ಕೋಲಾರ: ನರೇಗಾ ಅಭಿವೃದ್ಧಿ ಕಾಮಗಾರಿಗೆ ಬಿಲ್ ಮಾಡುವ ಸಂಬಂಧ ಗುತ್ತಿಗೆದಾರನಿಂದ ಲಂಚ ಸ್ವೀಕರಿಸುವಾಗ ಮುಳಬಾಗಿಲು ನರೇಗಾ ಇಂಜನಿಯರ್ ಕೃಷ್ಣಪ್ಪ ಮಂಗಳವಾರ ಲೋಕಾಯುಕ್ತ ಬಲೆಗೆ ಸಿಕ್ಕಿಬಿದಿದ್ದಾನೆ.
ಕಾಮಗಾರಿ ಬಾಕಿ ಬಿಲ್ ಬಿಡುಗಡೆ ಮಾಡಲು ಗುತ್ತಿಗೆದಾರನಿಗೆ 4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು, ಅದರಂತೆ ಗುತ್ತಿಗೆದಾರ ಕೃಷ್ಣಮೂರ್ತಿ ಮಂಗಳವಾರ ಇಂಜನಿಯರ್ ಕೃಷ್ಣಪ್ಪ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
ಅಧಿಕಾರಿಗಳ ಸಭೆಯಲ್ಲಿ ಇದ್ದ ಇಂಜನಿಯರ್ ಕೃಷ್ಣಪ್ಪ ಜಿ.ಪಂ ಸಹಾಯಕ ಸಿಬ್ಬಮದಿ ಮಹಮದ್ ಅಲೀಲ್ ಉಲ್ಲಾ ಕರೆ ಮಾಡಿ ಹಣ ತೆಗೆದು ಇಟ್ಟುಕೊಂಡು ಇರು, ಸಭೆ ನಂತರ ತೆಗೆದುಕೊಳ್ಳುವುದಾಗಿ ಹೇಳಿದ್ದು, ಅದರಂತೆ ಆಲಿ 2 ಲಕ್ಷ ರೂ. ಸ್ವೀಕರಿಸುವ ಸಮಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದಕ್ಕೆ ಕಾರಣವಾಗಿರುವ ಎಂಜನಿಯರ್ ಕೃಷ್ಣಪ್ಪ, ಸಹಾಯ ಮಾಡಿದ ಆಲಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಅಂಟೋನಿ ಜಾನ್ ಮಾರ್ಗದರ್ಶನದ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು ಗ್ರಾಮದ ಸಮೀಪದ ಕಾಲುವೆ ನಿರ್ಮಾಣವನ್ನು ನರೇಗಾ ಯೋಜನೆಯಡಿ 2023&24ನೇ ಸಾಲಿನಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಸದರಿ ಕಾಮಗಾರಿಗೆ ಕೂಲಿ 6.11 ಲಕ್ಷ, ಸಾಮಾಗ್ರಿ 32.6 ಲಕ್ಷ ಸೇರಿ ಒಟ್ಟು 99.3 ಲಕ್ಷ ಬಿಲ್ ಆಗಿದೆ. ಈ ಸಂಬಂಧ ಅಂದಾಜು ಪಟ್ಟಿ ತಯಾರಿಸಿ ಜಿ.ಪಂನಿಂದ ಅನುಮೋದನೆ ಸಹ ಪಡೆದು ಕೆಲವನ್ನು ಪೂರ್ಣಗೊಳಿಸಲಾಗಿದೆ. ಆದರೆ ಅಂದಿನಿಂದ ಇಲ್ಲಿಯವರೆಗೂ ಇಂಜನಿಯರ್ ಕೃಷ್ಣಪ್ಪ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡಲು ಸತ್ತಾಯಿಸುತ್ತಿದ್ದರು.