ಕೋಲಾರ ನಗರದಲ್ಲಿ ಪ್ರಥಮ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಪುತ್ಥಳಿಯನ್ನು ಅನಾವರಣ ಮಾಡಬೇಕು ಎಂದು ಒತ್ತಾಯಿಸಿ ರೆಡ್ಡಿ ಸಮುದಾಯದ ಮುಖಂಡರು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಮನವಿ ಸಲ್ಲಿಸಿದರು. ಕೆ.ವೈ.ನಂಜೇಗೌಡ, ಕೊತ್ತೂರು ಜಿ.ಮಂಜುಥ್, ಎಂ.ಎಲ್.ಅನಿಲ್ ಕುಮಾರ್, ಕೃಷ್ಣಾರೆಡ್ಡಿ ಇದ್ದರು.
ಕೋಲಾರ: ರಾಜ್ಯ ಪ್ರಥಮ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಪುತ್ಥಳಿಯನ್ನು ನಗರದಲ್ಲಿ ನಿರ್ಮಾಣ ಮಾಡಬೇಕು ಅನಾವರಣ ಮಾಡಬೇಕು ಎಂದು ಒತ್ತಾಯಿಸಿ, ರೆಡ್ಡಿ ಸಮುದಾಯದ ಮುಖಂಡರು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಮನವಿ ಸಲ್ಲಿಸಿದರು.
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ವಿಧಾನ ಸೌಧದ ಎದುರು ಕೆಂಕಲ್ ಹನುಮಂತಯ್ಯ, ಕೆ.ಸಿ.ರೆಡ್ಡಿ ಅವರ ಪುತ್ಥಳಿಯಿದೆ. ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರಾಗಿದ್ದು, ಪ್ರತಿ ಭಾಷಣದಲ್ಲೂ ಅವರ ಹೆಸರು ನೆನಪಿಸಿಕೊಳ್ಳುತ್ತೇವೆ. ಇಷ್ಟು ದಶಕಗಳು ಕಳೆದರು ಪುತ್ಥಳಿ ನಿರ್ಮಾಣ ಮಾಡಿಲ್ಲ. ಅದು ಈಗ ಆಗಬೇಕು ಎಂದು ಕೋರಿದಿರು.
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ಕೆ.ಸಿ.ರೆಡ್ಡಿ ಅವರು ಹುಟ್ಟಿದ್ದು ಇಲ್ಲೆ, ರಾಜಕೀಯ ಇಲ್ಲಿಂದಲೇ ಶುರು ಮಾಡಿ ಇಲ್ಲೆ ಅಂತ್ಯಗೊಳಿಸಿದ್ದಾರೆ. ನಮ್ಮ ಜಿಲ್ಲೆಯವರೆ ಆಗಿರುವುದರಿಂದ ಪುತ್ಥಳಿ ನಿರ್ಮಾಣ ಮಾಡುವ ಮೂಲಕ ಅವರ ಸಾಧನೆಯನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ರಾಜ್ಯದ ಪ್ರಥಮ ಮುಖ್ಯಮಂತ್ರಿ ಆಗಿದ್ದು ಕೆ.ಸಿ.ರೆಡ್ಡಿ ಅವರು ಜಿಲ್ಲೆಯ ಕೆಜಿಎ್ ತಾಲೂಕಿನ ಕ್ಯಾಸಂಬಳಿ ಗ್ರಾಮದವರಾಗಿದ್ದಾರೆ. ಸ್ವಾತಂತ್ರ$್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಯಕರಾಗಿದ್ದರು ಎಂದು ಹೇಳಿದರು.
ಮೈಸೂರು ಮಹಾ ರಾಜರ ಕಾಲದಲ್ಲಿ ಪ್ರಥಮ ಮುಖ್ಯಮಂತ್ರಿಯಾಗಿದ್ದರು, ಆನಂತರ ಲೋಕಸಭಾ ಸದಸ್ಯರಾಗಿ ವಾಣಿಜ್ಯ ಮತ್ತು ಕೈಗಾರಿಕೆ, ವಸತಿ ಮತ್ತು ಸರಬರಾಜು ಸಚಿವರಾಗಿದ್ದರು,
ಮಧ್ಯಪ್ರದೇಶದ ರಾಜ್ಯಪಾಲಾರಿದ್ದರು, ಕೆಜಿಎ್ ಬಿಜಿಎಂಲ್ ಸ್ಥಾಪನೆಗೆ ಪ್ರಮುಖ ಕಾರಣರಾಗಿದ್ದಾರೆ. ದೇಶ, ರಾಜ್ಯ, ಜಿಲ್ಲೆಯ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಅದ್ದರಿಂದ ಅವರ ಪುತ್ಥಳಿಯನ್ನು ಅನಾವರಣ ಮಾಡಬೇಕು ಎಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಲಾಗುವುದು, ಅಲ್ಲಿಂದ ಅನುಮೋದನೆಯಾಗಿ ಬಂದ ಕೂಡಲೇ ಪುತ್ಥಳಿ ನಿರ್ಮಾಣಕ್ಕೆ ಕ್ರಮವಹಿಸಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಟ್ಟಕೋಡಿ ಕೃಷ್ಣಾರೆಡ್ಡಿ, ಮಂಜುನಾಥ್ ರೆಡ್ಡಿ, ಹರೀಶ್ ಮತಿತರರು ಉಪಸ್ಥಿತರಿದ್ದರು.