ಬ್ಯಾಟರಾಯನಹಳ್ಳಿಯಲ್ಲಿ Fair ಬ್ಯಾಟರಾಯಸ್ವಾಮಿ ರಥೋತ್ಸವ ನೆರವೇರಿತು. 
ಕೋಲಾರ

ಬ್ಯಾಟರಾಯಸ್ವಾಮಿ ಜಾತ್ರೆ ಸಂಪನ್ನ Fair

ಕೋಲಾರ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ದನಗಳ ಜಾತ್ರೆಯಲ್ಲಿ ಕಾಣದ ಜಾನುವಾರುಗಳು
  • ಪರಂಪರೆ ಉಳಿವಿಗೆ ಗ್ರಾಮಸ್ಥರ ಕಸರತ್ತು
ಬಂಗಾರಪೇಟೆ: ತಾಲೂಕಿನ ದೊಡ್ಡೂರು ಹರಪನಹಳ್ಳಿ ಗ್ರಾಪಂ ವ್ಯಾಪ್ತಿಯ ಬ್ಯಾಟರಾಯನಹಳ್ಳಿಯ ಬ್ಯಾಟರಾಯಸ್ವಾಮಿ ಜಾತ್ರೆ ಅಂಗವಾಗಿ ಶುಕ್ರವಾರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಈ ಭಾಗದಲ್ಲಿ ಬ್ಯಾಟರಾಯಸ್ವಾಮಿ ಜಾತ್ರೆ ಎಂದರೆ ದನಗಳ ಜಾತ್ರೆ ಎಂದೇ ಖ್ಯಾತಿಗೊಂಡಿದ್ದು,ಈ ಬಾರಿ ಸಂಪೂರ್ಣ ಕೊರತೆ ಕಂಡು ಬಂದಿತು. ಪ್ರತಿ ಬಾರಿ ಬ್ಯಾಟರಾಯಸ್ವಾಮಿ ದೇವಸ್ಥಾನದ ಜಾತ್ರೆಯ ಈ ಹಿಂದಿನ ದಿನಗಳಲ್ಲಿ ದನಗಳಿಂದ ತುಂಬಿ ತುಳುಕುತ್ತಿತ್ತು. ಕಳೆದ ಐದಾರು ವರ್ಷಗಳಿಂದ ದನಗಳು ಪಾಲ್ಗೊಳ್ಳುತ್ತಿಲ್ಲ. ಪರಂಪರೆ ಮುಗಿಯಬಾರದು ಅಂತ ದೊಡ್ಡಚಿನ್ನಹಳ್ಳಿಯವರು ಒಂದು ಜತೆ ಎತ್ತನ್ನು ಜಾತ್ರೆಯಲ್ಲಿ ಕಟ್ಟಿ ಹಾಕಿ ನೆನೆಪಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
10 ವರ್ಷಗಳ ಹಿಂದೆ ಈ ಜಾತ್ರೆಗೆ ದೂರದ ಊರುಗಳಿಂದ ತಯಾರು ಮಾಡಿ ಬೆಳೆಸಿದ್ದ ಹಲವು ತಳಿತ ಎತ್ತುಗಳನ್ನು ಕರೆತಂದು ಮಾರಾಟ ನಡೆಯುತ್ತಿತ್ತು. ಎತ್ತುಗಳನ್ನು ಖರೀದಿ ಮಾಡಲು ದೂರದ ಊರುಗಳಿಂದ ರೈತರು ಬಂದು ಮುಗಿ ಬೀಳುತ್ತಿದ್ದರು. ಒಂದು ಜತೆ ಎತ್ತು ಕನಿಷ್ಠ ಅಂದರೂ 1.50 ಲಕ್ಷಕ್ಕೂ ಮೇಲೆ ಮಾರಾಟವಾಗಿರುವ ನಿದರ್ಶನಗಳಿವೆ. ಕನಿಷ್ಠ ಅಂದರೂ ಮೂರು ದಿನಗಳು ಜಾತ್ರೆಯಲ್ಲಿ ದನಗಳು ಭಾಗವಹಿಸಿ ಒಂದಕ್ಕಿಂತ ಒಂದೊಂದು ಜೋಡಿ ಎತ್ತುಗಳನ್ನು ನೋಡಿ ಕಣ್ತುಂಬಿಸಿಕೊಳ್ಳುವುದೇ ಒಂದು ಆನಂದ ಉಂಟಾಗುತ್ತಿತ್ತು. ಆದರೆ ವರ್ಷಗಳು ಕಳೆಯುತ್ತಿದ್ದಂತೆಯೇ ಒಂದು ಜೋಡಿ ಎತ್ತು ಮಾತ್ರ ಮಾರಾಟಕ್ಕೆ ಆಗಮಿಸಿದೆ, ಉತ್ತರ ಮಾತ್ರ ಶೂನ್ಯವಾಗಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇವಸ್ಥಾನದ ದನಗಳ ಜಾತ್ರೆ ವರ್ಷದ ಕೊನೆ ಅಥವಾ ವರ್ಷದ ಪ್ರಾರಂಭ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ಇದರ ಅಂಗವಾಗಿ ಅಮಾವಾಸ್ಯೆ ದಿನದಂದು ರಥೋತ್ಸವ ಆಚರಿಸುತ್ತಾರೆ. ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಹರಿಕೆಗಳ ಈಡೇರಿಕೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡು ರಥೋತ್ಸವ ಕಣ್ತುಂಬಿಸಿಕೊಳ್ಳುತ್ತಾರೆ.
ಬೆಟ್ಟದ ಮೇಲಿನ ದೇವಸ್ಥಾನದಲ್ಲಿ ನೆಲೆಯಾಗಿರುವ ಬ್ಯಾಟರಾಯಸ್ವಾಮಿ ದೇವರಿಗೆ Fair ಸುತ್ತಮುತ್ತಲಿನ ಗ್ರಾಮಸ್ಥರಿಂದ ವಿಶೇಷ ಪೂಜೆ ನೆರವೇರಿಸುತ್ತಾರೆ. ಪ್ರತಿವರ್ಷದಂತೆ ಡಿಕೆ ಹಳ್ಳಿ ಪಂಚಾಯಿತಿಯಿಂದ ಆಗಮಿಸುವ ಜನರಿಗೆ ಕುಡಿಯಲು ನೀರು, ಊಟದ ವ್ಯವಸ್ಥೆ ಮಾಡಲಾಗಿತ್ತು.
ಒಂದೇ ಜೋಡಿ ಆಗಮನ
ಹಲವು ಎತ್ತುಗಳಿಂದ ತುಂಬಿ ತುಳುಕುತ್ತಿದ್ದ ಜಾತ್ರೆಯಲ್ಲಿ ಒಂದೇ ಒಂದು ಜೋಡಿ ಎತ್ತು ಭಾಗವಹಿಸಿದ್ದು, ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಚಿನ್ನಕೋಟೆ ಗ್ರಾಮದ ನಿವಾಸಿ ತಿರುಪತಿ ಜೋಡಿ ಎತ್ತು ಕರೆದುಕೊಂಡು ಬಂದು ಮಾರಾಟಕ್ಕೆ ಇಟ್ಟಿದ್ದರು. ದನಗಳ ಜಾತ್ರೆಯಾಗಿರುವ ಬ್ಯಾಟರಾಯಸ್ವಾಮಿ ದೇವಸ್ಥಾನ ಜಾತ್ರೆಯಲ್ಲಿ ಪರಂಪರೆ ಮುಗಿಯಬಾರದು ಎಂಬ ದೃಷ್ಟಿಯಿಂದ ಒಂದು ಜೋಡಿ ಎತ್ತನ್ನು ಮಾರಾಟಕ್ಕೆ ತಂದಿದ್ದೇನೆ. ನಮ್ಮ ಬೆಲೆಗೆ ಬಂದಲ್ಲಿ ಮಾರಾಟ ಮಾಡಲಾಗುವುದು ಎಂದು ತಿರುಪತಿ ತಿಳಿಸಿದರು.