಒಳಾಂಗಣದಲ್ಲಿ ಪರಿಶೀಲನೆ ನಡೆಸಿದರು. ಯಾವುದೇ ಅನುಮಾನಾಸ್ಪದ ಸ್ಫೋಟಕ ಪತ್ತೆಯಾಗದ ಹಿನ್ನೆಲೆಯಲ್ಲಿ ವಕೀಲರು, ಕಕ್ಷಿದಾರರು, ನ್ಯಾಯಾಧೀಶರು ನಿರಾಳರಾದರು. ಸದ್ಯ ನ್ಯಾಯಾಲಯ ಆವರಣದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಮೇಲ್‌ನಿಂದ ಕಳುಹಿಸಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಬೆದರಿಕೆ
ಪದೇಪದೆ ಸಂದೇಶ!
ಕೋಲಾರದ ಜಿಲ್ಲಾಡಳಿತ ಭವನಕ್ಕೆ 2 ಬಾರಿ ಹಾಗೂ ಸಾರಿಗೆ ಇಲಾಖೆ (ಆರ್‌ಟಿಒ) ಕಚೇರಿಗೆ ಬಂದಿದ್ದ ಬಾಂಬ್ ಕರೆ ಪ್ರಕರಣವು ಮಾಸುವ ಮುನ್ನವೆ, ನ್ಯಾಯಾಲಯಕ್ಕೆ ಸಂದೇಶ ಬಂದಿರುವುದು ಬೆಚ್ಚಿ ಬೀಳಿಸಿದೆ. ಬೆಳಗ್ಗೆ ಸಂದೇಶ ಬಂದಿದ್ದು, ನ್ಯಾಯಾಲಯದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಾಂಬ್ ಸ್ಫೋಟಿಸುವ ಸಂದೇಶ ಬಂದಿದೆ. ಈ ವಿಚಾರವು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಂದೆಶದಲ್ಲೇನಿದೆ...?
ತಮಿಳುನಾಡಿನ ಶಿವಗಂಗಾದ ಪೊಲೀಸ್ ಕಸ್ಟಡಿಯಲ್ಲಿ ದೇವಾಲಯವೊಂದರ ಭದ್ರತಾ ಸಿಬ್ಬಂದಿ ಅಜಿತ್ ಕುಮಾರ್ (27) ಎಂಬುವರು ಮೃತಪಟ್ಟಿದ್ದರು. ಚಿನ್ನ ಕಳವು ಆರೋಪದ ಮೇಲೆ ವಿಚಾರಣೆಗೆ ಒಳಪಡಿಸಲಾಯಿತು. ಅಲ್ಲಿ ಪೊಲೀಸರು ಅವರನ್ನು ಕ್ರೂರವಾಗಿ ಹಿಂಸಿಸಿದ್ದರು, ಮೂಲ ಕಳವು ದೂರನ್ನು ನಂತರ ಸುಳ್ಳು ಎಂದು ಪರಿಗಣಿಸಲಾಯಿತು ಮತ್ತು ಸಿಬಿಐ ತನಿಖೆ ವಹಿಸಿಕೊಂಡಿತು ಎಂದು ಬರೆದು ಹಾಕಿದ್ದಾರೆ. 5 ಮರಣದಂಡನೆ ಎದುರಿಸಿದ ಪಾಕಿಸ್ತಾನಿ ನಾಗರಿಕ ಮತ್ತು ಭಯೋತ್ಪಾದಕ ಅಜ್ಜಲ್ ಕಸಬ್‌ಗೆ ನ್ಯಾಯಯುತ ವಿಚಾರಣೆ, ಕಾನೂನು ನೆರವು, ಉತ್ತಮ ಆಹಾರ ಮತ್ತು ಸಮಾಲೋಚನೆ ನೀಡಲಾಯಿತು ಇತ್ಯಾದಿ ಬರೆದಿದ್ದು ಈ ಸ್ಫೋಟವು ಮುಂಬರುವ ವಿಷಗಳ ಸಂಕೇತವಾಗಿರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.